ಜ್ಯೋತಿ ಸಂಜೀವಿನಿ

ಇದೇ 20 ರಿಂದ ಅಂದರೆ, ಮಂಗಳವಾರದಿಂದ ರಾಜ್ಯದಲ್ಲಿರುವ ಎಪಿಎಲ್ ಕಾರ್ಡುದಾರರಿಗೆ ರಾಜೀವ್ ಆರೋಗ್ಯ ಭಾಗ್ಯ ಮತ್ತು ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಅನ್ವಯ...
ಆರೋಗ್ಯ ಸಚಿವ ಯು.ಟಿ.ಖಾದರ್
ಆರೋಗ್ಯ ಸಚಿವ ಯು.ಟಿ.ಖಾದರ್

ಕನ್ನಡಪ್ರಭ ವಾರ್ತೆ, ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರು ಮತ್ತು ಎಪಿಎಲ್ ಕಾರ್ಡುದಾರರಿಗೆ ಸರ್ಕಾರದಿಂದ ಸಂಕ್ರಾಂತಿ ನಂತರದ ಎಳ್ಳು ಬೆಲ್ಲದ ಸವಿ.

ಇದೇ 20 ರಿಂದ ಅಂದರೆ, ಮಂಗಳವಾರದಿಂದ ರಾಜ್ಯದಲ್ಲಿರುವ ಎಪಿಎಲ್ ಕಾರ್ಡುದಾರರಿಗೆ ರಾಜೀವ್ ಆರೋಗ್ಯ ಭಾಗ್ಯ ಮತ್ತು ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಅನ್ವಯ ಚಿಕಿತ್ಸೆ ನೀಡುವ ಕಾರ್ಯಕ್ರಮವನ್ನು ಸರ್ಕಾರ ಆರಂಭಿಸಲಿದೆ.

ಇದರಿಂದಾಗಿ ಎಪಿಎಲ್ ಕಾರ್ಡುದಾರರಿಗೆ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರ ಪಿಂಡದ ಕಾಯಿಲೆ, ಸುಟ್ಟಗಾಯ, ಅಪಘಾತ ಸೇರಿದಂತೆ 449 ಬಗೆಯ ಚಿಕಿತ್ಸೆಯನ್ನು 110 ಆಸ್ಪತ್ರೆಗಳಲ್ಲಿ ನೀಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೇಗೆ ಚಿಕಿತ್ಸೆ?

ಸಂಜೀವಿನಿಗಾಗಿ ಆಯಾ ಇಲಾಖೆಯ ಗುರುತಿನ ಚೀಟಿ ನೀಡಬೇಕು.
ಎಪಿಎಲ್, ಬಿಪಿಎಲ್ ಚೀಟಿದಾರರು ಕಾರ್ಡುಗಳನ್ನು ತೋರಿಸಿದರೆ ಸಾಕು.
ರಾಜೀವ್ ಆರೋಗ್ಯ ಯೋಜನೆಯಲ್ಲಿ ಗರಿಷ್ಠ ರು.1.5 ಲಕ್ಷ ನೀಡಲಾಗುವುದು.
ಜ್ಯೋತಿ ಸಂಜೀವಿನಿಯಲ್ಲಿ ಚಿಕಿತ್ಸೆ ಪಡೆಯುವವರಿಗೆ ನಿರ್ದಿಷ್ಟ ಮಿತಿ ಇಲ್ಲ.

ವೈದ್ಯರ ನೇಮಕ
ಸರ್ಕಾರಿ ಆಸ್ಪತ್ರೆಗಳಿಗೆ ತಜ್ಞ ವೈದ್ಯರು, ಎಂಬಿಬಿಎಸ್ ವೈದ್ಯರು, ದಂತ ವೈದ್ಯರು, 1200 ದಾದಿಯರು ಸೇರಿ 3 ಸಾವಿರಕ್ಕೂ ಹೆಚ್ಚು ಮಂದಿ ನೇಮಕ ಮಾಡಿಕೊಳ್ಳಲಾಗುವುದು. ಈ ಎಲ್ಲ ಆರೋಗ್ಯ ಸೇವೆಗಳ ವಿವರವನ್ನು ಒಳಗೊಂಡ ಆ್ಯಪ್‌ನ್ನು ಸದ್ಯದಲ್ಲೇ ಬಿಡುಗಡೆಗೊಳಿಸಲಾಗವುದು ಎಂದು ತಿಳಿಸಿದರು.

ಎಪಿಎಲ್ ಪಡಿತರ ಚೀಟಿದಾರರಿಗೆ 110 ಆಸ್ಪತ್ರೆಗಳಲ್ಲಿ 449 ಬಗೆಯ ಚಿಕಿತ್ಸೆ
ಸರ್ಕಾರಿ ನೌಕರರಿಗೆ 124 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ
ಎಲ್ಲರಿಗೂ ಆರೋಗ್ಯ ಸೌಲಭ್ಯ ಒದಗಿಸಿದ ಪ್ರಪ್ರಥಮ ರಾಜ್ಯ ಕರ್ನಾಟಕ

124 ಆಸ್ಪತ್ರೆಗಳಲ್ಲಿ ಚಿಕಿತ್ಸೆ
ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ನಿಗದಿತ 124 ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ನೌಕರರಿಗೆ ಚಿಕಿತ್ಸೆ
ಎಪಿಎಲ್ ಕಾರ್ಡುದಾರರು ಚಿಕಿತ್ಸೆಗೆ ಪ್ರತಿಯಾಗಿ ಶೇ.30ರಷ್ಟು ಹಣ ಭರಿಸಬೇಕು. ಸರ್ಕಾರ ಶೇ.70ರಷ್ಟು ಹಣ ಭರಿಸುತ್ತದೆ.
ಅರೆ ವಿಶೇಷ ಹಾಗೂ ವಿಶೇಷ ವಾರ್ಡುಗಳಲ್ಲಿನ ಚಿಕಿತ್ಸೆಗೆ ಶೇ.50ರಷ್ಟು ಹಣ ಪಾವತಿಸಬೇಕು. ಉಳಿದದ್ದು ಸರ್ಕಾರ ಭರಿಸುತ್ತದೆ.

ಮೊದಲ ರಾಜ್ಯ ಕರ್ನಾಟಕ

ಸರ್ಕಾರಿ ನೌಕರರು, ಎಪಿಎಲ್, ಬಿಪಿಎಲ್ ಕಾರ್ಡುದಾರರು ಸೇರಿ ಎಲ್ಲಿರಿಗೂ ಆರೋಗ್ಯ ಭಾಗ್ಯ ನೀಡಿದ ಮೊದಲ ರಾಜ್ಯ ಕರ್ನಾಟಕ!
ಪೊಲೀಸ್ ಇಲಾಖೆ ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳ ನೌಕರರಿಗೂ ಜ್ಯೋತಿ ಸಂಜೀವಿನಿಯ ಸವಲತ್ತು
ರು.350 ಕೋಟಿ ವೆಚ್ಚ
ಮೂರೂ ಯೋಜನೆಗಳಿಂದ ಸರ್ಕಾರಕ್ಕೆ ವಾರ್ಷಿಕ ರು.350 ಕೋಟಿ ವೆಚ್ಚವಾಗುತ್ತದೆ. ಯಾವುದೇ ಕಾರಣಕ್ಕೂ ಇಂತಹ ಯೋಜನೆಗಳಿಗೆ ಆರೋಗ್ಯ ವಿಮಾ ಕಂಪನಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com