ರಕ್ತ ಚಂದನ ಅಕ್ರಮ ದಂಧೆ: ನಾಲ್ವರು ಚೀನೀಯರ ಸೆರೆ

ರಕ್ತ ಚಂದನ ಅಕ್ರಮ ದಾಸ್ತಾನು, ಪೀಠೋಪಕರಣಗಳ ತಯಾರಿ ಹಾಗೂ ಅವುಗಳ ಸಾಗಣೆಯಲ್ಲಿ ತೊಡಗಿದ್ದ ಚೀನಾ..
ರಕ್ತ ಚಂದನ ಅಕ್ರಮ  ಸಾಗಣೆಯಲ್ಲಿ ತೊಡಗಿದ್ದ ಚೀನಾದ ಪ್ರಜೆಗಳು (ಸಂಗ್ರಹ ಚಿತ್ರ)
ರಕ್ತ ಚಂದನ ಅಕ್ರಮ ಸಾಗಣೆಯಲ್ಲಿ ತೊಡಗಿದ್ದ ಚೀನಾದ ಪ್ರಜೆಗಳು (ಸಂಗ್ರಹ ಚಿತ್ರ)

ಬೆಂಗಳೂರು: ರಕ್ತ ಚಂದನ ಅಕ್ರಮ ದಾಸ್ತಾನು, ಪೀಠೋಪಕರಣಗಳ ತಯಾರಿ ಹಾಗೂ ಅವುಗಳ ಸಾಗಣೆಯಲ್ಲಿ ತೊಡಗಿದ್ದ ಚೀನಾದ ನಾಲ್ವರು ಪ್ರಜೆಗಳನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂದಿಸಿ 6 ಟನ್ ರಕ್ತ ಚಂದನ ವಶಪಡಿಸಿಕೊಂಡಿದ್ದಾರೆ.

ಚೀನಾದ ತಾನ್ ಜಿ ಶೋಯ್(51), ಟೋಲ್ ಶೋಯ್ ಯುನ್(45), ಸರ್ ಯಿ ಶಯ್(25) ಹಾಗೂ ವಿಯ್ಲಿಅಂಗ್(27) ಬಂಧಿತರು. ಪ್ರಕರಣಕ್ಕೆ ಸಂಬಂದಿಸಿದಂತೆ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಸೂಲಿಬೆಲೆ ಠಾಣೆ ಎಸ್ಪಿ ಪಿ.ಎನ್.ನವೀನ್ ಹಾಗೂ ಹೆಡ್ ಕಾನ್ಸ್‍ಟೇಬಲ್ ಕೃಷ್ಣಪ್ಪ ಎಂಬುವರನ್ನು ಅಮಾನತು ಮಾಡಲಾಗಿದೆ. ಆರೋಪಿಗಳು ಎರಡು ತಿಂಗಳ ಹಿಂದೆ ಉದ್ಯೋಗ ವೀಸಾ ಮೇಲೆ ಬೆಂಗಳೂರಿಗೆ ಬಂದಿದ್ದರು. ನಗರ ಹೊರವಲಯದ  ಸೂಲಿಬೆಲೆ ಸಮೀಪದ ಪಿಳ್ಳಗುಂಪ ಕೈಗಾರಿಕಾ ಪ್ರದೇಶದಲ್ಲಿ ಒಂದು ಶೆಡ್‍ನಲ್ಲಿ ಅಕ್ರಮವಾಗಿ ರಕ್ತ ಚಂದನ ಸಂಗ್ರಹಿಸಿಟ್ಟುಕೊಂಡು ವಿವಿಧ ಪೀಠೋಪಕರಣ ತಯಾರಿಸುತ್ತಿದ್ದರು.

ಬಳಿಕ ಇಲ್ಲಿಂದಲೇ ತುಮಕೂರು, ಬೆಳಗಾವಿ  ಮಾರ್ಗವಾಗಿ ಮುಂಬೈಗೆ ಕೊಂಡೊಯ್ದು ಅಲ್ಲಿಂದ ಚೀನಾ ಹಾಗೂ ಜಪಾನ್ ಗೆ ಹಡಗುಗಳ ಮೂಲಕ ಸಾಗಿಸುತ್ತಿದ್ದರು.  ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಬಿsನ್ನವಾಗಿರುತ್ತದೆ.ಅಲ್ಲದೇ ಅಳಿವಿನ ಅಂಚಿನಲ್ಲಿರುವ ಸಸ್ಯಗಳಿಗೆ ಬೆಲೆ ಕಟ್ಟಲಾಗದು ಎಂದು ಕೇಂದ್ರ ವಲಯ ಐಜಿಪಿ ಅರುಣ್ ಚಕ್ರವರ್ತಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ವರ ಪೈಕಿ ಒಬ್ಬ ಭಾರತಕ್ಕೆ ಹಲವು ಬಾರಿ ಬಂದು ಹೋಗಿದ್ದಾನೆ. ಮತ್ತೊಬ್ಬ ವ್ಯಕ್ತಿ ಮೊದಲ ಬಾರಿ ಭಾರತಕ್ಕೆ ಬಂದಿದ್ದಾನೆ. ಉಳಿದ ಇಬ್ಬರು ಆಗಾಗ ಬಂದು ಹೋಗುತ್ತಿದ್ದರು. ಎಷ್ಟು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿದ್ದರು ಎನ್ನುವ ಮಾಹಿತಿ ಇಲ್ಲ ಎಂದರು.

ಕೈಗಾರಿಕಾ ಪ್ರದೇಶದಲ್ಲಿರುವ ಜಾಗ ರಾಮಾಚಾರಿ ಎಂಬಾತನಿಗೆ ಸೇರಿದ್ದು ಅದನ್ನು ರಫೀಕ್ ಎಂಬಾತನಿಗೆ ತಿಂಗಳಿಗೆ <38 ಸಾವಿರ ಬಾಡಿಗೆಗೆ ನೀಡಲಾಗಿತ್ತು. ತಾನು ಕಾರ್ಪೆಂಟರ್ ಹಾಗೂ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿರುವುದಾಗಿ ರಫೀಕ್ ಹೇಳಿದ್ದಾನೆ.

ಪೀಠೋಪಕರಣ ತಯಾರಿ:
ಆಂಧ್ರಪ್ರದೇಶದ ಕಾಡಿನಿಂದ ಕಳ್ಳಸಾಗಣೆ ಆಗುತ್ತಿದ್ದ ರಕ್ತಚಂದನ ಪಿಳ್ಳಗುಂಪ ಕೈಗಾರಿಕಾ ಪ್ರದೇಶಕ್ಕೆ ಬರುತ್ತಿತ್ತು. ಅಲ್ಲಿ ಚೀನಾ ನಾಗರಿಕರು ಹಾಗೂ ಸಂಗೀತ ಸಾಧನಗಳು ಮತ್ತು ಪೀಠೋಪಕರಣಗಳನ್ನು ತಯಾರಿಸುತ್ತಿದ್ದರು. ಚೀನಾ ರಾಯಭಾರ ಕಚೇರಿಗೆ ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ನೀಡಲಾಗಿದೆ. ಎಷ್ಟು ವರ್ಷಗಳಿಂದ ಅಕ್ರಮ ದಲ್ಲಿ ತೊಡಗಿದ್ದರು ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಎಸ್ಪಿ  ರಮೇಶ್ ತಿಳಿಸಿದರು.

ರಕ್ತಚಂದನ ಮರಗಳ ಕಳ್ಳಸಾಗಣೆ ತಡೆಗೆ ವನ್ಯಜೀವಿ ಅಪರಾಧ ತಡೆ ಘಟಕ, ಅರಣ್ಯ ಇಲಾಖೆ ಸೇರಿದಂತೆ ಪ್ರಮುಖ ಸಂಸ್ಥೆಗಳೊಂದಿಗೆ ಸಂಪರ್ಕ ಸಾ„ಸಲಾಗುವುದು. ಭವಿಷ್ಯದಲ್ಲಿ ಅಕ್ರಮ ಸಾಗಣೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು.
-ಅರುಣ್ ಚಕ್ರವರ್ತಿ,
ಐಜಿಪಿ, ಕೇಂದ್ರ ವಲಯ

ಅಕ್ರಮಕ್ಕೆ ಪೊಲೀಸರ ಸಾಥ್!

ಅಕ್ರಮ ನಡೆಯುತ್ತಿದೆ ಎನ್ನುವ ಮಾಹಿತಿ ಇದ್ದರೂ ಅದನ್ನು ತಡೆಯದೇ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಸೂಲಿಬೆಲೆ ಅಪರಾಧ ಎಸ್ಸೈ ನವೀನ್ ಹಾಗೂ ಹೆಡ್ ಕಾನ್ಸ್‍ಟೇಬಲ್ ಕೃಷ್ಣಪ್ಪ ಅವರನ್ನು ಅಮಾನತು ಮಾಡಲಾಗಿದೆ. ಇವರಿಬ್ಬರು ಅಕ್ರಮದಲ್ಲಿ ತೊಡಗಿದ್ದವರಿಂದ ಹಣ ಪಡೆದು ಯಾವುದೇ ಕ್ರಮ ಜರುಗಿಸದೆ ಇದ್ದರು. ಇದರಿಂದಾಗಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಅಕ್ರಮಕ್ಕೆ ಬ್ರೇಕ್ ಬಿದ್ದಿಲ್ಲ ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com