ಸಾವಿರ ಕೋಟಿ ಸಾಲದ ಭಾಗ್ಯ!

ಭಾಗ್ಯ ಸರಣಿ ಯೋಜನೆಗಾಗಿ ಕೋಟ್ಯಂತರ ರು. ವ್ಯಯಿಸುತ್ತಿರುವ ರಾಜ್ಯ ಸರ್ಕಾರ, ಗೋದಾಮು ನಿರ್ಮಾಣಕ್ಕೆ ಮಾತ್ರ ನಬಾರ್ಡ್‍ನಿಂದ...
ವಿಧಾನಸೌಧ
ವಿಧಾನಸೌಧ

ಬೆಂಗಳೂರು: ಭಾಗ್ಯ ಸರಣಿ ಯೋಜನೆಗಾಗಿ ಕೋಟ್ಯಂತರ ರು. ವ್ಯಯಿಸುತ್ತಿರುವ ರಾಜ್ಯ ಸರ್ಕಾರ, ಗೋದಾಮು ನಿರ್ಮಾಣಕ್ಕೆ ಮಾತ್ರ ನಬಾರ್ಡ್‍ನಿಂದ ರು 1,000 ಕೋಟಿ ಸಾಲ ಎತ್ತಲು ಮುಂದಾಗಿದೆ!
ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ದಾಸ್ತಾನು ಕೇಂದ್ರಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ.
ಹೀಗಾಗಿ ಸಾಮರ್ಥ್ಯದಷ್ಟು ಸಂಗ್ರಹಣೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗೋದಾಮು ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಅಗತ್ಯ ಧನ ಸಹಾಯವನ್ನು
ನಬಾರ್ಡ್‍ನಿಂದ ಸಾಲ ರೂಪದಲ್ಲಿ ಪಡೆಯುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ.
ಜತೆಗೆ ಪ್ರತಿ ಹೋಬಳಿಯ ನಾಡಕಚೇರಿಯಲ್ಲಿ ಪಡಸಾಲೆ  ಯೋಜನೆ ಮತ್ತು 1.5 ಲಕ್ಷ ಫಲಾನುಭವಿಗಳಿಗೆ ಗೌರವ ಯೋಜನೆಯಲ್ಲಿ ಸ್ನಾನಗೃಹ ನಿರ್ಮಿಸುವ ಇನ್ನಷ್ಟು `ಭಾಗ್ಯಸರಣಿ' ಯೋಜನೆಗೂ ಅನುಮತಿ ನೀಡಲಾಗಿದೆ. ಮಾತ್ರವಲ್ಲ ಕೇಂದ್ರ ಹಣಕಾಸು ಆಯೋಗ ರಾಜ್ಯಕ್ಕೆ ನೀಡುವ ಅನುದಾನದಲ್ಲಿನ ಕೆಲ ಭಾಗವನ್ನು ಗ್ರಾಮ ಪಂಚಾಯಿತಿಗಳು ಬೆಸ್ಕಾಂಗಳಿಗೆ ನೀಡಬೇಕಿದ್ದ ರು. 3236,16 ಕೋಟಿ ವಿದ್ಯುತ್ ಬಿಲ್ ಪಾವತಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಪ್ರಮುಖ ನಿರ್ಧಾರಗಳು ಹೀಗಿವೆ...

  • ಗೋದಾಮು ನಿರ್ಮಾಣಕ್ಕಾಗಿ ನಬಾರ್ಡಿನಿಂದ ಸಾಲ ಪಡೆಯಲು ನಿರ್ಧಾರ. ರು1000 ಕೋಟಿಗೆ ಅರ್ಜಿ ಸಲ್ಲಿಕೆ. ಮೊದಲ ಹಂತದಲ್ಲಿ
  • ರು. 685 ಕೋಟಿ ಸಾಲ ನೀಡಲು ನಬಾರ್ಡಿನಿಂದ ಒಪ್ಪಿಗೆ. ರಾಜ್ಯದಲ್ಲಿ 65 ಲಕ್ಷ ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಸಂಗ್ರಹ ಸಾಧ್ಯ.
  • ಆದರೆ 30.38 ಲಕ್ಷ ಮೆಟ್ರಿಕ್ ಟನ್ ಮಾತ್ರ  ದಾಸ್ತಾನು ಮಾಡಲಾಗುತ್ತಿದೆ. ಹೀಗಾಗಿ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಗೋದಾಮು ನಿರ್ಮಾಣ ಕ್ಕಾಗಿ ಸಾಲ ಕೇಳಲಾಗುತ್ತಿದೆ. ಕೃಷಿ ಸಹಕಾರ ಮಹಾಮಂಡಳ, ಭಾರತ ಆಹಾರ ನಿಗಮ ಮೊದಲಾದ ಸಂಸ್ಥೆಗಳಿಂದ ನಿರ್ಮಾಣ ಸಹಕಾರ ಪಡೆಯಲಾಗುತ್ತದೆ.
  •  ರಾಜ್ಯದ ಗ್ರಾಮ ಪಂಚಾಯಿತಿಗಳು ಹಲವಾರು ವರ್ಷಗಳಿಂದ ರು. 3,235.16 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಇವುಗಳನ್ನು ಪಾವತಿ ಮಾಡುವಂತೆ ಎಲ್ಲ ವಿದ್ಯುತ್ ಪೂರೈಕೆ ನಿಗಮಗಳು ಸರ್ಕಾರಕ್ಕೆ ಹಲವು ಬಾರಿ ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಬಿಲ್ ಪಾವತಿಗೆ ಸರ್ಕಾರ ನಿರ್ಧರಿಸಿದೆ. ಆದರೆ ಇದಕ್ಕಾಗಿ ಕೇಂದ್ರ ಹಣಕಾಸು ಆಯೋಗ ನೀರಾವರಿ ಅಭಿವೃದ್ಧಿ ಗಾಗಿ  ಕೊಟ್ಟ ಅನುದಾನವನ್ನು ಬಳಕೆ ಮಾಡಲಾಗುತ್ತದೆ.
  •  2014-15ನೇ ಸಾಲಿನ ಬಜೆಟ್‍ನಲ್ಲಿ ಪ್ರಸ್ತಾಪಿತ ಗೌರವ ಯೋಜನೆಯಲ್ಲಿ ರಾಜ್ಯದ 97 ಸಾವಿರ ಸಾಮಾನ್ಯ  ವರ್ಗದಕುಟುಂಬ ಮತ್ತು 52,500 ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಕ್ಕೆ ಶೌಚಾಲಯದ ಜತೆಗೆ ಸ್ನಾನಗೃಹ ನಿರ್ಮಿಸಿಕೊಡುವ
  • ಯೋಜನೆಗೆ ಒಪ್ಪಿಗೆ. ಇದಕ್ಕಾಗಿ ರಾಜ್ಯ ಸರ್ಕಾರ ರು..12,000, ಶಾಸಕರ ನಿಧಿಯಿಂದ ರು 6,000 ಮತ್ತು ಫಲಾನುಭವಿಗಳು ರು 2,000ನೀಡಬೇಕು. ಒಟ್ಟು ರು  20,000 ವೆಚ್ಚದಲ್ಲಿ ಬಚ್ಚಲನ್ನು ನಿರ್ಮಿಸಿಕೊಡಲಾಗುತ್ತದೆ.
  •  ರಾಜ್ಯದ ಪ್ರತಿ ಹೋಬಳಿ ಕೇಂದ್ರದಲ್ಲಿ ರು  16 ಕೋಟಿ ವೆಚ್ಚದಲ್ಲಿ ಪಡಸಾಲೆ ಯೋಜನೆ ಜಾರಿಗೆ ತರಲು ನಿರ್ಧಾರ. ಪಹಣಿ, ಹಕ್ಕುಪತ್ರ ವಿತರಣೆ ಸೇರಿದಂತೆ ನಾಡಕಚೇರಿಗಳಲ್ಲಿ ಇನ್ನಷ್ಟು ಸೌಲಭ್ಯ ಒದಗಿಸಲು ಹೊಸ ಕೌಂಟರ್ ಸ್ಥಾಪಿಸಲಾಗುತ್ತದೆ.
  • ಹೇಮಾವತಿ  ಎಡದಂಡೆ ಕಾಲುವೆಯ ಶೂನ್ಯದಿಂದ 72 ಕಿಮೀವರೆಗಿನ ಪ್ರದೇಶದ ನಾಲೆಗಳ ಅಗಲೀಕರಣಕ್ಕೆ ರು 562.30ಕೋಟಿ ನಿಗದಿ. ನಾಲೆ ಅಗಲೀಕರಣದಿಂದ
  • 25 ಟಿಎಂಸಿ ನೀರು ಹೆಚ್ಚುವರಿಯಾಗಿ  ಲಭ್ಯವಾಗಲಿದ್ದು, ಹಾಸನ, ತುಮಕೂರುಮತ್ತು ಮಂಡ್ಯ ಭಾಗದ 5.97 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವಿಸ್ತರಣೆಯಾಗಲಿದೆ.
  • ತಾರಕ ಬಲದಂಡಾ ನಾಲಾ ಆಧುನೀಕರಣಕ್ಕೆ ರು 8.28 ಕೋಟಿ ನಿಗದಿ.
  • ಮೈಸೂರಿನ ಜೈಪುರದಲ್ಲಿ ಮೈಸೂರು ಅಭಿವೃದ್ಧಿ  ಪ್ರಾಧಿಕಾರದಿಂದ 484 ಎಕರೆ ಪ್ರದೇಶದಲ್ಲಿ ರು. 258 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೊಸ ಬಡಾವಣೆಗೆ ಆಡಳಿತಾತ್ಮಕ ಒಪ್ಪಿಗೆ.
  • ಫೆಬ್ರವರಿ 2ರಿಂದ 13ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ನಡೆಸುವುದಕ್ಕೆ ಒಪ್ಪಿಗೆ.
  • ಪಂಚಾಯತ್ ರಾಜ್ ವ್ಯವಸ್ಥೆ ಸುಧಾರಣೆಗಾಗಿ ಶಾಸಕ ರಮೇಶ್‍ಕುಮಾರ್ ಅಧ್ಯಕ್ಷತೆಯ ಸಮಿತಿ ನೀಡಿದ ಶಿಫಾರಸುಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಲು ಸಚಿವ ಸಂಪುಟ ಉಪಸಮಿತಿ ರಚನೆ.
  •  ಚಿಕ್ಕಬಳ್ಳಾಪುರದ ಜಂಗಮನಕೋಟೆಯಲ್ಲಿ ಇಂಡೋ-ಟಿಬಿಎಟಿಯನ್ ಗಡಿ ಭದ್ರತಾ ಪಡೆ ತರಬೇತಿ ಕೇಂದ್ರಕ್ಕಾಗಿ 26 ಎಕರೆ ಗೋಮಾಳ ಜಾಗ ನೀಡಲು ನಿರ್ಧಾರ.
  •  ರಾಜ್ಯದ 14 ಜಿಲ್ಲಾ ವ್ಯಾಪ್ತಿಯ 26 ಕಡೆಗಳಲ್ಲಿ ಹೊಸ ಐಟಿಐ ನಿರ್ಮಾಣಕ್ಕೆ ಒಪ್ಪಿಗೆ. ಇದಕ್ಕಾಗಿ ರು. 80 ಕೋಟಿ ಬಳಕೆ.
  •  ಭದ್ರಾ ವನ್ಯಜೀವಿ ವಿಭಾಗದಲ್ಲಿ 1996ರಲ್ಲಿ ನಡೆದ ಅವ್ಯವಹಾರದ ಬಗ್ಗೆ ಲೋಕಾಯುಕ್ತ ಸಂಸ್ಥೆ ನೀಡಿದ್ದ ವರದಿ ಆಧರಿಸಿ ಕ್ರಮಕ್ಕೆ ನಿರ್ಧಾರ. ಆದರೆ ಅವ್ಯವಹಾರದಲ್ಲಿ ಭಾಗಿಯಾದ ಹಲವರು ನಿವೃತ್ತರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಆದರೂ ಸರ್ಕಾರದಿಂದ ಕ್ರಮಕ್ಕೆ ನಿರ್ಧಾರ.
ಗುಜರಾತ್ ಅಧಿಕಾರಿಗಳನ್ನೇ ನೀಡಲು ಅಸ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com