
ಬೆಂಗಳೂರು: ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ವಾದ ಮಂಡಿಸುವ ಹಾಗೂ ಅರ್ಜಿ ಸಲ್ಲಿಸುವ ವಕೀಲರಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗೌರವಿಸಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್.ಹನುಮಂತಯ್ಯ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಕನ್ನಡದಲ್ಲಿ ಆದೇಶ ಬರೆಯುತ್ತಿರುವ 285 ನ್ಯಾಯಾಧೀಶರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಗೌರವಿಸಲಾಗಿದೆ. ಆದರೆ ಮುಂದಿನ ವರ್ಷದಿಂದ ನ್ಯಾಯಾಧೀಶರ ಜತೆಗೆ ಕನ್ನಡದಲ್ಲಿಯೇ ಕಲಾಪ ನಡೆಸುತ್ತಿರುವ ವಕೀಲರನ್ನೂ ಗುರುತಿಸಲಾಗುವುದು. ಈ ಬಗ್ಗೆ ನ್ಯಾಯಾಧೀಶರಿಂದಲೇ ಪಟ್ಟಿ ಪಡೆದು ಅಂತಹ ಕನ್ನಡ ಪ್ರೇಮಿಗಳಿಗೆ ಸರ್ಕಾರ ಗೌರವಿಸಲಿದೆ ಎಂದು ಅವರು ಅಧೀನ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿಯೇ ತೀರ್ಪು ನೀಡಿದ 48 ನ್ಯಾಯಾಧೀಶರನ್ನು ಸನ್ಮಾನಿಸಿ ಮಾತನಾಡಿದರು.
ಹೈಕೋರ್ಟ್‍ನಲ್ಲಿಯೂ ಕನ್ನಡದಲ್ಲಿ ಕಲಾಪ ನಡೆಸಲು ರಾಜ್ಯದ ಉಭಯ ಸದನಗಳು ಒಪ್ಪಿಗೆ ಸೂಚಿಸಿ ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸಿವೆ. ರಾಜ್ಯಪಾಲರೂ ಇದಕ್ಕೆ ಅನುಮತಿ ನೀಡಿದ್ದು, ರಾಷ್ಟ್ರಪತಿ ಅಂಕಿತ ಬಾಕಿ ಇದೆ. ರಾಷ್ಟ್ರಪತಿಗೆ ಕೂಡಲೇ ಪ್ರಸ್ತಾವನೆ ಕಳುಹಿಸಿಕೊಡಬೇಕಿದೆ. ಇದರ ಜತೆಗೆ ಭಾಷಾ ಮಾಧ್ಯಮದ ಗೊಂದಲವನ್ನು ಕೇಂದ್ರ ಸರ್ಕಾರದ ಮೂಲಕ ಬಗೆಹರಿಸಿಕೊಳ್ಳಬೇಕಿದೆ. ರಾಷ್ಟ್ರೀಯ ಭಾಷಾ ನೀತಿ ಜಾರಿ ಮಾಡಬೇಕಿದೆ ಎಂದು ಅವರು ಹೇಳಿದರು.
ಅರ್ಧಕ್ಕೆ ಕಾರ್ಯಕ್ರಮ ನಿಲ್ಲಿಸಿದ ಪ್ರಾಧಿಕಾರ:
ಎಲ್ಲ 48 ನ್ಯಾಯಾಧೀಶರಿಗೆ ಪ್ರಶಸ್ತಿ ನೀಡಿ ಗೌರವಿಸುತಿದ್ದಂತೆ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು. ಸೌದಿ ರಾಜ ತೀರಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಂದು ದಿನದ ರಾಷ್ಟ್ರೀಯ ಶೋಕ ಘೋಷಣೆ ಮಾಡಿತ್ತು. ಇದರಿಂದ ಮುಖ್ಯಮಂತ್ರಿ ಹಾಗೂ ಇತರ ಅತಿಥಿಗಳ ಭಾಷಣ ಮೊಟಕುಗೊಳಿಸಲಾಯಿತು.
ಪ್ರಶಸ್ತಿ ಪಡೆದ ನ್ಯಾಯಾಧೀಶರು
ಮಂಜುಳಾ, ಮಲ್ಲಿಕಾರ್ಜುನ ಕಿಣಿಕೇರಿ, ಯು. ಎಂ.ಅಡಿಗ ಕೆ ಸುರೇಶ್, ರವಿ ಎಂ ನಾಯಕ್, ಎಚ್.ಸಿ.ಶ್ಯಾಮ್ ಪ್ರಸಾದ್, ಗೊಲ್ಲಾಳಪ್ಪ ಅಯ್ಯಪ್ಪ ಮೂಲಿಮನಿ, ಜೈಶಂಕರ್, ಸುವರ್ಣಾ ಮಿರ್ಜಿ ಸುಧಾ ಓಂಕಾರ್, ದಯಾನಂದ ಹಿರೇಮಠ, ಟಿ.ಸಿ.ಶ್ರೀಕಾಂತ್, ಪ್ರತಿಭಾ ಕುಲಕರ್ಣಿ, ದಿಲೀಪ್ ಕುಮಾರ್ ಅಮೃತಾ ರಾವ್, ಮಂಜುನಾಥ್ ಭಟ್, ಝರೀನಾ ತಾಜ್, ಸುಜಾತಾ ಸಾಂಬ್ರಾಣಿ, ದೇವೇಂದ್ರ ಪಂಡಿತ್, ಶಿರೀನ್ ಅನ್ಸಾರಿ, ಶಿಲ್ಪಾ ಕೆಎಸ್, ಸಂತೋಷ್ ಪಲ್ಲೇದ್, ಮಹೇಶ್ ಎಸ್, ಆರ್.ಪಿ.ಗೌಡ, ಜೀವನ್‍ರಾಮï ಕುಲಕರ್ಣಿ, ವಿಜೇತಾ ಡೇಸಾ, ಗಿರಿಮಲ್ಲಪ್ಪ ಶೆಟ್ಟರ್, ಮಮತಾ ಡಿ, ಎನ್.ಸುಬ್ರಹ್ಮಣ್ಯ, ಪಿ.ಜೆ.ಪರಮೇಶ್ವರ, ಕೆ. ಲಕ್ಷ್ಮಿ, ಚಂದ್ರಪ್ಪ ಹೊನ್ನೂರ್, ಕನ್ನೂರ್, ಅಬ್ದುಲ್ ಖಾದರ್, ಆರ್.ನಟೇಶ್, ವೀರಭದ್ರಯ್ಯ ಸಿ, ಬಸವರಾಜಪ್ಪ ಕೆ.ಎಂ, ಸುಜಾತ ಸುವರ್ಣ, ಸರವಣನ್, ಎಸ್ ಮೋಹನ್ ಚಂದ್ರ ಪಿ, ಮಂಜುನಾಥ್ ಕೆಪಿ, ಎಂ.ಶ್ರೀಧರ್, ಭಾರತಿ ರಾಯಣ್ಣವರ್, ಪ್ರಕಾಶ್ ವಿ, ಅನುಪಮಾ ಡಿ, ಮಹೇಶ್‍ಬಾಬು, ದ್ಯಾವಪ್ಪ ಬಾಬು, ಬಿ. ವೆಂಕಟಪ್ಪ.
Advertisement