ಬ್ರಾಹ್ಮಣರನ್ನು ತುಳಿಯುತ್ತಿರುವ ಸರ್ಕಾರ

ಸಮಾಜದಲ್ಲಿನ ಎಲ್ಲ ಜನಾಂಗದವರನ್ನು ಸಮಾನವಾಗಿ ನೋಡಿಕೊಳ್ಳುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ಬ್ರಾಹ್ಮಣ..
ಮೈಸೂರಿನಲ್ಲಿ ನಡೆದ ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರಿಕರ ಸಮ್ಮೇಳನ (ಸಂಗ್ರಹ ಚಿತ್ರ)
ಮೈಸೂರಿನಲ್ಲಿ ನಡೆದ ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರಿಕರ ಸಮ್ಮೇಳನ (ಸಂಗ್ರಹ ಚಿತ್ರ)

ಮೈಸೂರು: ಸಮಾಜದಲ್ಲಿನ ಎಲ್ಲ ಜನಾಂಗದವರನ್ನು ಸಮಾನವಾಗಿ ನೋಡಿಕೊಳ್ಳುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ಬ್ರಾಹ್ಮಣ ವರ್ಗದವರನ್ನು ಮಾತ್ರ ತುಳಿಯುತ್ತಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ.ಬಿ.ಎಲ್.ವಿ. ಸುಬ್ರಮಣ್ಯ ಮಾರ್ಮಿಕವಾಗಿ ಹೇಳಿದರು.

ಸಂಧ್ಯಾ ಸುರಕ್ಷ ಟ್ರಸ್ಟ್, ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಶನಿವಾರ ನಗರದ ಗೋವಿಂದರಾವ್ ಮೆಮೋರಿಯಲ್ ಹಾಲ್‍ನಲ್ಲಿ ಏರ್ಪಡಿಸಿದ್ದ ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರಿಕರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ರಾಹ್ಮಣರು ಈ ಪ್ರಜಾಪ್ರಭುತ್ವಯಲ್ಲಿ ಬದುಕುತ್ತಿದ್ದಾರೆ. ಹಿಂದಿನಿಂದಲೂ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಆದ್ದರಿಂದ ರಾಜಕಾರಣಿಗಳು ಬ್ರಾಹ್ಮಣರನ್ನು ತಮ್ಮಂತೆಯೇ ಎಂದು ಭಾವಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ತಮಗೆ ಸಿಗಬೇಕಾದ ಸ್ಥಾನಮಾನ ನೀಡಬೇಕು. ಇದನ್ನು ಕೇಳಲು ಪ್ರತಿಯೊಬ್ಬ ಬ್ರಾಹ್ಮಣನೂ ಸಂಘಟಿತರಾಗಿ ಒಕ್ಕೊರಲಿನಿಂದ ಕೇಳಬೇಕು ಎಂದರು.

ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿ ಉತ್ತುಂಗಕ್ಕೆ ಬೆಳೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ಪ್ರಶಸ್ತಿಯನ್ನು ನಿ,ನ್ಯಾ, ರಾಮಾಜೋಯಿಸ್ ಅವರಿಗೆ, ಮಾಜಿ ಮಂತ್ರಿ ಹಾರನಹಳ್ಳಿ ರಾಮಸ್ವಾಮಿ ಹೆಸರಿನ ಪ್ರಶಸ್ತಿಯನ್ನು ಡಾ.ಕೆ.ಎಸ್. ನಾರಾಯಣ ಸ್ವಾಮಿ, ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ರಾವ್ ಪ್ರಶಸ್ತಿಯನ್ನು ಮಾಜಿ ಮೇಯರ್ ಆರ್.ಜಿ.ನರಸಿಂಹಯ್ಯ, ಕಂಪ್ಯೂಟರ್ ಮಾನವ ಶಕುಂತಲಾದೇವಿ ಪ್ರಶಸ್ತಿಯನ್ನು ಡಾ. ಗೀತಾ ಅವಧಾನಿ ಅವರಿಗೆ ಪ್ರದಾನ ಮಾಡಲಾಯಿತು.

ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಪತ್ನಿ ವರಲಕ್ಷ್ಮಿಆರ್. ಗುಂಡೂರಾವ್, ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ, ಮಾಜಿ ಸಚಿವ ಎಸ್.ಎ. ರಾಮದಾಸ್, ಶಾಸಕ ಗೋ.ಮಧುಸೂದನ್, ಮಾಜಿ ಅಡ್ವಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಮುಖಂಡರಾದ ಎಚ್.ವಿ.ರಾಜೀವ್, ಕೆ. ರಘುರಾಂ ಮುಂತಾದವರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com