ನಕಲಿ ಉದ್ಯೋಗ ಪ್ರಮಾಣಪತ್ರ

ಅಸ್ತಿತ್ವದಲ್ಲಿಲ್ಲದ ಐಟಿ ಕಂಪನಿಗಳ ಉದ್ಯೋಗ ಅನುಭವದ ಬಗ್ಗೆ ನಕಲಿ ಪ್ರಮಾಣಪತ್ರ ವಿತರಿಸುತ್ತಿದ್ದ...
ಬಂಧಿ ತ ಆರೋಪಿಗಳು
ಬಂಧಿ ತ ಆರೋಪಿಗಳು
Updated on

ಬೆಂಗಳೂರು: ಅಸ್ತಿತ್ವದಲ್ಲಿಲ್ಲದ ಐಟಿ ಕಂಪನಿಗಳ ಉದ್ಯೋಗ ಅನುಭವದ ಬಗ್ಗೆ ನಕಲಿ ಪ್ರಮಾಣಪತ್ರ ವಿತರಿಸುತ್ತಿದ್ದ ಮತ್ತೊಂದು ಜಾಲ ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ಆಂಧ್ರಪ್ರದೇಶ ಮೂಲದ ನಾಲ್ವರನ್ನು ಬಂಧಿಸಿದ್ದಾರೆ.

ಮಾರತ್ತಹಳ್ಳಿ ನಿವಾಸಿ ಲಕ್ಷ್ಮೀ ಕೃಷ್ಣ(36), ಜಯರಾಘವರೆಡ್ಡಿ(35), ಕೆ.ಆರ್.ಪುರದ ಜಯ್ ಕುಮಾರ್(35) ಹಾಗೂ ಮುನೆಕೊಳಲು ನಿವಾಸಿ ವೆಂಕಟರೆಡ್ಡಿ(26) ಬಂಧಿತರು. ಆರೋಪಿಗಳಿಂದ ಹಲವು ನಕಲಿ ನೇಮಕ ಪತ್ರಗಳು, ಅನುಭವ ಪತ್ರ, ಸಂಬಳದ ಸ್ಲಿಪ್, 2 ಕಂಪ್ಯೂಟರ್, 5 ಲ್ಯಾಪ್‍ಟಾಪ್, ಪ್ರಿಂಟರ್‍ಗಳು, ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವರ್ತೂರು ಮುಖ್ಯರಸ್ತೆ ಮಾರತ್‍ಹಳ್ಳಿಯಲ್ಲಿ ನೆಕ್ಸಿಸ್ ಟೆಕ್ನಾಲಜೀಸ್, ಎಚ್‍ಎಎಲ್ ಮುಖ್ಯರಸ್ತೆಯಲ್ಲಿ ವಿಜಿಎಸ್ ಟೆಕ್ನೋಲಾಜಿಸ್ ಹೆಸರಿನ ನಕಲಿ ಕಂಪನಿ ಹೆಸರಿನಲ್ಲಿ ಕಚೇರಿ ಆರಂಭಿಸಿ ಅನುಭವ ಪತ್ರ ವಿತರಿಸಲಾಗುತ್ತಿತ್ತು. ಉದ್ಯೋಗಕ್ಕಾಗಿ ಇಂಟರ್‍ನೆಟ್‍ನಲ್ಲಿ ಅರ್ಜಿ ಸಲ್ಲಿಸುವ ನಿರುದ್ಯೋಗಿಗಳ ಹೆಸರು ಮತ್ತು ಮೊಬೈಲ್ ನಂಬರ್‍ಗಳನ್ನು ಸಂಗ್ರಹಿಸುತ್ತಿದ್ದ ಆರೋಪಿಗಳು ಅವರಿಗೆ ಫೋನ್ ಕರೆ ಮಾಡಿ ಕಚೇರಿಗೆ ಕರೆಸಿಕೊಳ್ಳುತ್ತಿದ್ದರು. ಬಳಿಕ ಪ್ರತಿಷ್ಠಿತ ಕಂಪನಿಗಳಲ್ಲಿ ವಿವಿಧ ಹುದ್ದೆ ಗಿಟ್ಟಿಸಲು ನೆರವಾಗುತ್ತದೆ ಎಂದು ನಂಬಿಸಿ, ಅವರಿಂದ ತಲಾ ರು 25ರಿಂದ ರು30 ಸಾವಿರವರೆಗೆ ಹಣ ಪಡೆದು ವಿವಿಧ ಹುದ್ದೆಗಳ ನಕಲಿ ಅನುಭವ ಪತ್ರಗಳನ್ನು ನೀಡುತ್ತಿದ್ದರು.

ಪ್ರಕರಣದಲ್ಲಿ ಆಂಧ್ರಪ್ರದೇಶದ ಗುಂಟೂರಿನ ಸುರೇಂದ್ರಬಾಬು(35), ಆಂಧ್ರಪ್ರದೇಶದ ಕಡಪ ವಾಸಿ ಆನಂದ(35), ದಿವಾಕರ್‍ರೆಡ್ಡಿ(35) ಎಂಬುವರು ತಲೆಮರೆಸಿಕೊಂಡಿದ್ದಾರೆ. 8 ಆರೋಪಿಗಳು ಸೇರಿ ಒಂದು ವರ್ಷದಿಂದ ನಕಲಿ ದಂಧೆಯಲ್ಲಿ ತೊಡಗಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರುದ್ಯೋಗಿಗಳಿಂದ ತಲಾ ರು30000 ವಸೂಲಿ
ನಕಲಿ ಕಂಪನಿಗಳಿವು ನೆಕ್ಸಿಸ್ ಟೆಕ್ನಾಲಜೀಸ್, ವಿಜಿಎಸ್ ಟೆಕ್ನೋಲಜೀಸ್, ಇವ್ಯಾಲ್ಯೂ ಟೆಕ್ನಾಲಜಿ ಪ್ರೈ.ಲಿ, ಎಂಟರ್ ಫ್ಯೂಸ್ ಸಾಫ್ಟ್ ಟೆಕ್ನಾಲಜಿ, ಅದ್ರಿಕಾ ಐಟಿ ಸೆಲ್ಯೂಷನ್ಸ್,
ಗ್ರಾಮ್ಸ್ ಲ್ಯಾಬ್ ಇಂಡಿಯಾ, ಪ್ರಿಮಾ ವೀರ್ಸ್ ಎಂಜೆಂಡರ್ ಟೆಕ್ನಾಲಜಿ ಹಾಗೂ ಲೆಟಿವಾ ಸಾಫ್ಟ್ ಸಿಸ್ಟಮ್ಸ್.

ನಕಲಿ ಪ್ರಮಾಣಪತ್ರ ಪಡೆದು ಉದ್ಯೋಗ ಪಡೆದಿರುವ ಅಭ್ಯರ್ಥಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ನ್ಯಾಯಾಲಯಕ್ಕೆ ಸಲ್ಲಿಸುವ ಆರೋಪ ಪಟ್ಟಿಯಲ್ಲಿ ನಕಲಿ ಪ್ರಮಾಣಪತ್ರ ಪಡೆದವರ ಹೆಸರುಗಳನ್ನು ಸೇರಿಸುತ್ತೇವೆ.

 ಅಬಿಷೇಕ್ ಗೋಯಲ್, ಡಿಸಿಪಿ ಅಪರಾಧ ವಿಭಾಗ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com