ಸಮ್ಮೇಳನಾಧ್ಯಕ್ಷರ ಮೆರವಣಿಗೆ ಇಂದು

ಇಲ್ಲಿ ಮಾತು ಮೂಕವಾಗುತ್ತದೆ...ಜೀವನದ ಕ್ಷಣಿಕತೆಗೆ ಸೆಡ್ಡು ಹೊಡೆದು ತಾನು ತಾನಾಗಿ ಜಗದಗಲಕ್ಕೆ, ಮುಗಿಲೆತ್ತರಕ್ಕೆ ನಿಂತು ...
81 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
81 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
Updated on

ಹಾಸನ: ಇಲ್ಲಿ ಮಾತು ಮೂಕವಾಗುತ್ತದೆ...ಜೀವನದ ಕ್ಷಣಿಕತೆಗೆ ಸೆಡ್ಡು ಹೊಡೆದು ತಾನು ತಾನಾಗಿ ಜಗದಗಲಕ್ಕೆ, ಮುಗಿಲೆತ್ತರಕ್ಕೆ ನಿಂತು ವಿಶ್ವಕ್ಕೆ ಶಾಂತಿ ಸಂದೇಶ ಸಾರುತ್ತಿರುವ ವಿರಾಟ್ ಮೂರ್ತಿ ಬಾಹುಬಲಿ ಸಮಕ್ಷಮದಲ್ಲಿ 81 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜ.31ರಂದು ನಡೆಯುವ ಸಮ್ಮೇಳಾನಾಧ್ಯಕ್ಷರ ಮೆರವಣಿಗೆ ನಡೆಸುವ ಮೂಲಕ ಚಾಲನೆ ದೊರೆಯಲಿದೆ.

ಎತ್ತಿನಗಾಡಿಯಲ್ಲಿ: ಎಡರು ತೊಡರುಗಳ ನ್ನೆಲ್ಲ ದಾಟಿ ಸಮ್ಮೇಳನದ ಯಶಸ್ಸಿಗೆ ಸಿದ್ಧತೆ ಮಾಡಲಾಗಿದೆ. ಶ್ರವಣಬೆಳಗೊಳದ ಶ್ರೀ ಚಾರು ಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ
ಸಿದ್ಧತೆ ಗಳನ್ನು ಮಾಡಲಾಗಿದೆ. ಜ.31 ರಂದು ಸಂಜೆ 4 ಕ್ಕೆ ಸಮ್ಮೇಳಾ ನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ. ಎತ್ತಿನ ಗಾಡಿಯಲ್ಲಿ ಈ ಬಾರಿ ಮೆರವಣಿಗೆ ಸಮ್ಮೇಳನ ವಿಶೇಷ.
ಉದ್ಘಾಟನೆ ನಾಳೆ: ಫೆ  1 ರಂದು ಬೆಳಗ್ಗೆ 10.30ಕ್ಕೆ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ  ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಹಿಂದಿನ ಸಮ್ಮೇಳನಾಧ್ಯಕ್ಷ ಡಾ. ನಾ. ಡಿಸೋಜ, ಹಿರಿಯ ಸಾಹಿತಿ ಡಾ. ಭೈರಪ್ಪ ಸೇರಿ ಗಣ್ಯರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com