ರಾಜ್ಯದ ಮೇಲೆ ಮತ್ತೆ ಇ'ಗಣಿ'ತದ ಧೂಳು

ಎರಡು ವರ್ಷಗಳಿಂದ ಬಳ್ಳಾರಿಯಲ್ಲಿ ಸದ್ದಿಲ್ಲದೆ ಅಡಗಿದ್ದ ಗಣಿ ಗಾರಿಕೆ ಧೂಳು ಮತ್ತೆ ರಾಚುವ ಸಾಧ್ಯತೆ ಗಳು ದಟ್ಟವಾಗಿವೆ...
ಗಣಿಗಾರಿಕೆ
ಗಣಿಗಾರಿಕೆ

ನವದೆಹಲಿ: ಎರಡು ವರ್ಷಗಳಿಂದ ಬಳ್ಳಾರಿಯಲ್ಲಿ ಸದ್ದಿಲ್ಲದೆ ಅಡಗಿದ್ದ ಗಣಿಗಾರಿಕೆ ಧೂಳು ಮತ್ತೆ ರಾಚುವ ಸಾಧ್ಯತೆ ಗಳು ದಟ್ಟವಾಗಿವೆ. ಕರ್ನಾಟಕದಲ್ಲಿ ಗಣಿ ಉತ್ಪಾದನೆಗೆ ಇ-ಹರಾಜು ಮೂಲಕ ಪುನರ್ ಅನುಮತಿ ನೀಡಬಹುದು ಎಂದು ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ. ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಈ ಹಿಂದೆ ಅನುಮತಿ ಪಡೆಯಲಾಗಿದ್ದರೂ ರದ್ದಾಗಿದ್ದ 51 ಗಣಿ ಪರವಾನಗಿಯನ್ನು ಪುನಃ ನೀಡಬೇಕು ಎಂದು ಸುಪ್ರೀಂಗೆ ಸಲ್ಲಿಸಲಾದ ವರದಿಯಲ್ಲಿ ಸಮಿತಿ ಉಲ್ಲೇಖಿಸಿದೆ. ಈಚೆಗೆ ಕರ್ನಾಟಕ ಸರ್ಕಾರ ಸಹ ಇ-ಹರಾಜಿಗೆ ಒಲವು ವ್ಯಕ್ತಪಡಿಸಿದ್ದು, ಇದಕ್ಕೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪವನ್ನಿಟ್ಟಿತ್ತು. ಈ ಪ್ರಸ್ತಾಪವನ್ನು ಬೆಂಬಲಿಸಿರುವ ಸಮಿತಿ, ಇದೀಗ ಸುಪ್ರೀಂಗೆ ಶಿಫಾರಸು ಮಾಡಿದೆ. ಇದಲ್ಲದೆ, ಈಗ ಇ-ಹರಾಜುಮೂಲಕ ಗಣಿಗಾರಿಕೆಗೆ ಅನುಮತಿ ಪಡೆಯುವ ಹೊಸ ಗುತ್ತಿಗೆದಾರರಿಗೆ ಈ ಹಿಂದೆ ಶಾಸನಬದಟಛಿವಾಗಿ ನೀಡಲಾಗಿದ್ದ ಮಂಜೂರಾತಿ ಮತ್ತು ಒಪ್ಪಿಗೆಯನ್ನು ಯಾವುದೇ ಬದಲಾವಣೆ ಇಲ್ಲದಂತೆ ವರ್ಗಾವಣೆ ಮಾಡಬೇಕು. ತ್ವರಿತ ಅನುಮತಿ ನೀಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಬೇಕು ಎಂದೂ ಸಮಿತಿ ಮನವಿ ಮಾ ಡಿದೆ ಎಂದು `ಹಿಂದೂಸ್ತಾನ್ ಟೈಮ್ಸ್ ' ವರದಿ ಮಾಡಿದೆ.

ರದ್ದಾಗಿತ್ತು: 2013ರ ಏಪ್ರಿಲ್‍ನಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅನುಮತಿ ನೀಡಲಾಗಿದ್ದ 51 ಗಣಿ ಕಂಪನಿಗಳ ಪರವಾನಗಿ ರದ್ದಾಗಿತ್ತು. ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅಕ್ರಮವಾಗಿ ಅನುಮತಿ ನೀಡಲಾಗಿರುವುದರ ಜತೆಗೆ ಸಾಕಷ್ಟು ಭ್ರಷ್ಟಾಚಾರ ಮಾಡಲಾಗಿದೆ ಎಂದು ಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ನೇತೃತ್ವದ ವಿಶೇಷ ಅರಣ್ಯ ಪೀಠ, ಸಿಇಸಿ ವರದಿಯನ್ವಯ ಸುಪ್ರೀಂ ಈ ತೀರ್ಮಾನ ಕೈಗೊಂಡಿತ್ತು.

ರಾಜ್ಯಕ್ಕೆ ಅಧಿಕಾರ ಕೊಡಿ: ಇ-ಹರಾಜಿನ ನಿಯಮ ಮತ್ತು ಷರತ್ತುಗಳಲ್ಲಿ ಕೆಲವು ಸೂಕ್ತ ಬದಲಾವಣೆಗಳನ್ನು ತಂದುಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ಸ್ವಾತಂತ್ರ್ಯ ನೀಡಲೇಬೇಕು ಎಂದು ಸಿಇಸಿ ವರದಿಯಲ್ಲಿ ಕೋರಿದೆ. ಇ-ಹರಾಜು ಮಾಡುವ ಸಲುವಾಗಿ ಕ್ರಿಸಿಲ್ ರಿಸ್ಕ್ ಮತ್ತು ಇನ್ಫ್ರಾಸ್ಟ್ರಕ್ಚರ್  ಸಲ್ಯೂಷನ್ ಲಿ. ಗೆ ಸಲಹೆ ನೀಡಲು ಕರ್ನಾಟಕ ಸರ್ಕಾರ ಕೇಳಿತ್ತು. ಈ ಸಂಸ್ಥೆ ನೀಡಿದ ವರದಿ ಸ್ವೀಕರಿಸಿದ ರಾಜ್ಯ ಸರ್ಕಾರ 15 ಗಣಿ ಕಂಪನಿಗಳಿಗೆ ಮೊದಲ ಹಂತದ ಅನುಮತಿ ನೀಡಿತ್ತು. ಸರ್ಕಾರದ ಈ ನಿರ್ಧಾರದನ್ವಯ ಸಿಇಸಿ ವರದಿ ಸಿದಟಛಿಪಡಿಸಿದ್ದೆ. ಈಗ ಅನುಮತಿ ಪಡೆಯುವ ಗಣಿ ಗುತ್ತಿಗೆದಾರರು ರಾಯಧನ, ಅರಣ್ಯಾಭಿವೃದ್ಧಿ ತೆರಿಗೆ, ಮೌಲ್ಯ ವರ್ಧಿತ  ಸೇವಾ ತೆರಿಗೆ ಮತ್ತಿತರ ಅನ್ವಯಿತ ತೆರಿಗೆಗಳನ್ನು ಪಾವತಿಸಬೇಕು ಎಂದೂ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com