ನಿವೃತ್ತ ಯೋಧನಿಂದ ಭಾವಿ ಸೈನಿಕರಿಗೆ ವಂಚನೆ

ದೈಹಿಕ ಸಾಮಥ್ರ್ಯದ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ ಕೊಡಿಸುವುದಾಗಿ ಸೈನಿಕ ಹುದ್ದೆ ಆಕಾಂಕ್ಷಿಗಳಿಂದ...
ಆರೋಪಿ ಜನಾ
ಆರೋಪಿ ಜನಾ

ಬೆಂಗಳೂರು: ದೈಹಿಕ ಸಾಮಥ್ರ್ಯದ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ ಕೊಡಿಸುವುದಾಗಿ ಸೈನಿಕ ಹುದ್ದೆ ಆಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ನಿವೃತ್ತ ಯೋಧನೊಬ್ಬನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮಬಂಗಾಳ ಮೂಲದ ಎನ್.ಸಿ.ಜನಾ (42) ಬಂಧಿತ. ಸೇನೆಗೆ ಸೇರ್ಪಡೆಗಾಗಿ ಕರೆಯುವ ರ್ಯಾಲಿ ಯಲ್ಲಿ ಭಾಗವಹಿಸಲು ಬರುತ್ತಿದ್ದ ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ 10ನೇ ತರಗತಿ ಮತ್ತು ಪಿಯು ಅಂಕ ಪಟ್ಟಿಗಳು, ಎಟಿಎಂ ಕಾರ್ಡ್‍ಗಳು ಹಾಗೂ ಮೊಬೈಲ್ ಫೋನ್ ಗಳನ್ನು ಆತನಿಂದ ವಶಕ್ಕೆ ಪಡೆಯಲಾಗಿದೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಕೋರಮಂಗಲ ಪೊಲೀಸರು ತಿಳಿಸಿದ್ದಾರೆ. ಅಮಾಯಕ ಅಭ್ಯರ್ಥಿಗಳೇ ಟಾರ್ಗೆಟ್: ಸೇನಾ ಉಪಕರಣಗಳ ಸಾಗಣೆ, ಗಾರ್ಡ್, ಎಸ್ಕಾರ್ಟ್ ಮುಂತಾದ ಕೆಲಸಗಳಿಗಾಗಿ ಶಿಸ್ತುಬದಟಛಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅದಕ್ಕೆಂದೇ ನಗರದ ವಿವೇಕನಗರದಲ್ಲಿ `ಪಾಯ್ ನಿಯರ್ ಕಾಪ್ರ್ಸ್ ಟ್ರೈನಿಂಗ್ ಸೆಂಟರ್'ನಲ್ಲಿ (ಪಿಸಿಟಿಸಿ) ಆಕಾಂಕ್ಷಿಗಳಿಗೆ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಉತ್ತೀರ್ಣರಾದ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ.

ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರರು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು. ಇದನ್ನೇ ಬಂಡವಾಳ ಮಾಡಿಕೊಂಡ ಜನಾ, ವೈದ್ಯಕೀಯ ಪ್ರಮಾಣ ಪತ್ರ ಕೊಡಿಸುವುದಾಗಿ ಅಭ್ಯರ್ಥಿಗಳನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಪರಿಚಯವಿದೆ ಎನ್ನುತ್ತಿದ್ದ ನೇಮಕ ಪ್ರಕ್ರಿಯೆಚಾಲ್ತಿಯಲ್ಲಿದ್ದು ವಿವೇಕನಗರದ ಪಿಸಿಟಿಸಿ ಕೇಂದ್ರದಲ್ಲಿ ಜ.28ಕ್ಕೆ ಸಂದರ್ಶನ ನಿಗದಿಯಾಗಿತ್ತು. ಹೀಗಾಗಿ ಕರ್ನಾಟಕ, ಉತ್ತರಪ್ರದೇಶ, ಉತ್ತರಾಂಚಲ, ಜಾರ್ಖಂಡ್ ಹಾಗೂ ಬಿಹಾರದ ನೂರಾರು ಅಭ್ಯರ್ಥಿಗಳು ಜ.27ರಂದು ನಗರಕ್ಕೆ ಬಂದಿದ್ದರು.

ರಾತ್ರಿ ಪಿಸಿಟಿಸಿ ಸಮೀಪದಲ್ಲೇ ಫುಟ್‍ಪಾತ್ ಮೇಲೆ ಮಲಗಿದ್ದ ಅಭ್ಯರ್ಥಿಗಳನ್ನು ಭೇಟಿ ಮಾಡಿದ ಆರೋಪಿ, ತಾನು ನಿವೃತ್ತ ಸೈನಿಕ. ತನಗೆ ಹಲವು ಸೇನಾಧಿಕಾರಿಗಳ ಪರಿಚಯವಿದೆ. ಅವರಿಗೆ ಹೇಳಿ ಉದ್ಯೋಗ ಕೊಡಿಸುತ್ತೇನೆ ಎಂದಿದ್ದ. ವೈದ್ಯಕೀಯ ಪ್ರಮಾಣ ಪತ್ರ ಕೊಡಿಸುವುದಾಗಿ 7 ಅಭ್ಯರ್ಥಿಗಳನ್ನು ನಂಬಿಸಿ ಕೋರಮಂಗಲ 6ನೇ ಬ್ಲಾಕ್‍ನಲ್ಲಿರುವ ತನ್ನ ಮನೆಗೆ ಕರೆದು ಕೊಂಡು ಹೋಗಿದ್ದ. ಉದ್ಯೋಗಕ್ಕೆ ರು75 ಸಾವಿರದಿಂದ ರು1 ಲಕ್ಷ ಆಗುತ್ತದೆ ಎಂದು ಹೇಳಿ ಆರಂಭದಲ್ಲಿ ಒಬ್ಬೊಬ್ಬರಿಂದ ತಲಾ ರು 2 ರಿಂದ ರು3 ಸಾವಿರ ಪಡೆದಿದ್ದ.ಉಳಿದ ಹಣವನ್ನು ಕೆಲಸ ಸಿಕ್ಕ ನಂತರ ಕೊಡುವಂತೆ ಹೇಳಿದ್ದ ಎಂದು ಅಭ್ಯರ್ಥಿಗಳು ಮಾಹಿತಿ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಗುಪ್ತವಾಗಿ ಮಾಹಿತಿ ಸಂಗ್ರಹ

ಮಿಲಿಟರಿ ಇಂಟಲಿಜೆನ್ಸ್ ಅಧಿಕಾರಿಗಳು ಅಭ್ಯರ್ಥಿಗಳ ಹಿನ್ನೆಲೆ ಹಾಗೂ ಚಟುವಟಿಕೆ ಬಗ್ಗೆ ಗುಪ್ತವಾಗಿ ಮಾಹಿತಿ ಸಂಗ್ರಹಿಸುತ್ತಾರೆ. ಮಿಲಿಟರಿ ಇಂಟಲಿಜೆನ್ಸ್‍ನ ಮೇಜರ್ ಯಾದವ್, ನಾಯಕ್ ಸುಬೇದಾರ್ ತ್ರಿಪಾಠಿ ಮತ್ತು ಸಿಬ್ಬಂದಿ ರಾಜೇಶ್‍ಗೆ ವೈದ್ಯಕೀಯ ಪ್ರಮಾಣಪತ್ರ ಸಿಗುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಭ್ಯರ್ಥಿಗಳಿಗೆ ಆರೋಪಿ ಜನಾ ನೀಡಿದ್ದ ವಿಸಿಟಿಂಗ್ ಕಾರ್ಡ್ ನೆರವಿನಿಂದ ಆತನ ವಿಳಾಸ ಪತ್ತೆಹಚ್ಚಿ ಆರೋಪಿ ಎನ್.ಸಿ.ಜನಾ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com