ಗಣಕೀಕೃತ ಮೌಲ್ಯಮಾಪನ ಕೇಂದ್ರಕ್ಕೆ ಚಾಲನೆ

ಪರೀಕ್ಷೆ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತರಲು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಜ್ಯದಲ್ಲಿ 11 ಗಣಕೀಕೃತ ಮೌಲ್ಯಮಾಪನ ಕೇಂದ್ರಗಳನ್ನು ಆರಂಭಿಸಿದೆ...
ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
Updated on

ಬೆಂಗಳೂರು: ಪರೀಕ್ಷೆ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತರಲು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಜ್ಯದಲ್ಲಿ 11 ಗಣಕೀಕೃತ ಮೌಲ್ಯಮಾಪನ
ಕೇಂದ್ರಗಳನ್ನು ಆರಂಭಿಸಿದೆ.

ಪರೀಕ್ಷೆ ಮೌಲ್ಯಮಾಪನದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಗಣೀಕೀಕೃತ ವ್ಯವಸ್ಥೆ ಅಳವಡಿಸಲಾಗಿದ್ದು, ಇದರಿಂದ ವಿಶ್ವವಿದ್ಯಾಲಯದ 25 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಡಿಜಿಟಲ್ ಮೌಲ್ಯಮಾಪನದಲ್ಲಿ ಉತ್ತರ ಪತ್ರಿಕೆಗಳನ್ನು ಕಂಪ್ಯೂಟರ್ ಮೂಲಕವೇ ನೋಡಲಾಗುತ್ತದೆ. ಸುಮಾರು ಒಂದು ಲಕ್ಷ ಉತ್ತರ ಪತ್ರಿಕೆ ಗಳನ್ನು ನಿರ್ದಿಷ್ಟ ಸಮಯದಲ್ಲಿ ಮೌಲ್ಯ ಮಾಪನ ಮಾಡಿ ಶೀಘ್ರ ಫಲಿತಾಂಶ ಪ್ರಕಟಿಸಬಹುದು. ಮೌಲ್ಯಮಾಪನ ಮಾಡಿದ ನಂತರ ಅಂಕಗಳು ವೇಗವಾಗಿ ದಾಖಲಾಗುವುದರಿಂದ ಕೂಡಲೇ ಫಲಿತಾಂಶ
ಪ್ರಕಟಿಸಲು ಅವಕಾಶವಿದೆ.

ಪಾರದರ್ಶಕತೆ-ವೇಗ: ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ ಮೌಲ್ಯಮಾಪನ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಕುಲಪತಿ ಡಾ. ಕೆ.ಎಸ್.ರವೀಂದ್ರನಾಥ್, ಮೌಲ್ಯ ಮಾಪನ ದಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಕೆಯಿಂದ, ಫಲಿತಾಂಶ ಪ್ರಕಟಣೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಎಚ್ಚರ ವಹಿಸಬಹುದು. ಮೊದಲು
ಒಂದು ಮೌಲ್ಯಮಾಪನ ಕೇಂದ್ರದಿಂದ ಮತ್ತೊಂದಕ್ಕೆ ಉತ್ತರ ಪತ್ರಿಕೆಗಳನ್ನು ತೆಗೆದುಕೊಂಡು ಹೋಗಲು ತಡವಾಗುತ್ತಿತ್ತು. ಉತ್ತರ ಪತ್ರಿಕೆಗಳನ್ನು ಕಂಪ್ಯೂಟರ್ ನಲ್ಲಿ ಸ್ಕ್ಯಾನ್ ಮಾಡಿದ ನಂತರ ಮೌಲ್ಯ ಮಾಪನ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

ಇದನ್ನೇ ನೋಡಿ ಮೌಲ್ಯಮಾಪನ ಮಾಡಲಾಗುತ್ತದೆ. ಒಂದು ವೇಳೆ 3-4 ಉತ್ತರ ಪತ್ರಿಕೆಗೆ ಒಂದೇ ರೀತಿಯ ಅಂಕ ನೀಡಿದರೆ, ಕಂಪ್ಯೂ ಟರ್‍ನಲ್ಲಿ ಈ ಬಗ್ಗೆ ಸೂಚನೆ ದೊರೆತು ಹಿರಿಯ ಮೌಲ್ಯ ಮಾಪಕರು ಕ್ರಮ ಕೈಗೊಳ್ಳು ತ್ತಾರೆ. ಮೌಲ್ಯ ಮಾಪನ ಮಾಡಿ ಅಂಕ ನೀಡಿದ ಕೂಡಲೇ ಮಾಹಿತಿಗಳು ದಾಖಲಾಗುವುದರಿಂದ ಫಲಿತಾಂಶವನ್ನು ಕೂಡಲೇ ಪ್ರಕಟಿಸಬಹುದು. ಮೌಲ್ಯಮಾಪನ ಕೇಂದ್ರಗಳ ಉಸ್ತುವಾರಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು. ಕುಲಸಚಿವ ಸಚ್ಚಿದಾನಂದ, ಆಸ್ಪತ್ರೆ ನಿರ್ದೇಶಕ ಡಾ. ಶಶಿಧರ ಬುಗ್ಗಿ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com