ಕಾನ್ಸ್ ಟೇಬಲ್ ಮೇಲೆ ಹಲ್ಲೆ

ಗಸ್ತು ಪೊಲೀಸ್ ಕಾನ್ಸ್ ಟೇಬಲ್ ಮೇಲೆ ರಾಜಕೀಯ ಪಕ್ಷದ ಕಾರ್ಯಕರ್ತನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ.
ಆರೋಪಿಯ ಬಂಧನ( ಸಾಂಕೇತಿಕ ಚಿತ್ರ)
ಆರೋಪಿಯ ಬಂಧನ( ಸಾಂಕೇತಿಕ ಚಿತ್ರ)

ಬೆಂಗಳೂರು: ಅವಧಿ ಮೀರಿ ತೆರೆದಿದ್ದ ಹೊಟೇಲ್ ಬಾಗಿಲು ಮುಚ್ಚಿಸಲು ಮುಂದಾದ ಗಸ್ತು ಪೊಲೀಸ್ ಕಾನ್ಸ್ ಟೇಬಲ್ ಮೇಲೆ ರಾಜಕೀಯ ಪಕ್ಷದ ಕಾರ್ಯಕರ್ತನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ.

ಹನುಮಂತನಗರದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹಲ್ಲೆ ನಡೆಸಿದ ಆರೋಪಿ ರಾಮಾಂಜನೇಯ ಗುಡ್ಡ ಪ್ರದೇಶದ ಚೇತನ್ ನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆ ಕಾನ್ಸ್ ಟೇಬಲ್ ಮಡಿವಾಳಪ್ಪ ಅವರು ತಡರಾತ್ರಿ 80 ಅಡಿ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಸಣ್ಣ ಹೊಟೇಲ್ ಒಂದು ಅವಧಿ ಮೀರಿ ರಾತ್ರಿ 11  ಗಂಟೆ ನಂತರವೂ ತೆರೆದಿತ್ತು. ಈ ಹಿನ್ನೆಲೆಯಲ್ಲಿ ಅವರು ಬಾಗಿಲು ಮುಚ್ಚುವಂತೆ ಹೊಟೇಲ್ ಸಿಬ್ಬಂದಿಗೆ ಹೇಳಿದ್ದಾರೆ.

ಅದೇ ವೇಳೆಗೆ ಸ್ಥಳಕ್ಕೆ ಬಂದ ಆರೋಪಿ ಚೇತನ್ ಊಟ ಕೊಡುವಂತೆ ಸಿಬ್ಬಂದಿಗೆ ಆರ್ಡರ್ ಮಾಡಿದ್ದಾನೆ. ಆದರೆ ಹೊಟೇಲ್ ನ ಅವಧಿ ಮುಗಿದಿದ್ದು ಹೊರತೆರಳುವಂತೆ ಮಡಿವಾಳಪ್ಪ ಚೇತನ್ ಗೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಚೇತನ್, ತಾನು ರಾಜಕೀಯ ಪಕ್ಷದ ಕಾರ್ಯಕರ್ತನಾಗಿದ್ದು ಊಟ ಪಡೆಯುತ್ತಿದ್ದೇನೆ ಮುಚ್ಚಿಸಬೇಡಿ ಎಂದು ಅವಾಜ್ ಹಾಕಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಾಗ ಮಡಿವಾಳಪ್ಪ ಅವರ ಮೇಲೆ ಹಲ್ಲೆನಡೆಸಿದ್ದಾನೆ. ಕೂಡಲೇ ಹಲ್ಲೆಗೊಳಗಾದ ಕಾನ್ಸ್ ಟೇಬಲ್, ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುತ್ತಿರುವುದನ್ನು ಅರಿತು ಸ್ಥಳದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಚೇತನ್ ನನ್ನು ಬಂಧಿಸಲಾಗಿದೆ. ಬಂಧಿತನ ವಿರುದ್ಧ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ಮಾಡಿರುವ ಪ್ರಕರಣ ದಾಖಲಿಸಲಾಗಿದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com