ನಿವೇಶನದ ಉರುಳು ಭಾಸ್ಕರ್ ರಾವ್ ರಾಜಿನಾಮೆ ನೀಡಬೇಕು: ಎ.ಟಿ.ರಾಮಸ್ವಾಮಿ

ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರು ನ್ಯಾಯಾಂಗ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನ ಸಂಖ್ಯೆ 1553ರಲ್ಲಿ 60-ಗಿ90 ಅಳತೆಯ ನಿವೇಶನ ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ನ್ಯಾ.ಶಿವರಾಜ್ ಪಾಟೀಲ್...
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ

ಹಾಸನ: ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರು ನ್ಯಾಯಾಂಗ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನ ಸಂಖ್ಯೆ 1553ರಲ್ಲಿ 60-ಗಿ90 ಅಳತೆಯ ನಿವೇಶನ ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ನ್ಯಾ.ಶಿವರಾಜ್ ಪಾಟೀಲ್ ರಂತೆ ನ್ಯಾ.ಭಾಸ್ಕರ್ ರಾವ್ ಸಹ ರಾಜಿನಾಮೆ ನೀಡಬೇಕು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹಿಸಿದ್ದಾರೆ.

ನ್ಯಾ. ಭಾಸ್ಕರ್ ರಾವ್ ಅವರು ನಿವೇಶನ ಹೊಂದಿರುವ ಬಗ್ಗೆ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರಿಗೆ ಮೊದಲೇ ಮಾಹಿತಿ ಇತ್ತು. ಹೀಗಿದ್ದರೂ ನೇಮಕ ಮಾಡಲಾಗಿದೆ. ಸರ್ಕಾರ ಮತ್ತು ರಾಜ್ಯಪಾಲರಿಗೆ ಭ್ರಷ್ಟ ಸಂಸ್ಥೆ ಬೇಕಾಗಿದೆ. ಕಿಂಚಿತ್ತಾದರೂ ಸ್ವಾಭಿಮಾನವಿದ್ದರೆ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರು ತಾವಾಗಿಯೇ ರಾಜಿನಾಮೆ ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ರಾಮಸ್ವಾಮಿ ಅವರು ಸರ್ಕಾರಿ ಭೂಮಿ ಒತ್ತುವರಿ ಜಂಟಿ ಸದನ ಸಮಿತಿ ಅಧ್ಯಕ್ಷರಾಗಿ ಸಂಚಲನ ಮೂಡಿಸಿದ್ದರು. ಲೋಕಾಯುಕ್ತ ನ್ಯಾಯಮೂರ್ತಿ ಅವರ ಮನೆಯಲ್ಲಿಯೇ ಭ್ರಷ್ಟಾಚಾರ ನಡೆದಿರುವುದರಿಂದ ಇಡೀ ಪ್ರಕರಣದ ಸಂಪೂರ್ಣ ಜವಾಬ್ದಾರಿ ಅವರೇ ಹೊರಬೇಕು. ಲೋಕಾಯುಕ್ತ ಸಂಸ್ಥೆಗಳು ಮಾಮೂಲಿ ವಸೂಲಿ ಸಂಸ್ಥೆಗಳಾಗಿವೆ. ಈ ಸಂಸ್ಥೆಗೆ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸುತ್ತಿರುವುದು ಪುನರ್ವಸತಿ ಕೇಂದ್ರವಾಗಿ ಪರಿಣಮಿಸಿದೆ. ನಿವೃತ್ತಿ ಹೊಂದಿದವರಿಗೆ ಸೇವಾ ನಿಯಮಗಳು ಅನ್ವಯವಾಗುವುದಿಲ್ಲ. ಇವರನ್ನು ನೇಮಕ ಮಾಡುವುದರಿಂದ ಉತ್ತರದಾಯತ್ವ ಇರುವುದಿಲ್ಲ. ಆದ್ದರಿಂದ ಇಂತಹ ಸಂಸ್ಥೆಗಳಿಗೆ ಹಾಲಿ ನ್ಯಾಯಮೂರ್ತಿಗಳ ಬದಲು ಹಾಲಿ  ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕು. ಈ ಬಗ್ಗೆ ಶಾಸನಗಳನ್ನು ತಂದು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com