ಲೋಕಾಯುಕ್ತ ಪಾವಿತ್ರ್ಯ ನಾಶವಾಗಿದೆ: ಜನಾರ್ದನ ಪೂಜಾರಿ

ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣವನ್ನು ತಕ್ಷಣ ಸಿಬಿಐಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ...
ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ
ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ

ಉಡುಪಿ: ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣವನ್ನು ತಕ್ಷಣ ಸಿಬಿಐಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಿಂದಾಗಿ ಲೋಕಾಯುಕ್ತ ಸಂಸ್ಥೆಯ ಪಾವಿತ್ರ್ಯ, ಘನತೆ ಸರ್ವನಾಶವಾಗಿದೆ. ಇದಕ್ಕೆ ಕಾರಣರಾದ ಈ ಹಗರಣದ ಪ್ರಮುಖ ಆರೋಪಿ ಲೋಕಾಯುಕ್ತ ನ್ಯಾ. ಭಾಸ್ಕರರಾವ್ ಅವರ ಮಗ ಅಶ್ವಿನ್ ರಾವ್ ಅವರನ್ನು ಕೂಡಲೇ ಬಂಧಿಸ ಬೇಕು. ಅವರ ವಿರುದ್ಧ ಈಗಾಗಲೇ ಕೋಟ್ಯಂತರ ರುಪಾಯಿ ಲಂಚ ಪಡೆದ ದೂರು-ಎಫ್ಐಆರ್ ದಾಖಲಾಗಿದೆ. ಇದರಿಂದ ಅವರ ಬಂಧನಕ್ಕೆ ಕಾನೂನಿನಲ್ಲಿಯೂ ಪೂರ್ಣ ಅವಕಾಶಗಳಿವೆ ಎಂದು ಒತ್ತಾಯಿ ಸಿದರು.

ಈ ಹಗರಣದ ಬಗ್ಗೆ ಸರ್ಕಾರದ ಮೇಲೆ ಹೆಗ್ಗಣ ಎಸೆಯುವ ಮೊದಲು ವಿಪಕ್ಷಗಳು ತಮ್ಮ ಮನೆಯಲ್ಲಿ ಹೆಗ್ಗಣ ಸತ್ತುಬಿದ್ದಿರುವುದನ್ನು ಗಮನಿಸಬೇಕು. ಬಿಜೆಪಿ ನಾಯಕ ಯಡಿಯೂರಪ್ಪ ಅವರ ಮೇಲೆ 15 ಪ್ರಕರಣ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ಮೇಲೆ 2 ಪ್ರಕರಣ ಬಗ್ಗೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ.

ಇದನ್ನು ಅವರು ಮರೆಯ ಬಾರದು. ಈ ಇಬ್ಬರು ನಾಯಕರು ಇತ್ತೀಚೆಗೆ ರೈತರ ಪರವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಮೆಚ್ಚುವಂತಹ ಕೆಲಸ. ಆದರೆ, ಇದು ರಾಜಕೀಯ ಒಳಗುಟ್ಟು ಗೊತ್ತಿರುವುದರಿಂದ ರಾಜ್ಯದ ಜನತೆ ಅವರನ್ನು ನಂಬುವುದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com