20 ರ ಹರೆಯಕ್ಕೂ ಕಾಡುತ್ತಿದೆ ಬಂಜೆತನ

ನಗರದಲ್ಲಿ ಮಹಿಳೆಯರ ಅಂಡಾಶಯಗಳಲ್ಲಿ ಅಂಡಾಣುಗಳ ಪ್ರಮಾಣ ಕಡಿಮೆ ಇರುವುದು ಗೋಚರವಾಗಿದೆ.
20 ರ ಹರೆಯಕ್ಕೂ ಕಾಡುತ್ತಿದೆ ಬಂಜೆತನ

ಬೆಂಗಳೂರು: ನಗರದಲ್ಲಿ ಮಹಿಳೆಯರ ಅಂಡಾಶಯಗಳಲ್ಲಿ ಅಂಡಾಣುಗಳ ಪ್ರಮಾಣ ಕಡಿಮೆ ಇರುವುದು ಗೋಚರವಾಗಿದೆ. ಈ ಪೈಕಿ ಶೇ.21 ರಷ್ಟು ಮಹಿಳೆಯರು 20 ರ ಹರೆಯದವರಾಗಿದ್ದಾರೆ ಎನ್ನುವುದು ಆತಂಕಕಾರಿ ವಿಷಯ ಎಂದು ನೋವಾ ಫರ್ಟಿಲಿಟಿ ಸೆಂಟರ್(ಎನ್.ಐ.ಎಫ್) ನ ಡಾ. ಅವೀವಾ ಪಿಂಟೋ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಎನ್.ಐಎಫ್ ಕೈಗೊಂಡಿರುವ ಅಧ್ಯಯನದ ಪ್ರಕಾರ ಶೇ.16 .5 ರಷ್ಟು ಮಹಿಳೆಯರು 30 ರ ಪ್ರಾರಂಭದಲ್ಲಿದ್ದಾರೆ. 20 ಹಾಗೂ 30 ವರ್ಷಗಳ ಆಸುಪಾಸಿನಲ್ಲಿರುವ ಹೆಚ್ಚಿನ ಸಂಖ್ಯೆಯ ಮಹಿಳೆಯರ ಅಂಡಾಶಯಗಳಲ್ಲಿ ಅತ್ಯಂತ ಕಡಿಮೆ ಅಥವಾ ಶೂನ್ಯ ಅಂಡಾಣುಗಳಿರುವುದು ಕಂಡುಬಂದಿದೆ. ಕಳೆದ 12 ತಿಂಗಳಲ್ಲಿ 1400 ಹೊಸ ರೋಗಿಗಳ ಮಾದರಿಗಳನ್ನು ಈ ಅಧ್ಯಯನ ಒಳಗೊಂಡಿದೆ. ಸ್ತ್ರೀ- ಪುರುಷರಿಬ್ಬರಲ್ಲೂ ಸಂತಾನ ವೈಫಲ್ಯ ಪ್ರಮಾಣ ಶೇ.26 ರಷ್ಟಿದೆ. ಬಹಳಷ್ಟು ಮಹಿಳೆಯರು ಅಕಾಲಿಕ ಅಂಡಾಶಯ ವೈಫಲ್ಯದಿಂದ ಬಳಲುತ್ತಿದ್ದಾರೆ ಎಂದು ಅವರು ವಿವರಿಸಿದರು.

ಬಂಜೆತನಕ್ಕೆ ಹಲವಾರು ಕಾರಣಗಳಿವೆ. ಕೆಲವೊಂದು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು. ಅಂಡಾಶಯಗಳಾಲ್ಲಿ ಜೀವಾಣುಗಳ ಕೊರತೆಯಿಂದಾಗಿ ಬಂಜೆತನ ಉಂಟಾಗಬಹುದು. ಆದರೆ ಅದಕ್ಕೆ ಪರಿಹಾರವಿದೆ. ಜೀವಾಣುಗಳನ್ನು ದಾನ ಮಾಡಲು ಹಲವರು ಮುಂದೆ ಬರುತ್ತಿರುವ ಕಾರಣ ಅಂಡಾಣು ಜೀವಕೋಶಗಳ ಕೊರತೆಯಿಂದ ಉಂಟಾಗುವ ಬಂಜೆತನ ನಿವಾರಿಸಬಹುದು ಎಂದರು.

ಅಂಡಾಶಯಗಳಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಾದರೆ ಅದು ಮಹಿಳೆಯರ ಫಲವತ್ತತೆಯನ್ನು ಕಡಿಮೆಗೊಳಿಸುತ್ತದೆ. ಹಾಗೂ ಗರ್ಭಧರಿಸುವುದು ಕಷ್ಟವಾಗುತ್ತದೆ. ಇಂತಹ ಸಂಮಸ್ಯೆ ಹೊಂದಿದ್ದ ನೀರಾ ಎನ್ನುವ 26 ವರ್ಷದ ಮಹಿಳೆಗೆ ದಾನಿಯ ಜೀವಾಣುಗಳೊಂದಿಗೆ ಐವಿಎಫ್ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಯಿತು. ಚಿಕಿತ್ಸೆ ನಂತರ ಆಕೆ ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಡಾ. ಅವೀವಾ ಪಿಂಟೋ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com