
ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಸಮಾಜಘಾತುಕ ಶಕ್ತಿಗಳಿಗೆ ಮಾತ್ರ ಸಿಮ್ ಕಾರ್ಡ್ ನೀಡುತ್ತಿದ್ದ ನಾಲ್ವರನ್ನು ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಹನುಮಂತನಗರದ ರಮೇಸ್ (33), ಜಗದೀಶ್(30), ರಾಘವೇಂದ್ರ ಬ್ಲಾಕ್‍ನ ನಿವಾಸಿ ರವಿಕುಮಾರ್(28) ಹಾಗೂ ನಾಗರಾಜು (24) ಬಂಧಿತರು.
ತಮ್ಮ ಅಂಗಡಿಗೆ ಸಿಮ್ ಕಾರ್ಡ್ ಖರೀದಿಸಲು ಬರುವ ಗ್ರಾಹಕರ ದಾಖಲೆ, ಭಾವಚಿತ್ರಗಳನ್ನು ಸಂಗ್ರಹಿಸಿಟ್ಟುಕೊಂಡು ನಂತರ ಅವರ ಹೆಸರಿನಲ್ಲಿ ಭೂಗತ ಪಾತಕಿಗಳಿಗೆ ಸಿಮ್ ಕಾರ್ಡ್ ನೀಡುತ್ತಿದ್ದರು. ಭಯೋತ್ಪಾದಕ ಕೃತ್ಯ ನಡೆಸುವವರು, ಭೂಗತ ಪಾತಕಿಗಳು, ರೌಡಿಗಳು ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಹುತೇಕ ಆರೋಪಿಗಳಿಗೆ ಇವರು ಸಿಮ್ ನೀಡಿದ್ದಾರೆ.
ಈ ರೀತಿ ನಕಲಿ ದಾಖಲೆಯನ್ನು ಸೃಷ್ಟಿಸಿ ನಂತರ ಸಿಮ್ ಮಾರಾಟ ಮಾಡಲು ಸುಲಭವಾಗುವಂತೆ ಅಂತರ್ಜಾಲವನ್ನು ಬಳಸುತ್ತಿದ್ದರು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ. ಆರೋಪಿಗಳಿಂದ ಸಿಮ್ ಕಾರ್ಡ್ ಆಕ್ಟಿವೇಟ್ ಮಾಡಿದ ವೊಡಾಫೋನ್, ಐಡಿಾಯಾ, ಟಾಟಾ ಡೊಕೊಮೊ, ರಿಲಾಯನ್ಸ್, ಏರ್‍ಟೆಲ್, ಏರ್ ಸೆಲ್ ಕಂಪನಿಗಳ 2,310 ಸಿಮïಕಾರ್ಡ್‍ಗಳು ಹಾಗೂ 19 ಮೊಬೈಲ್, ನಕಲಿ ದಾಖಳೆ ಸೃಷ್ಟಿಗೆ ಬಳಸುತ್ತಿದ್ದ ಯಂತ್ರಗಳು ಸೇರಿ ಲಕ್ಷಾಂತರ ರುಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರೀನಗರದ ಎಸ್.ಎಂ.ಎಸ್ ಆಕ್ಸ್¸ಸರೀಸ್, ಹನುಮಂತನಗರದ ಎಸ್.ಎಲ್.ಎನ್.ಕಮ್ಯುನಿ ಕೇಷನ್, ರಾಘವೇಂದ್ರ ಬ್ಲಾಕ್‍ನ ಎಸ್.ಎಂ. ಎಸ್ ಆಕ್ಸ್ ಸರೀಸ್ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಆರೋಪಿಗಳು ಕಳೆದ ಒಂದು ವರ್ಷದಿಂದ ಈ ರೀತಿಯ ಕೃತ್ಯ ನಡೆಸುತ್ತಿದ್ದರು. ಇದರ ಹಿಂದೆ ಕೆಲ ಅಧಿಕಾರಿಗಳು ಶಾಮೀಲಾಗಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಮೊದ ಮೊದಲು ಸಿಮ್ ಕಾರ್ಡ್ ಗಳನ್ನು ಆಕ್ಟಿವೇಟ್ ಮಾಡಲು ರು.10 ರುಪಾಯಿ ಪಡೆಯುತ್ತಿದ್ದ ಆರೋಪಿಗಳು ಕ್ರಮೇಣವಾಗಿ ರು.100 ರುಪಾಯಿ ಪಡೆಯುತ್ತಿದ್ದರು. ಪ್ರತಿ ಗ್ರಾಹಕರ ಹೆಸರಿನಲ್ಲಿ ನಾಲ್ಕೈದು ಸಿಮ್ ಗಳನ್ನು ಸಮಾಜಘಾತುಕ ಶಕ್ತಿಗಳಿಗೆ ನೀಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement