
ಬೆಂಗಳೂರು: ಲೋಕಾಯುಕ್ತದಲ್ಲಿ ನಡೆದಿರುವ ಲಂಚ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್ ಆರ್ ಹಿರೇಮಠ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ವಿಶೇಷ ತನಿಖಾ ತಂಡದಿಂದ ಪರಿಣಾಮಕಾರಿ ತನಿಖೆ ಸಾಧ್ಯವಿಲ್ಲ. ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಲೋಕಾಯುಕ್ತ ಸಂಸ್ಥೆಯನ್ನೇ ದುರುಪಯೋಗ ಮಾಡಿಕೊಂಡಿದ್ದು, ಸಂಸ್ಥೆಯ ಮೇಲಿದ್ದ ಜನರ ವಿಶ್ವಾಸವೆಲ್ಲವೂ ಹೊರಟು ಹೋಗಿದೆ. ಸಿಬಿಐಗೆ ವಹಿಸದಿದ್ದರೆ ರಾಜ್ಯದ ಜನರು ಸಂಸ್ಥೆಯ ಮೇಲಿದ್ದ ಎಲ್ಲಾ ವಿಶ್ವಾಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಭಾಸ್ಕರ್ ರಾವ್ ಸಲಹೆಯಂತೆ ಎಸ್‍ಐಟಿ ರಚಿಸಲಾಗಿದೆ. ಇದರಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಸರ್ಕಾರ ಕೂಡ ಭಾಸ್ಕರ್ ರಾವ್ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಇಡೀ ರಾಜ್ಯದ ಜನತೆ ಲೋಕಾಯುಕ್ತರ ರಾಜಿನಾಮೆಗೆ ಒತ್ತಾಯಿಸುತ್ತಿರುವಾಗ ಸರ್ಕಾರ ಮೌನವಾಗಿರುವುದು ಸರಿಯಲ್ಲ. ಹೈಕೋರ್ಟ್ ಕೂಡ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕಿತ್ತು. ಕೂಡಲೇ ತನಿಖೆಯನ್ನು ಸಿಬಿಐಗೆ ವಹಿಸಿ ಉಸ್ತುವಾರಿಯನ್ನು ನ್ಯಾಯಾಲಯ ನೋಡಿಕೊಳ್ಳಬೇಕೆಂದರು.
Advertisement