ಚೀನಾ ಕಂಪನಿ ಜೊತೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ

ಚೆನ್ನೈ ಮತ್ತು ಮೈಸೂರು ನಡುವಿನ ಹೈ ಸ್ಪೀಡ್ ರೈಲು ಯೋಜನೆ ಜೊತೆಗೆ ಬೆಂಗಳೂರು-ಮೈಸೂರು ನಡುವೆ ಆರು ಪಥ ಎಕ್ಸ್ ಪ್ರೆಸ್ ಕಾರಿಡಾರ್ ನಿರ್ಮಾಣ ಯೋಜನೆ
ಚೀನಾ ಕಂಪನಿ ಜೊತೆ ಸಿಎಂ ಸಿದ್ದರಾಮಯ್ಯ
ಚೀನಾ ಕಂಪನಿ ಜೊತೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಚೆನ್ನೈ ಮತ್ತು ಮೈಸೂರು ನಡುವಿನ ಹೈ ಸ್ಪೀಡ್ ರೈಲು ಯೋಜನೆ ಜೊತೆಗೆ ಬೆಂಗಳೂರು-ಮೈಸೂರು ನಡುವೆ ಆರು ಪಥ ಎಕ್ಸ್ ಪ್ರೆಸ್ ಕಾರಿಡಾರ್ ನಿರ್ಮಾಣ ಯೋಜನೆ ಜಾರಿಗೊಳಿಸಲು ಚೀನಾ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.

ಚೀನಾದ ಎಸ್ ಡಿಎಸ್ ಎಚ್ ಕಂಪನಿ ಜೊತೆ ಮಹತ್ವದ ಸಮಾಲೋಚನೆ ನಡೆಸಿದರು. ಜೊತೆಗೆ ಬೆಂಗಳೂರು-ಮೈಸೂರು ನಡುವೆ ಆರು ಫಥ ಎಕ್ಸ್ ಪ್ರೆಸ್ ಕಾರಿಡಾರ್ ಯೋಜನೆಯ ನಿರ್ಮಾಣದ ಕುರಿತು ಚರ್ಚಿಸಲಾಗಿದೆ. ಎಸ್ ಡಿಎಸ್ಎಚ್ ಕಂಪನಿ ಪ್ರತಿನಿಧಿಗಳು ಚೀನಾದಲ್ಲಿ ತಾವು ಕೈಗೊಂಡಿರುವ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

ಕೇಂದ್ರ ಬಜೆಟ್ ನಲ್ಲಿ ಪ್ರಕಟಿಸಿರುವ ಹೈಸ್ಪೀಡ್ ರೈಲು ಚೆನ್ನೈನಿಂದ ಮೈಸೂರು ವರಗೊ ಹಾದು ಬರುವುದರಿಂದ ಬೆಂಗಳೂರು ಮತ್ತು ಮೈಸೂರು ನಡುವಿನ ಹಳಿಗಳ ನಿರ್ಮಾಣ, ಸಾಧಕ ಬಾಧಕಗಳ ಕುರಿತು ಪರಿಶೀಲನೆ ನಡೆದಿದೆ.

 ಈ ನಡುವೆ ಚೀನಾ ಕಂಪನಿಯ ಸಹಯೋಗದಲ್ಲಿ ಬೆಂಗಳೂರು-ಮೈಸೂರು ನಡುವೆ 6 ಪಥದ ಆಕ್ಸಿಸ್ ಕಂಟ್ರೋಲ್ ಸರ್ವೀಸ್ ರಸ್ತೆಯನ್ನೊಳಗೊಂಡ ಎಕ್ಸ್ ಪ್ರೆಸ್ ಕಾರಿಡಾರ್ ನಿರ್ಮಾಣಕ್ಕೂ ಯೋಜನಾ ವರದಿ ಸಿದ್ಧಗೊಳಿಸುವ ತಯಾರಿ ನಡೆದಿದೆ. ಸುಮಾರು 6 ಸಾವಿರ ವೆಚ್ಚದ ಯೋಜನೆ ಇದಾಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com