• Tag results for meet

ಅಮಿತ್ ಶಾ ನೇತೃತ್ವದಲ್ಲಿ ಇಂದು ಬಿಜೆಪಿ ಕೋರ್ ಕಮಿಟಿ ಸಭೆ: ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಚರ್ಚೆ ಸಾಧ್ಯತೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಶನಿವಾರ ರಾಜ್ಯ ಬಿಜೆಪಿ ಕೋರ್ ಕಮಿಟಿ‌ ಸಭೆ ನಡೆಯಲಿದ್ದು, ಸರ್ಕಾರ ಹಾಗೂ ಪಕ್ಷದಲ್ಲಿನ ಎಲ್ಲಾ ಅಸಮಾಧಾನಕ್ಕೆ ಪರಿಹಾರ ಅಮಿತ್ ಷಾ ಪರಿಹಾರ ನೀಡಲಿದ್ದಾರೆ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

published on : 16th January 2021

ಕೃಷಿ ಕಾಯ್ದೆ: ಕೇಂದ್ರ ಸರ್ಕಾರ- ರೈತ ಮುಖಂಡರ ಮಧ್ಯೆ 9ನೇ ಸುತ್ತಿನ ಮಾತುಕತೆ ಆರಂಭ, ಸಮಸ್ಯೆ ಬಗೆಹರಿಯುವ ನಿರೀಕ್ಷೆ!

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಪ್ರತಿನಿಧಿಗಳು ಮತ್ತು ಸರ್ಕಾರದ ಮಧ್ಯೆ 9ನೇ ಸುತ್ತಿನ ಮಾತುಕತೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿದೆ.

published on : 15th January 2021

ಶೀಘ್ರದಲ್ಲೇ ಶುಭ ಸುದ್ದಿ: ಕೇಂದ್ರ ನಾಯಕರ ಜೊತೆಗಿನ ಸಭೆ ತೃಪ್ತಿ, ಸಮಾಧಾನ ತಂದಿದೆ- ದೆಹಲಿಯಲ್ಲಿ ಬಿಎಸ್ ವೈ!

ಮಂತ್ರಿ ಮಂಡಲ ವಿಸ್ತರಣೆ ಕುರಿತಂತೆ ಕೇಂದ್ರದ ವರಿಷ್ಠರ ಜೊತೆಗೆ ಇಂದು ನಡೆದ ಸಭೆಯಲ್ಲಿ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಶುಭ ಸುದ್ದಿ ಸಿಗಲಿದೆ. ಕೇಂದ್ರ ನಾಯಕರ ಜೊತೆಗಿನ ಸಭೆ, ತಮಗೆ ತೃಪ್ತಿ , ಸಮಾಧಾನ ತಂದಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

published on : 10th January 2021

ಕೊರೋನಾ ಪರಿಸ್ಥಿತಿ, ಲಸಿಕೆ ಬಿಡುಗಡೆ ಕುರಿತು ಸಿಎಂಗಳ ಸಭೆ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ

ಭಾರತ ಅತಿ ದೊಡ್ಡ ಲಸಿಕೆ ವಿತರಣೆ ಅಭಿಯಾನಕ್ಕೆ ಸಜ್ಜುಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಲಸಿಕೆ ವಿತರಣೆ ಹಾಗೂ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಜ.11 ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. 

published on : 10th January 2021

ಕೊರೊನಾ ಲಸಿಕೆ ಹಂಚಿಕೆ: ಜ.11ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ

ಇಡೀ ವಿಶ್ವಕ್ಕೇ ಮಾರಕವಾಗಿ ಪರಿಣಮಿಸಿರುವ ಮಹಾಮಾರಿ ಕೊರೊನಾ ವೈರಸ್'ಗೆ ಲಸಿಕೆ ನೀಡುವ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

published on : 9th January 2021

ರೈತರು-ಕೇಂದ್ರ ಸರ್ಕಾರದ ನಡುವಿನ 8 ನೇ ಸುತ್ತಿನ ಮಾತುಕತೆಯೂ ವಿಫಲ: ಸುಪ್ರೀಂ ಕೋರ್ಟ್ ವಿಚಾರಣೆಯತ್ತ ಎಲ್ಲರ ಚಿತ್ತ 

ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು- ಕೇಂದ್ರ ಸರ್ಕಾರದ ನಡುವೆ ಜ.08 ರಂದು ನಡೆದ 8 ನೇ ಸುತ್ತಿನ ಮಾತುಕತೆಯೂ ವಿಫಲಾಗಿದೆ. 

published on : 9th January 2021

2023 ವಿಧಾನಸಭಾ ಚುನಾವಣೆ ಮೇಲೆ ಜೆಡಿಎಸ್ ಕಣ್ಣು: ಕಠಿಣ ಶ್ರಮ ಪಡುವಂತೆ ಕಾರ್ಯಕರ್ತರಿಗೆ ಹೆಚ್'ಡಿಕೆ, ದೇವೇಗೌಡ ಸೂಚನೆ

ಮುಂಬರುವ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು, ಈಗಿನಿಂದಲೇ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

published on : 8th January 2021

ಜಾಡಿಸಿ ಒದ್ದರೆ ಎಲ್ಲಿಗೆ ಹೋಗಿ ಬೀಳ್ತೀಯಾ ಗೊತ್ತಾ? ಅಧಿಕಾರಿಗೆ ಸಚಿವ ಮಾಧುಸ್ವಾಮಿ ವಾರ್ನಿಂಗ್!

ಕೆಲವು ತಿಂಗಳುಗಳ ಹಿಂದೆ ಕೋಲಾರದಲ್ಲಿ ರೈತ ಮಹಿಳೆಯೊಬ್ಬರಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ (ರಾಸ್ಕಲ್) ಎಂದು ನಿಂದಿಸಿ, ತೀವ್ರ ಟೀಕೆಗೆ ಗುರಿಯಾಗಿದ್ದ ಕಾನೂನು ಸಚಿವ ಮಾಧುಸ್ವಾಮಿ ಇದೀಗ ಮತ್ತೊಮ್ಮೆ ಅದೇ ಶಬ್ದಗಳ ಪ್ರಯೋಗ ಮಾಡಿರುವುದು ಬೆಳಕಿಗೆ ಬಂದಿದೆ. 

published on : 7th January 2021

ಅನಾರೋಗ್ಯ ಪೀಡಿತ ಮಾಜಿ ಉದ್ಯೋಗಿಯ ಭೇಟಿಗೆ ಮುಂಬೈ ನಿಂದ ಪುಣೆಗೆ ರತನ್ ಟಾಟ ಪ್ರಯಾಣ: ಮೆಚ್ಚುಗೆಯ ಮಹಾಪೂರ 

ಅನಾರೋಗ್ಯಕ್ಕೀಡಾದ ಮಾಜಿ ಉದ್ಯೋಗಿಯ ಆರೋಗ್ಯ ವಿಚಾರಿಸುವುದಕ್ಕಾಗಿ ಕೈಗಾರಿಕೋದ್ಯಮಿ ರತನ್ ಟಾಟಾ ಮುಂಬೈ ನಿಂದ ಪುಣೆಗೆ ತೆರಳಿದ್ದು, ಅವರ ನಡೆಗೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗತೊಡಗಿದೆ. 

published on : 6th January 2021

ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ: ಶಾಸಕರ ಸಭೆಯಲ್ಲಿ ಕಿಡಿಕಾರಿದ ಯತ್ನಾಳ್ ವಿರುದ್ಧ ಸಿಎಂ ಗರಂ!

ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗದ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಪುತ್ರ ಬಿ.ವೈ ವಿಜಯೇಂದ್ರ ಹಸ್ತಕ್ಷೇಪದ ಕುರಿತು ಮೂವರು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೇರವಾಗಿ ಹೆಸರು ಪ್ರಸ್ತಾಪಿಸಿ ಮುಖ್ಯಮಂತ್ರಿ ಮುಂದೆಯೇ ಆಕ್ರೋಶ ಹೊರಹಾಕಿದರು.

published on : 5th January 2021

ರೈತರು- ಕೇಂದ್ರ ಸರ್ಕಾರದ ನಡುವಿನ ಮಾತುಕತೆ ಮತ್ತೆ ವಿಫಲ: ಜ.8 ಕ್ಕೆ ಮತ್ತೊಂದು ಸಭೆ

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ ಕೇಂದ್ರ ಸರ್ಕಾರದ ನಡುವಿನ 7 ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. 

published on : 4th January 2021

ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ: ರೈತರನ್ನು ಭೇಟಿ ಮಾಡಿದ ಕೇಂದ್ರ ಸಚಿವರು, ಮಾತುಕತೆಯತ್ತ ಎಲ್ಲರ ಚಿತ್ತ

ಕೇಂದ್ರ ಸರ್ಕಾರ ಜಾರಿಗೊಳಸಿರುವ ಕೃಷಿ ಕಾಯ್ದೆ ವಿರುದ್ಧ ರಾಷ್ಟ್ರ ರಾಜಧಾನಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸೋಮವಾರ 40ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ಜತೆಗಿನ 7ನೇ ಸುತ್ತಿನ ಮಾತುಕತೆ ಆರಂಭವಾಗಿದೆ.

published on : 4th January 2021

ಕಾರ್ಯಕಾರಿಣಿ ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ: ಕೆಎಸ್.ಈಶ್ವರಪ್ಪ

ಜನವರಿ 2 ಮತ್ತು 3 ರಂದು ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ. 

published on : 2nd January 2021

ತ್ವರಿತಗತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ

 ರಾಜ್ಯದ ವಿವಿಧೆಡೆಗಳಲ್ಲಿ ಚಾಲನೆ ನೀಡಿರುವ ಸ್ಮಾರ್ಟ್ ಸಿಟಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

published on : 1st January 2021

ಮುಖ್ಯಮಂತ್ರಿಗೆ ಅನಾರೋಗ್ಯದಿಂದ ಶಾಸಕರ ಭೇಟಿಗೆ ನಿರಾಕರಣೆ: ಶಾಸಕಾಂಗ ಸಭೆ ಕರೆಯಲು ಯತ್ನಾಳ್ ಆಗ್ರಹ

ಬಿಜೆಪಿ ಶಾಸಕರ ಜೊತೆ ಚೆರ್ಚಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜಿಲ್ಲಾವಾರು ಶಾಸಕರ ಸಭೆ ಕರೆದಿರುವುದಕ್ಕೆ ಪಕ್ಷದ ಹಿರಿಯ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

published on : 31st December 2020
1 2 3 4 5 6 >