

ತುರ್ಕಮೆನಿಸ್ತಾನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ 40 ನಿಮಿಷ ಕಾದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ದೇಶದ ಶಾಶ್ವತ ತಟಸ್ಥತೆಯ 30 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ತುರ್ಕಮೆನಿಸ್ತಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಭೆಯ ನೆಪಥ್ಯದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ಇದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ.
RT ಇಂಡಿಯಾ ಹಂಚಿಕೊಂಡ ವೀಡಿಯೋದಲ್ಲಿ, 40 ನಿಮಿಷ ಹೊರಗಡೆ ಕಾದ ಬಳಿಕ ಷರೀಫ್, ರಷ್ಯಾ ಅಧ್ಯಕ್ಷರ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವಿಳಂಬದ ನಂತರ ಕೋಪದಲ್ಲಿ ಪುಟಿನ್ ಮತ್ತು ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ನಡುವೆ ನಡೆಯುತ್ತಿದ್ದ ಕೊಠಡಿಗೆ ತೆರಳಿದ್ದಾರೆ.
ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ 40 ನಿಮಿಷಗಳ ಕಾಲ ಪಕ್ಕದ ಕೊಠಡಿಯಲ್ಲಿ ಕಾದ ನಂತರ ಷರೀಫ್ ಸ್ವಲ್ಪವಾದರೂ ಮಾತುಕತೆ ನಡೆಸುವ ನಿಟ್ಟಿನಲ್ಲಿ ಪುಟಿನ್ ಹಾಗೂ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಮಾತುಕತೆ ನಡೆಸುತ್ತಿದ್ದ ಕೊಠಡಿಗೆ ತೆರಳಲು ನಿರ್ಧರಿಸಿದ್ದಾರೆ. ಆದರೆ, ಸುಮಾರು 10 ನಿಮಿಷಗಳ ನಂತರ ಆ ಕೊಠಡಿಯಿಂದ ಅವರು ನಿರ್ಗಮಿಸಿದರು ಎಂದು ಹೇಳಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. "ಪುಟಿನ್ ಭಿಕ್ಷುಕರಿಗಾಗಿ ತನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. "ಟ್ರಂಪ್ ಕೂಡ ಈ ಭಿಕ್ಷುಕರೊಂದಿಗೆ ಹೀಗೆ ಮಾಡ್ತಾರೆ ಎಂದು ಮತ್ತೋರ್ವ ಬಳಕೆದಾರರು ಅಪಹಾಸ್ಯ ಮಾಡಿದ್ದಾರೆ.
Advertisement