ನಾಳೆ ಅಮೆರಿಕದ ನೂತನ ಅಧ್ಯಕ್ಷ ಪದಗ್ರಹಣ: Donald Trump ಭೇಟಿಯಾದ ಮುಕೇಶ್ ಅಂಬಾನಿ ದಂಪತಿ!

ಕ್ಯಾಪಿಟಲ್‌ ರೊಟುಂಡ ಕಟ್ಟಡದ ಒಳಗೆ ಪದಗ್ರಹಣ ಸಮಾರಂಭ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಸಮಾರಂಭದಲ್ಲಿ ಮುಖೇಶ್ ದಂಪತಿ ಪಾಲ್ಗೊಳ್ಳಲಿದ್ದಾರೆ.
Mukesh, Nita meet Trump
ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮುಕೇಶ್, ನೀತಾ ಅಂಬಾನಿ
Updated on

ವಾಷಿಂಗ್ಟನ್‌: ಅಮೆರಿಕ ನೂತನ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ನಾಳೆ ಪದಗ್ರಹಣ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಭಾರತದ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗೂ ರಿಲಯನ್ಸ್ ಫೌಂಡೇಷನ್ ಸ್ಥಾಪಕರಾದ ನಿತಾ ಅಂಬಾನಿ ಭಾನುವಾರ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು.

ಕ್ಯಾಪಿಟಲ್‌ ರೊಟುಂಡ ಕಟ್ಟಡದ ಒಳಗೆ ಪದಗ್ರಹಣ ಸಮಾರಂಭ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಸಮಾರಂಭದಲ್ಲಿ ಮುಖೇಶ್ ದಂಪತಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ.

ಟ್ರಂಪ್ ಕ್ಯಾಬಿನೇಟ್ ನ ನಾಮನಿರ್ದೇಶಿತರು ಮತ್ತು ಚುನಾಯಿತ ಅಧಿಕಾರಿಗಳು ಒಳಗೊಂಡಂತೆ ಇತರ ಗಣ್ಯರ ಜೊತೆಗೆ ಮುಖೇಶ್ ದಂಪತಿ ಪದ ಗ್ರಹಣ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಶನಿವಾರವೇ ವಾಷಿಂಗ್ಟನ್ ಡಿಸಿಗೆ ಅಂಬಾನಿ ದಂಪತಿ ಆಗಮಿಸಿದ್ದಾರೆ.

ವರ್ಜೀನಿಯಾದ ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಅದ್ದೂರಿ ಸ್ವಾಗತ ಹಾಗೂ ಸಿಡಿ ಮದ್ದುಗಳ ಪ್ರದರ್ಶನದೊಂದಿಗೆ ಈಗಾಗಲೇ ಕಾರ್ಯಕ್ರಮಗಳು ಆರಂಭವಾಗಿವೆ. ಇಂದು ನೀತಾ ಮತ್ತು ಮುಖೇಶ್ ಅಂಬಾನಿ ಅವರು ಟ್ರಂಪ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ JD ವ್ಯಾನ್ಸ್ ಅವರೊಂದಿಗೆ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಅತ್ಯಂತ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

Mukesh, Nita meet Trump
Donald Trump's Inauguration: "ನಮಗೆ ಇಲ್ಲಿರಲು ಆಗ್ತಿಲ್ಲ"; ನಗರ ತೊರೆಯುತ್ತಿದ್ದಾರೆ Washington DC ನಿವಾಸಿಗಳು!

ಪದಗ್ರಹಣ ಸಮಾರಂಭದಲ್ಲಿ ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್‌, ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯೂ ಬುಶ್‌, ಬರಾಕ್‌ ಒಬಾಮಾ, ಬಿಲ್‌ ಕ್ಲಿಂಟನ್‌ , ಬಿಲಿಯನೇರ್ ಎಲೋನ್ ಮಸ್ಕ್, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಜೊತೆಗೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com