ಮತ್ತೆ ಸಚಿವ ಸ್ಥಾನ ನೀಡುವಂತೆ ಸಂತೋಷ್ ಲಾಡ್ ಪಟ್ಟು

ಅಕ್ರಮ ಅದಿರು ರಪ್ತು ಆರೋಪದ ಮೇಲೆ ವಾರ್ತಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಲಘಟಕಿ ಶಾಸಕ ಸಂತೋಷ್ ಲಾಡ್ ಮತ್ತೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಸಂತೋಷ್ ಲಾಡ್
ಸಂತೋಷ್ ಲಾಡ್

ಬೆಂಗಳೂರು: ಅಕ್ರಮ ಅದಿರು ರಪ್ತು ಆರೋಪದ ಮೇಲೆ ವಾರ್ತಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಲಘಟಕಿ ಶಾಸಕ ಸಂತೋಷ್ ಲಾಡ್ ಮತ್ತೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಸಂತೋಷ್ ಲಾಡ್ ಒಡೆತನದ ವಿ.ಎಸ್ ಲಾಡ್ ಅಂಡ್ ಗಣಿ ಕಂಪನಿ ವಿರುದ್ಧದ ಪ್ರಕರಣಕ್ಕೆ ಸುಪ್ರಿಂ ಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಮತ್ತೆ ತಮಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಸಂತೋಷ್ ಲಾಡ್ ಒತ್ತಾಯಿಸಿದ್ದಾರೆ.

ಅಕ್ರಮ ಅದಿರು ರಪ್ತು ಆರೋಪದಲ್ಲಿ ಸಂತೋಷ್ ಲಾಡ್ 2013 ನವೆಂಬರ್ 23 ರಂದು ವಾರ್ತಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  ರಾಜೀನಾಮೆಯನ್ನು ಅಂಗೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ಒಪ್ಪಿಗೆಗಾಗಿ ರಾಜೀನಾಮೆ ಪತ್ರವನ್ನು ರವಾನಿಸಿದ್ದರು.

ಸಮಾಜ ಪರಿವರ್ತನಾ ಸಮಿತಿ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಎಸ್. ಆರ್. ಹೀರೆಮಠ್ ಸಂತೋಷ್ ಲಾಡ್ ವಿರುದ್ಧ ಅಕ್ರಮ ಗಣಿಗಾರಿಗೆ ಆರೋಪ ಮಾಡಿ, ದಾಖಲೆ ಬಿಡುಗಡೆಗೊಳಿಸಿದ್ರು.

ಆದರೆ ಇದೀಗ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಸಂತೋಷ್ ಲಾಡ್ ವಿರುದ್ಧದ ಆರೋಪಕ್ಕೆ ತಡೆ ನೀಡಿದೆ. ಜೊತೆಗೆ ಪುನರ್ ಪರಿಶೀಲನೆ ಅರ್ಜಿ ವಿಚಾರಣೆಯಾಗುವವರೆಗೂ ತಡೆ ಮುಂದುವರಿಯಲಿದೆ ಎಂದು ತಿಳಿಸಿದೆ. ಹೀಗಾಗಿ ಸಂತೋಷ್ ಲಾಡ್ ಮತ್ತೆ ತಮಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.  


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com