ಸಂಚಾರ ದಟ್ಟಣೆ ಕಡಿಮೆ ಮಾಡಲು ಮಿನಿ ರೈಲ್ವೆ ಸಂಚಾರ ಸೇವೆ ಪ್ರಾರಂಭಿಸಲು ಚಿಂತನೆ

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಹಾಗೂ ಮೆಟ್ರೋ ರೈಲು ನಿಲ್ದಾಣದ ಜತೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಲೈಟ್ ರ್ಯಾಪಿಡ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ ಹೆಸರಿನ ಮಿನಿ ರೈಲ್ವೆ ಸಂಚಾರ ಸೇವೆ ಪ್ರಾರಂಭಿಸಲು ಚಿಂತನೆ
ಚೀನಾ ಪ್ರತಿನಿಧಿಗಳೊಂದಿಗೆ ಸಿ.ಎಂ ಸಭೆ
ಚೀನಾ ಪ್ರತಿನಿಧಿಗಳೊಂದಿಗೆ ಸಿ.ಎಂ ಸಭೆ

ಬೆಂಗಳೂರು: ನಗರದಲ್ಲಿ  ಸಂಚಾರ ದಟ್ಟಣೆ ಕಡಿಮೆ ಮಾಡುವುದು  ಹಾಗೂ ಮೆಟ್ರೋ ರೈಲು ನಿಲ್ದಾಣದ ಜತೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಲೈಟ್  ರ್ಯಾಪಿಡ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ ಹೆಸರಿನ ಮಿನಿ ರೈಲ್ವೆ ಸಂಚಾರ ಸೇವೆ ಪ್ರಾರಂಭಿಸಲು  ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.  

ಗೃಹ ಕಚೇರಿ ಕೃಷ್ಣಾದಲ್ಲಿ ಚೀನಾದ  ಶಾಂಗ್ ಡಾಂಗ್  ಇಂಟರ್ ನ್ಯಾಷನಲ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಿ.ಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ ಬಳಿಕ  ಈ  ಬಗ್ಗೆ ಯೋಜನೆ ರೂಪಿಸಲು  ತೀರ್ಮಾನ ಕೈಗೊಳ್ಳಲಾಗಿದೆ.

ಸಭೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಾರ್ತಾ ಮತ್ತು  ಮೂಲಸೌಕರ್ಯ ಸಚಿವ ಆರ್  ರೋಷನ್  ಬೇಗ್, ಬೆಂಗಳೂರು  ನಗರದ 40 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ 1 , 2 ಮತ್ತು 3 ನೇ ಹಂತಕ್ಕೆ ಅನ್ವಯವಾಗುವಂತೆ ಲೈಟ್  ರ್ಯಾಪಿಡ್ ಟ್ರಾನ್ಸ್ ಪೋರ್ಟ್ ಸಿಸ್ಟಮ್(ಎಲ್.ಆರ್.ಟಿ.ಎಸ್) ಸೇವೆ ಪ್ರಾರಂಭಿಸಲು ರಾಜ್ಯ ಸರ್ಕಾರ  ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಎಕ್ಸ್ ಪ್ರೆಸ್ ಹೈವೆ,ಎಲಿವೇಟೆಡ್ ಹೈವೆ,  ಮೇಲ್ಸೇತುವೆ, ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಪಾಲುದಾರಿಕೆ ಹೊಂದುವ ಸಂಬಂಧ ಚೀನಾದ  ಶಾಂಗ್ ಡಾಂಗ್ ಇಂಟರ್ ನ್ಯಾಷನಲ್ ಸಂಸ್ಥೆ,ಸಿ.ಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ  ನಡೆಸಿದೆ ಎಂದು ರೋಷನ್ ಬೇಗ್ ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಚತುಷ್ಪಥ ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ಅಂದಾಜು 6000 ಕೋಟಿ ವೆಚ್ಚಚಾಗಲಿದೆ.  ಹೆಬ್ಬಾಳದಿಂದ ಕೇಂದ್ರ ರೇಷ್ಮೆ ಮಂಡಳಿವರೆಗೆ 16 ಕಿ.ಮೀ,  ಕೆ.ಆರ್ ಪುರಂ ನಿಂದ  ಗೊರಗುಂಟೆಪಾಳ್ಯದವರೆಗಿನ  21 ಕಿ.ಮೀ ಜ್ಞಾನಭಾರತಿಯಿಂದ ವೈಟ್ ಫೀಲ್ಡ್ ವರೆಗಿನ 27 ಕಿ.ಮೀ ವರೆಗೆ ಹೊಸ ಕಾರಿಡಾರ್ ರಸ್ತೆಗಳನ್ನು  ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com