
ಬೆಂಗಳೂರು: ಆರು ದಶಕಗಳಿಂದ ನಡೆಯುತ್ತಿದ್ದ ನಗರದ ಶ್ರೀರಾಂಪುರದ ಸರ್ವೋದಯ ಪ್ರೌಢ ಶಾಲೆಗೆ (ಅನುದಾನಿತ) ಶಿಕ್ಷಣ ಇಲಾಖೆ ಅನುದಾನ ನಿರಾಕರಿಸಿದೆ.
ಇಷ್ಟು ವರ್ಷಗಳಿಂದ ಚೆನ್ನಾಗಿ ನಡೆಯುತ್ತಿದ್ದ ಹೆಸರಾಂತ ಶಾಲೆಗೆ ಇಲಾಖೆ ಏಕಾಏಕಿ 2015ನೇ ಸಾಲಿಗೆ ಅನುಮತಿ ನಿರಾಕರಿಸಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಈ ಶಾಲೆಯಲ್ಲಿ ಮಕ್ಕಳ ಹಾಜರಾತಿ ನಿಯಮದಷ್ಟಿಲ್ಲ ಎಂಬ ಕಾರಣವೊಡ್ಡಿ ಅನುಮತಿ ನಿರಾಕರಿಸಿದ್ದು, ಅಲ್ಲಿನ ಶಿಕ್ಷಕರನ್ನು ಬೇರೆಕಡೆ ವರ್ಗಾಯಿಸಲು ಸಹ ಮುಂದಾಗಿದೆ.
ಅಚ್ಚರಿ ಎಂದರೆ ಶಾಲೆಗೆ ಶ್ರೀರಾಂಪುರ ಸುತ್ತಮುತ್ತಲ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳು ಬರುತ್ತಾರೆ. ಬಡ ಮಕ್ಕಳಿಗೆ ಉಚಿತವಾಗಿ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಜೊತೆಗೆ ನಿಯಮದಂತೆ ಬಹುತೇಕ ಎಲ್ಲಾ ಸೌಲಭ್ಯ ಗಳೂ ಉಂಟು. ಆದರೆ, ಶಿಕ್ಷಣ ಇಲಾಖೆ ಮಾತ್ರ ನಿಗದಿತ ಪ್ರಮಾಣಕ್ಕಿಂತ ಒಂದೆರಡು ಮಕ್ಕಳ ಹಾಜರಾತಿ ಕಡಿಮೆ ಇದೆ ಎಂಬ ಕಾರಣವೊಡ್ಡಿ ಮುಂದಿನ ಶೈಕ್ಷಣಿಕ ಶಾಲೆಗೆ ಅನುಮತಿ ನಿರಾಕರಿಸಿ, ಶಾಲೆಗೆ ಮುಗಿಲು ಮುಚ್ಚಿಸಲು ಹೊರಟಿದೆ.
ಅರ್ಧ ಶತಮಾನದ ಹಿನ್ನೆಲೆ: ಅನುದಾನಕ್ಕೊಳಪಟ್ಟ ಶಾಲೆ ಇದು. ಪ್ರತಿ ತರಗತಿಯಲ್ಲಿ ಕನಿಷ್ಠ 25 ಮಕ್ಕಳು ಇರಬೇಕಾಗುತ್ತದೆ. ಆದರೆ, 2012 -13ನೇ ಸಾಲಿನಲ್ಲಿ ಮಕ್ಕಳ ದಾಖಲಾತಿ ಕಡಿಮೆ ಇರುವುದರಿಂದ ಶಿಕ್ಷಣ ಇಲಾಖೆ ನೋಟಿಸ್ ನೀಡಿತ್ತು. 2013-14ನೇ ಸಾಲಿನಲ್ಲಿ ಮತ್ತೆ ಎಚ್ಚರಿಕೆ ನೀಡಿ ಮಕ್ಕಳನ್ನು ಹೆಚ್ಚಿಸಿಕೊಳ್ಳದೇ ಹೋದರೆ ಕಾರ್ಯ ಸಾಧುವಲ್ಲದ ಶಾಲೆ ಎಂದು ಪರಿಗಣಿಸಬೇಕಾಗುತ್ತದೆ ಬಿಇಒ 2013, ಜ. 31ರಂದು ಶಾಲೆಗೆ ನೋಟಿಸ್ ನೀಡಿದ್ದರು.
ಇದರಿಂದ ಎಚ್ಚೆತ್ತುಕೊಂಡ ಶಾಲೆಯವರು 2014-15ನೇ ಸಾಲಿಗೆ ಮಕ್ಕಳನ್ನು ಹೆಚ್ಚಿಸಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಹೆಣಗಿದ್ದಾರೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮ 2014ರ ಜೂನ್‍ನಲ್ಲಿ 8ನೇ ತರಗತಿಗೆ 27 ವಿದ್ಯಾರ್ಥಿಗಳು, 9ನೇ ತರಗತಿಗೆ 26 ಮತ್ತು 10ನೇ ತರಗತಿಯಲ್ಲಿ 29 ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದರು. ಆದರೆ, ಮುಂದಿನ ಶೈಕ್ಷಣಿಕ ಸಾಲಿಗೆ ಅನುಮತಿ ನೀಡುವ ಪೂರ್ವಭಾವಿಯಾಗಿ ಪರಿಶೀಲನೆಗೆ ಬಂದಾಗ ಹಾಜರಾತಿ ಕೊರತೆ ಕಂಡುಬಂದಿದೆ. ಉತ್ತರವಲಯ ಬಿಇಒ ಮತ್ತೆ ಶಾಲೆಗೆ ಪರಿಶೀಲನೆಗೆ ಬಂದ ಸಂದರ್ಭದಲ್ಲಿ 8ನೇ ತರಗತಿಯಲ್ಲಿ 26 ಮಕ್ಕಳ ಬದಲು 19 ಹಾಜರಿ ಇತ್ತು, 9ನೇ ತರಗತಿಯಲ್ಲಿ 21 ಮಕ್ಕಳ ಬದಲು 16 ಮಂದಿ ಇದ್ದರು. ಇನ್ನು 10ನೇ ತರಗತಿಯಲ್ಲಿ 26 ಮಕ್ಕಳ ಬದಲು 11 ಮಂದಿ ಇದ್ದರು.
ಇದನ್ನಾಧರಿಸಿ ಶಿಕ್ಷಣ ಇಲಾಖೆಯು ಶಾಲೆಗೆ ಮತ್ತೆ ಕಾರಣ ಕೇಳಿ ನೋಟಿಸ್ ನೀಡಿ, ಉತ್ತರ ನೀಡಲು 30 ದಿನಗಳ ಗಡುವು ವಿ„ಸಿತು. ಆದರೆ, ಶಿಕ್ಷಣ ಇಲಾಖೆಗೆ 8 ದಿನಗಳಲ್ಲೇ ಶಾಲೆ ಆಡಳಿತ ಮಂಡಳಿಯು ನೋಟಿಸ್‍ಗೆ ಉತ್ತರ ನೀಡಿ, ಬಿಇಒ ಪರಿಶೀಲನೆಗೆ ಬಂದ ದಿನ ಶಾಲೆಯ ಪಕ್ಕದಲ್ಲಿ (ದೇವಯ್ಯ ಪಾರ್ಕ್)ನಲ್ಲಿ ಅಣ್ಣಮ್ಮ ಉತ್ಸವ ನಡೆದಿದ್ದು, ಹೀಗಾಗಿ ಸಹಜವಾಗಿ ಮಕ್ಕಳು ಗೈರು ಹಾಜರಾಗಿದ್ದರು.
ಈ ಹಿಂದೆ ಶಾಲೆ ಆವರಣದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಕಾರಣ ಕೊಂಚ ಅವ್ಯವಸ್ಥೆಯಾಗಿದ್ದ ಕಾರಣ ದಾಖಲಾತಿ ಕಡಿಮೆ ಇತ್ತು. ಮುಂದಿನ ಸಾಲಿಗೆ ಅನುಮತಿ ನವೀಕರಿಸಿದರೆ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದಾಗಿ ಶಿಕ್ಷಣ ಇಲಾಖೆಗೆ ಕೋರಿಕೊಂಡಿತು. ಆದರೆ, ಕೋರಿಕೆಗೆ ಮನ್ನಣೆ ನೀಡದ ಶಿಕ್ಷಣ ಇಲಾಖೆ, ಏಕಾಏಕಿ
ಈ ಶಾಲೆಯ ಅನುದಾನಿತ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾಯಿಸುವ ಸಂಬಂಧ ಆದೇಶ ಹೊರಡಿಸಿದೆ.
Advertisement