ಪಂಚಾಯತ್ ಚುನಾವಣೆ ಮತ ಎಣಿಕೆಯಲ್ಲಿ ಅಕ್ರಮ: ಸೋತ ಅಭ್ಯರ್ಥಿಗಳ ಆರೋಪ

ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ದೊಡ್ಡತೋಗೂರು ಗ್ರಾಮ ಪಂಚಾಯತ್ ಗೆ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಸಾಕಷ್ಟು...
ಪತ್ರಿಕಾಗೋಷ್ಠಿ ನಡೆಸಿದ ಶಮೀರ್ ಪಾಷ, ನರಸಿಂಹ ರೆಡ್ಡಿ ಮತ್ತು ಜ್ಯೋತಿ
ಪತ್ರಿಕಾಗೋಷ್ಠಿ ನಡೆಸಿದ ಶಮೀರ್ ಪಾಷ, ನರಸಿಂಹ ರೆಡ್ಡಿ ಮತ್ತು ಜ್ಯೋತಿ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ದೊಡ್ಡತೋಗೂರು ಗ್ರಾಮ ಪಂಚಾಯತ್ ಗೆ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು, ಒಂದೆರಡು ಮತಗಳಲ್ಲಿ ನಾವು ಸೋತಿದ್ದೇವೆ. ಆದರೂ ಮರು ಮತ ಎಣಿಕೆ ನಡೆಸುವಂತೆ ಕೋರಿದ್ದರೂ ಚುನಾವಣಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೋತ ಅಭ್ಯರ್ಥಿ ಜ್ಯೋತಿ ಅವರ ಪತಿ ಕೆ.ನರಸಿಂಹ ರೆಡ್ಡಿ, ದೊಡ್ಡತೋಗೂರು ಗ್ರಾಮ ಪಂಚಾಯತ್ ಚುನಾವಣೆಗೆ ಜ್ಯೋತಿ ಆರ್, ಮೇರಿ ಚೌರಮ್ಮ, ಶಮೀರ್ ಪಾಷ ಸ್ಪರ್ಧಿಸಿದ್ದರು. ಜ್ಯೋತಿ ಅವರು 308 ಮತಗಳನ್ನು ಪಡೆದರೆ ಅವರ ಎದುರಾಳಿ ಉಷಾ ಎಂಬವರು 315 ಮತ ಪಡೆದಿದ್ದಾರೆ. ಮೇರಿ ಚೌರಮ್ಮ ಅವರು 304 ಮತ ಪಡೆದರೆ ಅವರ ಎದುರಾಳಿ 306 ಮತ ಪಡೆದಿದ್ದಾರೆ. ಮತ್ತು ಗ್ರಾಮ ಪಂಚಾಯತ್ನಲ್ಲಿ ಸ್ಪರ್ದಿಸಿದ್ದ ಶಮೀರ್ ಪಾಷ 226 ಮತ, ಅವರ ಎದುರಾಳಿ 228 ಮತ ಪಡೆದಿದ್ದಾರೆ. ಇವೆರಲ್ಲರ ಸೋಲಿನ ಅಂತರ ಕೇವಲ ಒಂದೆರಡು ಮತ ಆಗಿವೆ. ಆದರೆ ಫಲಿತಾಂಶ ಪ್ರಕಟಗೊಂಡ ತಕ್ಷಣ ಮರು ಮತ ಎಣಿಕೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರೂ ಚುನಾವಣಾಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಮತ ಎಣಿಕೆ ಸಂದರ್ಭದಲ್ಲಿ ತಪ್ಪು ಸಂಭವಿಸಿದ್ದು, ಅಕ್ರಮ ನಡೆದಿರುವ ಶಂಕೆ ಇದೆ. ಗ್ರಾಫ್ ಸೀಟಿನಲ್ಲಿ ಮೋಸ ಮಾಡಿರುವ ಸಾಧ್ಯತೆ ಇದೆ. ಆದ್ದರಿಂದ ಈ ಗ್ರಾಮ ಪಂಚಾಯತ್ ನಲ್ಲಿ ಮರು ಎಣಿಕೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com