ರಾಣಿ ಚೆನ್ನಮ್ಮ ವಿವಿಗೆ ಬೀಗ ಜಡಿದು ಪ್ರತಿಭಟನೆ

ವಿಶ್ವವಿದ್ಯಾಲಯದ ವಸತಿ ನಿಲಯಗಳಿಗೆ ನೀರು ಪೂರೈಕೆ ಮಾಡದಿರುವುದನ್ನು ಖಂಡಿಸಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸೋಮವಾರ ಬೀಗ ಜಡಿದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು...
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ

ಬೆಳಗಾವಿ: ವಿಶ್ವವಿದ್ಯಾಲಯದ ವಸತಿ ನಿಲಯಗಳಿಗೆ ನೀರು ಪೂರೈಕೆ ಮಾಡದಿರುವುದನ್ನು ಖಂಡಿಸಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸೋಮವಾರ ಬೀಗ ಜಡಿದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕಳೆದ 15 ದಿನಗಳಿಂದ ಸರಿಯಾಗಿ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಮಲ-ಮೂತ್ರ ವಿಸರ್ಜನೆ ಬಳಿಕ ಬಳಕೆಗೂ ನೀರಿಲ್ಲ. ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲ. ತಮ್ಮ ಖುರ್ಚಿ (ಹುದ್ದೆ) ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಕುಲಪತಿ, ಇಬ್ಬರು ಕುಲಸಚಿವರು ಹಾಗೂ ಹಣಕಾಸು ಅಧಿಕಾರಿ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಾದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ತಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು. ಯಾವುದೇ ಕಾರಣಕ್ಕೂ ಬೋಧಕ-ಬೋಧ ಕೇತರ ಸಿಬ್ಬಂದಿಯನ್ನು ಒಳಗಡೆ ಬಿಡುವುದಿಲ್ಲ ಎಂದು ಪಟ್ಟುಹಿಡಿದ ಕಾರಣ ವಿಶ್ವವಿದ್ಯಾಲಯಕ್ಕೆ ಹೋಗಬೇಕಿದ್ದ 300ಕ್ಕೂ ಅಧಿಕ ಪ್ರಾಧ್ಯಾಪಕ ಮತ್ತು ಬೋಧಕೇತರ ಸಿಬ್ಬಂದಿ ಮನೆಗೆ ಮರಳಿದರು. ಮಂಗಳವಾರದಿಂದಲೇ ಸ್ನಾತ
ಕೋತ್ತರ ವಿದ್ಯಾರ್ಥಿಗಳ ಪರೀಕ್ಷೆ ಆರಂಭವಾಗಲಿದ್ದು, ಪರಿಸ್ಥಿತಿ ಹೀಗಾದರೆ ನಾವು ಯಾವಾಗ ಅಭ್ಯಾಸ ಮಾಡಬೇಕು. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ನಮ್ಮ ಗಮನವೆಲ್ಲ ಇಂತಹ ಕ್ಷುಲ್ಲಕ ವಿಚಾರದಸುತ್ತವೇ ತಿರುಗಿ ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ಬಂದಲ್ಲಿ ನಾವೇನು ಮಾಡಬೇಕೆಂಬುದು ಪ್ರಶ್ನಿಸಿದರು.

ಕೈಕೊಟ್ಟ ಪಂಪ್‍ಸೆಟ್: ವಿದ್ಯಾರ್ಥಿ ನಿಲಯಗಳಿಗೆ ನೀರು ರೈಸಬೇಕಾಗಿರುವ ಪಂಪ್‍ಸೆಟ್‍ಗಳು ಸುಟ್ಟು 15 ದಿನ ಕಳೆದರೂ ಪೇರಿ ಮಾಡಿಲ್ಲ. ಈ ಹಿಂದೆ ಪಂಪ್‍ಸೆಟ್ ಸುಟ್ಟಿದ್ದ ಸಂದರ್ಭದಲ್ಲಿ
ರಿಪೇರಿ ಮಾಡಿದ ವ್ಯಕ್ತಿಗೆ ಸಕಾಲಕ್ಕೆ ಬಿಲ್ ಪಾವತಿಸದ ಕಾರಣ ಈ ಬಾರಿ ತ ರಿಪೇರಿ ಮಾಡಲಿಲ್ಲ. ಇನ್ನೊಬ್ಬರಿಗೆ ಹೇಳಿ ದುರಸ್ತಿ ಮಾಡಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 15 ದಿನಗಳಿಂದ ನಮ್ಮ ಪಾಡು ಹೇಳತೀರದಾಗಿದೆ. ಹತ್ತಿರದ ಸ್ನೇಹಿತರು, ಲಾಡ್ಜ್ ಗಳಿಗೆ ತೆರಳಿ ನಮ್ಮ ನಿತ್ಯಕರ್ಮ ಮುಗಿಸಿಕೊಳ್ಳುತ್ತಿದ್ದೇವೆ. ಯಾರೂ ನಮ್ಮ ಸಮಸ್ಯೆ ಕೇಳುತ್ತಿಲ್ಲ ಎಂದು ಆರೋಪಿಸಿದರು.

ಜೂ.9ರಿಂದ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಮೂಲ ಸೌಕರ್ಯಗಳಿಗೆ ಆಗ್ರಹಿಸಿ, ಹೋರಾಟ ನಡೆಸುತ್ತಿರುವುದರಿಂದ ಮತ್ತು ವಿಶ್ವವಿದ್ಯಾಲಯದ ಆವರಣದ ಒಳಗಡೆ ಯಾವೊಬ್ಬ ಸಿಬ್ಬಂದಿಯನ್ನೂ ಬಿಡದ ಕಾರಣ, ಪರೀಕ್ಷೆ ಮುಂದೂಡುವ ಸಾಧ್ಯತೆಯಿದೆ. ಈ ನಡುವೆ ಪ್ರಭಾರಿ ಕುಲಪತಿ, ಕುಲ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳು ಸಹ ದೂರವಾಣಿ ಸ್ವೀಕರಿಸುತ್ತಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ. ಸಮಸ್ಯೆಯನ್ನೂ ಬಗೆಹರಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com