ಭಯೋತ್ಪಾದನೆ ಪ್ರಕರಣ: ಮೇಲ್ಮನವಿ ಸಲ್ಲಿಸದಂತೆ ಸರ್ಕಾರಕ್ಕೆ ಸಾದಿಕ್ ಸಮೀರ್ ಮನವಿ

ಕೆಲ ವೈದ್ಯಕೀಯ ಮತ್ತು ಎಂಜಿನಿಯರ್ ವಿದ್ಯಾರ್ಥಿಗಳು ಸೇರಿದಂತೆ 17 ಮಂದಿ ಮುಸ್ಲಿಂ ಯುವಕರನ್ನು ಭಯೋತ್ಪಾದನಾ ಆರೋಪದಿಂದ ಹುಬ್ಬಳ್ಳಿ...
ಪತ್ರಿಕಾಗೋಷ್ಠಿಯಲ್ಲಿ ಸಯ್ಯದ್ ಸಾದಿಕ್ ಸಮೀರ್ ಮತ್ತಿತರರು ಹಾಜರಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಸಯ್ಯದ್ ಸಾದಿಕ್ ಸಮೀರ್ ಮತ್ತಿತರರು ಹಾಜರಿದ್ದರು.

ಬೆಂಗಳೂರು: ಕೆಲ ವೈದ್ಯಕೀಯ ಮತ್ತು ಎಂಜಿನಿಯರ್ ವಿದ್ಯಾರ್ಥಿಗಳು ಸೇರಿದಂತೆ 17 ಮಂದಿ ಮುಸ್ಲಿಂ ಯುವಕರನ್ನು ಭಯೋತ್ಪಾದನಾ ಆರೋಪದಿಂದ ಹುಬ್ಬಳ್ಳಿ ನ್ಯಾಯಾಲಯ ಮುಕ್ತಗೊಳಿಸಿದ್ದು, ರಾಜ್ಯ ಸರ್ಕಾರ ಇದರ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬಾರದು ಎಂದು ಪ್ರಕರಣದ 12 ಆರೋಪಿಯಾಗಿದ್ದ ಸಯ್ಯದ್ ಸಾದಿಕ್ ಸಮೀರ್ ಮನವಿ ಮಡಿದ್ದಾರೆ.

ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಬಂಧಿಸಲಾಗಿತ್ತು. ನಾವು ಯಾವುದೇ ದೇಶ ದ್ರೋಹ ಕೆಲಸಗಳಲ್ಲಿ ಭಾಗಿಯಾಗಿಲ್ಲ. ಆದರೆ, ಅಲೋಕ್ ಕುಮಾರ್ ನೇತೃತ್ವದ ಪೊಲೀಸರು ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಬಂಧಿಸಿದ್ದರು. ಆದರೆ, ಈ ಆರೋಪದಿಂದ ನ್ಯಾಯಾಲಯ ನಮ್ಮನ್ನು ಮುಕ್ತಗೊಳಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಾದಿಕ್ ಸಮೀರ್ ಹೇಳಿದ್ದಾರೆ.
ಪೊಲೀಸರು ನಮ್ಮ ಮನೆಯ ಮೇಲೆ ದಾಳಿ ನಡೆಸಿ ಇಸ್ಲಾಮಿಕ್ ಸಾಹಿತ್ಯ ಪುಸ್ತಕ, ಸಿಡಿಗಳನ್ನು ವಶಪಡಿಕೊಂಡು ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿದರು. ಆದರೆ, ಪೊಲೀಸರು ಹಾಜರುಪಡಿಸಿದ ಸಾಕ್ಷಿಗಳು ಆರೋಪ ಸಾಬೀತು ಪಡಿಸುವಲ್ಲಿ ವಿಫಲವಾಗಿದ್ದು, ನ್ಯಾಯಾಲಯವೇ ನಮ್ಮನ್ನು ನಿರಪರಾಧಿ ಎಂದು ತೀರ್ಪು ನೀಡಿದೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಸಾಕಷ್ಟು ಹಣ ವ್ಯಯವಾಗಿದೆ. ಇನ್ನೂ, ನಮಗೆ ಕೋರ್ಟ್ ಗಳಿಗೆ ಅಲೆಯುವಂತಹ ಸಾಮರ್ಥ್ಯವಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ಅಲ್ಲದೇ, ಮತ್ತೆ ಮತ್ತೆ ನ್ಯಾಯಾಲಯದ ವಿಚಾರಣೆಗೆ ಓಡಾಡುವಷ್ಟು ಸಾಮರ್ಥ್ಯ ನಮ್ಮಲಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ನಮ್ಮ ವಿರುದ್ಧ ಮೇಲ್ಮನವಿ ಸಲ್ಲಿಸಬಾರದು ಎಂದು ಸಾದಿಕ್ ಸಮೀರ್ ಮನವಿ ಮಾಡಿದ್ದಾರೆ.
ಸಾದಿಕ್ ಸಮೀರ್ ಪ್ರಕರಣ
2008ರಲ್ಲಿ ಸಿಓಡಿ ಪೊಲೀಸರು ಸಯ್ಯದ್ ಸಾದಿಕ್ ಸಮೀರ್ ಅವರನ್ನು ಶಂಕಿತ ಉಗ್ರನೆಂದು ಬಂಧಿಸಿದ್ದರು. ಈ ಆರೋಪಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದನು ಎಂದು ಆರೋಪಿಸಲಾಗಿತ್ತು. ತಮ್ಮ ಮೇಲಿನ ಆರೋಪಕ್ಕೆ ಯಾವ ಪುರಾವೆಯೂ ಇಲ್ಲ ಎಂಬ ಆಧಾರದಲ್ಲಿ 2008ರಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸರಕಾರಿ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಆರೋಪಿಯಿಂದ ವಶಪಡಿಸಿಕೊಳ್ಳಲಾದ ಹಾರ್ಡ್‌ಡಿಸ್ಕ್‌ನಲ್ಲಿ ಬಾಂಬ್ ತಯಾರಿಸುವ ಅಂಶಗಳಿವೆ. ಇದನ್ನು ಹೈದರಾಬಾದ್‌ನ ಫೊರೆನ್ಸಿಕ್ ಲ್ಯಾಬ್‌ಗೆ ಪರೀಕ್ಷೆಗಾ ಕಳುಹಿಸಲಾಗಿದೆ ಎಂದು ವಾದ ಮಂಡಿಸಿದ್ದರು. 2010ರಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಯಾವುದೇ ವರದಿ ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಾದಿಕ್ ಮತ್ತೆ ಜಾಮೀನು ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಇದನ್ನು ತಿರಸ್ಕರಿಸಿ, ಸಾಧ್ಯವಾದಷ್ಟು ಬೇಗ ಪ್ರಕರಣದ ವಿಚಾರಣೆ ಮುಂದುವರಿಸಿದಂತೆ ಸೆಷನ್ಸ್ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು. ಸರಕಾರಿ ಅಭಿಯೋಜಕರು ಯಾವುದೇ ಪುರಾವೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ 2011 ರಲ್ಲಿ ಸುಪ್ರೀಂಕೋರ್ಟ್ ಸಾದಿಕ್‌ಗೆ ಜಾಮೀನು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com