ಮರಳಲ್ಲಿ ಲೋಕಾಯುಕ್ತ ವರದಿ ಲೀನ

ಬಾಗಲಕೋಟೆಯ ಜಮಖಂಡಿ ತಾಲೂಕಿನಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ ಆರೋಪಿ ಗಳಾದ ಮೂವರು ತಹಸೀಲ್ದಾರರು ಹಾಗೂ ಐಎಫ್ಎಸ್ ಅಧಿ ...
ಅಕ್ರಮ ಹಣ (ಸಾಂದರ್ಭಿಕ ಚಿತ್ರ)
ಅಕ್ರಮ ಹಣ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಬಾಗಲಕೋಟೆಯ ಜಮಖಂಡಿ ತಾಲೂಕಿನಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ ಆರೋಪಿ ಗಳಾದ ಮೂವರು ತಹಸೀಲ್ದಾರರು ಹಾಗೂ ಐಎಫ್ಎಸ್ ಅಧಿ ಕಾರಿಯೊಬ್ಬರ ವಿರುದ್ಧ ಲೋಕಾಯುಕ್ತ ಸಂಸ್ಥೆ ನೀಡಿದ್ದ  ತನಿಖಾ ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆ ತಿರಸ್ಕರಿಸಿದೆ. ಇದಷ್ಟೇ ಅಲ್ಲ, ಅವ್ಯವಹಾರ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಕೆ.ಆರ್. ಸುಂದರ ಅವರ ವಿರುದ್ಧದ ಸಿಐಡಿ ತನಿಖೆಯನ್ನೂ ಕೈಬಿಡಲಾಗಿದೆ. ಇವರ ವಿರುದ್ಧ 2011ರ ರಾಜ್ಯ ಪತ್ರಾಂಕಿತ ಅಧಿಕಾರಿಗಳ ನೇಮಕ ಸಂದರ್ಭದಲ್ಲಿ ಅವ್ಯವಹಾರ ನಡೆಸಿದ್ದರು ಎಂಬ ಆರೋಪವಿತ್ತು.
ಆದರೆ ಸೂಕ್ಷ್ಯ ಸಾಕ್ಷಾಧಾರ ಲಬಿsಸದೇ ಇರುವ ಹಿನ್ನೆಲೆಯಲ್ಲಿ ಕೇವಲ ಇಲಾಖಾ ತನಿಖೆ ನಡೆಸಲು ನಿರ್ಧರಿಸಲಾಗಿದೆ.
ಮರಳು ಅಕ್ರಮ ಆರೋಪಿಗಳು ಖುಷ್: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ 2011ರಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ತಹಶೀಲ್ದಾರ್‍ಗಳಾದ ಶಶಿಧರ
ಬಗಲಿ, ಎಸ್.ಎಸ್.ಸೋಮನಾಳ, ಸಿದ್ದಪ್ಪ ಎಂಬುವರು ಭಾಗಿಯಾಗಿದ್ದಾರೆ ಎಂದು ಉಪಲೋಕಾಯುಕ್ತರು ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ ಸಂಪುಟ ಸಭೆ ಈ ವರದಿಯನ್ನು
ತಿರಸ್ಕರಿಸಲು ನಿರ್ಧರಿಸಿದೆ. ಅಕ್ರಮ ಗಣಿಗಾರಿಕೆಗೆ ಕೇವಲ ತಹಶೀಲ್ದಾರ್‍ರನ್ನು ಮಾತ್ರ ಹೊಣೆ ಮಾಡುವುದು ಸರಿಯಲ್ಲ. ಇದಕ್ಕೆ ಕಂದಾಯ, ಪೊಲೀಸ್, ಗಣಿ ಮತ್ತು ಭೂಮಿ ವಿಜ್ಞಾನ ಇಲಾಖೆ ಅಧಿಕಾರಿಗಳೂ ಕಾರಣ. ಹೀಗಾಗಿ ಇವರೆಲ್ಲರ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. 2011ರ ಕೆಪಿಎಸ್‍ಸಿ ಅವ್ಯವಹಾರದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕೆಪಿಎಸ್‍ಸಿ ಕಾರ್ಯದರ್ಶಿ ಆಗಿದ್ದ ಕೆ.ಆರ್.ಸುಂದರ ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಸಿಐಡಿ ವರದಿಯಲ್ಲಿ ಇಲ್ಲ. ಆದರೆ ಅವರು ಅಧಿಕಾರದಲ್ಲಿ ಇದ್ದಾಗ ಕಚೇರಿಯ ಸಿಸಿಟಿವಿಯನ್ನು ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ ಎಂಬ ಆರೋಪಕ್ಕೆ ಮಾತ್ರ ಸಾಕ್ಷಿ ದೊರಕಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ತನಿಖೆ ನಡೆಸಲು ತೀರ್ಮಾಸಲಾಗಿದೆ. ಕಲಬುರಗಿ ಜಿಲ್ಲೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಫ್ಎಸ್ ಅಧಿಕಾರಿ ಶೇಖರ್ ಅವರು ಆಡಳಿತ ನಿರ್ವಹಣೆ ಸಂದರ್ಭದಲ್ಲಿ  ರು. 65 ಲಕ್ಷ ವನ್ನು ಗ್ರಾಮೀಣ ಕ್ರೀಡಾ ಅಧಿಕಾರಿಗೆ ಬಿಡುಗಡೆ ಮಾಡಿದ್ದರು. ಆದರೆ ಈ ಹಣದಲ್ಲಿ ಅವ್ಯವಹಾರವಾಗಿತ್ತು. ಇದಕ್ಕೆ ಶೇಖರ್ ಅವರೇ ಕಾರಣ ಎಂದು ಲೋಕಾಯುಕ್ತ ವರದಿ ನೀಡಿತ್ತು. ಆದರೆ ಅವ್ಯವಹಾರ ನಡೆದ ಸಂದರ್ಭದಲ್ಲಿ ಶೇಖರ್ ವರ್ಗಾವಣೆ ಆಗಿದ್ದರಿಂದ ಲೋಕಾಯುಕ್ತ ವರದಿ ತಿರಸ್ಕರಿಸಲು ನಿರ್ಧರಿಸಲಾಗಿದೆ.
ಎಂ. ಸಾವಿತ್ರಿ ಸೇವೆಯಿಂದ ವಜಾ: ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಎಂ.ಸಾವಿತ್ರಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ
ಟಿ.ಬಿ.ಜಯಚಂದ್ರ ಈ ವಿಷಯ ತಿಳಿಸಿದ್ದಾರೆ.



ಸಂಪುಟದ ಇತರೆ ನಿರ್ಧಾರಗಳು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ನಿರ್ಮಿಸಲುಉದ್ದೇಶಿಸಲಾಗಿದ್ದ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮಳಿಗೆಯ ನಿರ್ಮಾಣ ಜವಾಬ್ದಾರಿಯನ್ನು ಪೋಪ್ಯುಲಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಮಂಜೂರು ಮಾಡಲಾಗಿದ್ದ 35 ಎಕರೆ ಜಾಗವನ್ನು 50 ಎಕರೆಗೆ ವಿಸ್ತರಿಸಲಾಗಿದೆ. ಟಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಅಧ್ಯಕ್ಷರನ್ನಾಗಿ ನಿವೃತ್ತ ನ್ಯಾ.ಭಕ್ತವತ್ಸಲ ಅವರನ್ನು ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧಾರ  ಬೀದರ್ ನಗರದ ಶಹಾಪುರದಿಂದ ಬಾಲ್ಕಿ (ರು30.47 ಕೋಟಿ ), ಹುಮ್ನಾಬಾದ್ ನಿಂದ ಮನ್ನಾ ಅಕೇಲಿ (ರು.17.29 ಕೋಟಿ ) ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ.

 ಚಿಕ್ಕಪಡಸಲಗಿ ಬ್ಯಾರೇಜ್‍ನಿಂದ ವಿಜಯಪುರ ಜಿಲ್ಲೆಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ಅಸ್ತು.

29ರಿಂದ ಅಧಿವೇಶನ ಜೂನ್ 29ರಿಂದ ಜುಲೈ 10ರವರೆಗೆ ರಾಜ್ಯ ವಿಧಾನ ಮಂಡಲ ಅಧಿವೇಶನವನ್ನು ಬೆಳಗಾವಿ ಸುವರ್ಣಸೌಧದಲ್ಲಿ ನಡೆಸುವ ಮಹತ್ವದ ನಿರ್ಧಾರವನ್ನು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಇದು ಕೇವಲ ಆಡಳಿತಾತ್ಮಕ ನಿರ್ಧಾರ. ಇದರಲ್ಲಿ ಯಾವುದೇ ರಾಜಕೀಯ ನಡೆ ಇಲ್ಲ. ಜುಲೈ 13ರಿಂದ 24ರವರೆಗೆ ಬೆಂಗಳೂರಿನಲ್ಲಿ ಅಧಿವೇಶನ ನಡೆಯುತ್ತದೆ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com