ಒಂದೇ ದಿನ 13 ಜನರಿಗೆ ಕಚ್ಚಿದ ಬೀದಿ ನಾಯಿಗಳು

ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಭಾನುವಾರ ಒಂದೆ ದಿನ ಸುಮಾರು 13 ಜನರು ನಾಯಿ ಕಡಿತದಿಂದ ಆಸ್ಪತ್ರೆಗೆ ದಾಖಲಾದ ಘಟನೆ ಜರುಗಿದೆ.
ಬೀದರ್ ನಲ್ಲಿ ಬೀದಿ ನಾಯಿ ಹಾವಳಿ
ಬೀದರ್ ನಲ್ಲಿ ಬೀದಿ ನಾಯಿ ಹಾವಳಿ

ಬೀದರ್: ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಭಾನುವಾರ ಒಂದೆ ದಿನ ಸುಮಾರು 13 ಜನರು ನಾಯಿ ಕಡಿತದಿಂದ ಆಸ್ಪತ್ರೆಗೆ ದಾಖಲಾದ ಘಟನೆ ಜರುಗಿದೆ.

ಬೀದರ್ ನಗರದ ವಾರ್ಡ್ ಸಂಖ್ಯೆ 3ರ ಮುಸ್ತೈದ್ ಪೂರಾ ಬಡಾವಣೆಯಲ್ಲಿ ವಾಸಿಸುತ್ತಿರುವ ಜಮ್ಮು ಅಬ್ದುಲ್ ರಫೀಕ್ (3) ಎಂಬ ಚಿಕ್ಕ ಬಾಲಕಿಯ ಕಿವಿಗೆ ಕಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡ ಬಾಲಕಿಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಜಮ್ಮು ಎಂಬ ಬಾಲಕಿಯ ತಾಯಿ ಕುಡಿಯಲು ನೀರು ತರಲು ಹೋದಾಗ ಮನೆ ಹೊರಗೆ ನಿಂತಿದ್ದ ಬಾಲಕಿಗೆ 3-4 ನಾಯಿಗಳು ಸೇರಿ ಬಾಲಕಿಯ ಕಿವಿಗೆ ಕಚ್ಚಿದ್ದರಿಂದ ಗಂಭೀರ ಗಾಯಗಳಾಗಿವೆ. ಮಗಳ ನೋವಿಗೆ ತಾಯಿ ಕಣ್ಣೀರು ಸುರಿಸುತ್ತಿದ್ದಾಳೆ.

ಇದೇ ಬಡಾವಣೆಯಲ್ಲಿ ವಾಸಿಸುತ್ತಿರುವ ಬಡ ಚಂದ್ರಮ್ಮ (50) ಎಂಬ ಮಹಿಳೆಯ ಕಾಲಿಗೆ ನಾಯಿ ಕಚ್ಚಿದ್ದು, ಅವಳು ಕೂಡ ಭಾನುವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾಳೆ. ಇದಲ್ಲದೆ ಅನೇಕ ಚಿಕ್ಕ ಮಕ್ಕಳಿಗೆ ನಾಯಿ ಕಡಿತದ ಹಾವಳಿ ಹೆಚ್ಚಾಗಿದೆ.

ಆಸ್ಪತ್ರೆಯಲ್ಲಿ ಔಷಧಿ ಕೊರತೆ
ನಾಯಿ ಕಡಿತದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೆ, ಇತ್ತ ಜಿಲ್ಲಾ ಆಸ್ಪತ್ರೆಯಲ್ಲಿ ಔಷಧಿಯ ಕೊರತೆ ಕಾಡುತ್ತಿದೆ. ಭಾನುವಾರ ಮುಸ್ತೈದ್‍ಪುರಾ ಬಡಾವಣೆಯ ಮೂರು ವರ್ಷದ
ಬಾಲಕಿಗೆ ನಾಯಿ ಕಡಿತದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ನಾಯಿ ಕಡಿತದ ಔಷಧಿ ಇಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎಂದು ನಗರಸಭೆ ಸದಸ್ಯ ನಬೀ ಖುರೇಶಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com