
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಜಾಹೀರಾತುಗಳ ಅಕ್ರಮ ಹಾಗೂ ಅವ್ಯವಹಾರದ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ದಿಡೀರ್ ಎಂದು ಹೊಸದಾಗಿ ಜಾಹೀರಾತು ನವೀಕರಣ ನಿರ್ಧಾರ ತೆಗೆದುಕೊಂಡಿರುವ ಬಿಬಿಎಂಪಿ ಆಡಳಿತಾ„ಕಾರಿ ಹಾಗೂ ಆಯುಕ್ತರಿಗೆ ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ. ಅಡಿ ನೋಟಿಸ್ ಜಾರಿ ಮಾಡಿದ್ದಾರೆ. ಜಾಹೀರಾತುಗಳಿಗೆ ಅನುಮತಿ, ನವೀಕರಣ, ತೆರಿಗೆ ವಸೂಲಿ ಮುಂತಾದ ವಿಚಾರಗಳಲ್ಲಿ ಭಾರಿ ಅಕ್ರಮ ಹಾಗೂ ಅವ್ಯವಹಾರ ನಡೆದಿದೆ ಎನ್ನುವ ದೂರುಗಳು ಲೋಕಾಯುಕ್ತಕ್ಕೆ ಬಂದಿದ್ದವು. ಪ್ರಾಥಮಿಕ ತನಿಖೆಯಲ್ಲಿ ಸೂಕ್ತ ತೆರಿಗೆ ವಸೂಲಿ, ಅಕ್ರಮವಾಗಿ ಜಾಹೀರಾತು ಹಾಕಿದವರಿಂದ ದಂಡ ವಸೂಲಿ ಮಾಡದೆ ಭಾರಿ ಅಕ್ರಮ ನಡೆದಿರುವುದು ಕಂಡು ಬಂದಿತ್ತು. ಅಲ್ಲದೇ ಜಾಹೀರಾತು ಸಂಸ್ಥೆಗಳು ಬಿಬಿಎಂಪಿ ಜಾಹೀರಾತು ಬೈಲಾ ಉಲ್ಲಂಘಿಸಿ ನಗರದೆಲ್ಲೆಡೆ ಅವ್ಯಾಹತವಾಗಿ ಜಾಹೀರಾತು ಹಾಕಿಕೊಂಡು ಹಣ ಸಂಪಾದಿಸುತ್ತ ಬಿಬಿಎಂಪಿಗೆ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವುದು ತಿಳಿದು ಬಂದಿದೆ ಎಂದು ನೋಟಿಸ್ ನಲ್ಲಿ ಉಪಲೋಕಾಯುಕ್ತರು ಪ್ರಸ್ತಾಪಿಸಿದ್ದಾರೆ.
ಅವ್ಯವಹಾರ ಹೇಗೆ?: ಒಂದೇ ಅನುಮತಿ ಪಡೆದು ಹಲವೆಡೆ ಜಾಹೀರಾತು ಹಾಕುವುದು, ಕಂಬಕ್ಕೆ ಅಳವಡಿಸಲಾಗುವುದು ಜಾಹೀರಾತಿನ ಮೌಲ್ಯ ರೂ.5 ಸಾವಿರವರೆಗೂ ಇದ್ದರೂ ಕೇವಲ ರೂ. 500ಕ್ಕೆ ಮಂಜೂರು ಮಾಡುವುದು. ನವೀಕರಣ ಮಾಡಿಸದೆ ಜಾಹೀರಾತು ಹಾಕಿಕೊಂಡಿರುವುದು ಹೀಗೆ ಹಲವು ವಿಧಗಳಲ್ಲಿ ಭಾರಿ ಅವ್ಯವಹಾರ ನಡೆದಿದೆ. ಈ ಸಂಬಂಧ ಕೆಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದು ವಿಚಾರಣೆ ಹಂತದಲ್ಲಿವೆ. ಇದನ್ನೆ ನೆಪವಾಗಿಸಿಕೊಂಡು ಜಾಹೀರಾತು ಸಂಸ್ಥೆಗಳು ಜಾಹೀರಾತು ಹಾಕಿಕೊಂಡು ದುಡ್ಡು ಮಾಡಿಕೊಂಡಿವೆ. ಜಾಹೀರಾತು ಅಕ್ರಮದ ಬಗ್ಗೆ ಸಮಗ್ರ ವರದಿಯನ್ನು 2015ರ ಫೆ.2ರಂದು ಬಿಬಿಎಂಪಿಗೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಸರ್ವಾನುಮತದ ನಿರ್ಧಾರವನ್ನು ಪಾಲಿಕೆ ತೆಗೆದುಕೊಂಡಿತ್ತು. ಆದರೆ, ಜಾಹೀರಾತು ಸಂಪೂರ್ಣ ನಿಷೇಧದ ಬದಲು, ಪಾರದರ್ಶಕವಾಗಿ, ವ್ಯವಸ್ಥಿತವಾಗಿ ಜಾಹೀರಾತುಗಳ ನಿರ್ವಹಣೆಯಾಗಲಿ ಎನ್ನುವ ಸಲಹೆಯನ್ನು ನೀಡಲಾಗಿತ್ತು. ಈ ಸಂಬಂಧ ಮುಖ್ಯಮಂತ್ರಿಗಳು ಈ ಬಗ್ಗೆ ಚರ್ಚಿಸಿ ನೂತನ ಜಾಹೀರಾತು ಪಾಲಿಸಿ ತರುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಈ ವಿಚಾರವಾಗಿ ಸರ್ಕಾರ ಯಾವುದೇ ಪಾಲಿಸಿ ಮಾಡಿಲ್ಲ. ಬಿಬಿಎಂಪಿ ಕೌನ್ಸಿಲ್‍ನಲ್ಲಿ ತೆಗೆದುಕೊಂಡಿರುವ ಸಂಪೂರ್ಣ ಜಾಹೀರಾತು ನಿಷೇಧ ನಿರ್ಧಾರಕ್ಕೆ ಒಪ್ಪಿಗೆಯಾಗಲಿ, ತಿರಸ್ಕಾರವನ್ನಾಗಲಿ ಮಾಡಿಲ್ಲ ಎಂಬುದನ್ನು ಉಪಲೋಕಾಯುಕ್ತರು ಗುರುತಿಸಿದ್ದಾರೆ. ಈ ನಡುವೆ ಏಕಾಏಕಿ ಜಾಹೀರಾತು ಲೈಸೆನ್ಸ್ ನವೀಕರಣ ನಿರ್ಧಾರ ಕೈಗೊಂಡಿರುವುದು ಆಶ್ಚರ್ಯ ಉಂಟುಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಲೋಕಾಯುಕ್ತ ಸುಭಾಷ್ ಬಿ ಅಡಿ ಅವರು ಬಿಬಿಎಂಪಿ ಆಡಳಿತಾಧಿಕಾರಿ ವಿಜಯ್ ಭಾಸ್ಕರ್ ಹಾಗೂ ಆಯುಕ್ತ ಕುಮಾರ್ ನಾಯಕ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಜೂನ್ 22ರಂದು ಖುದ್ದು ಹಾಜರಾಗಿ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿದ್ದಾರೆ.
ಲೋಕಾಯುಕ್ತ ಪ್ರಶ್ನೆಗಳು:
Advertisement