ವಿಭಜನೆ ಇಲ್ಲದೇ ಚುನಾವಣೆ: ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಚರ್ಚೆ

ವಿಭಜನೆ ಇಲ್ಲದೇ ಚುನಾವಣೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ ವಿಭಜನೆ ಇಲ್ಲದೇ ಚುನಾವಣೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಜೂ.18 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಈ ವಿಚಾರವಾಗಿ ಚರ್ಚೆ ನಡೆದಿದೆ. ಮುಂದಿನ ವಾರಾಂತ್ಯದ ವೇಳೆಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಜೊತೆಗೆ ಸೋಮವಾರ ಬಿಬಿಎಂಪಿ ಚುನಾವಣೆ ಮೀಸಲು ಸಂಬಂಧಪಟ್ಟಂತೆ ರಾಜ್ಯ ಹೈಕೋರ್ಟ್ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ.

ಹೀಗಾಗಿ ಚುನಾವಣೆ ಎದುರಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ. ಆ ಸಂದರ್ಭದಲ್ಲಿ ತ್ರಿಭಜನೆ ಮಾಡಿ ಚುನಾವಣೆ ನಡೆಸುವುದು ಅಪ್ರಸ್ತುತವಾಗಲಿದೆ. ಈ ಹಿನ್ನೆಲೆಯಲ್ಲಿ ಒಬ್ಬ ಮೇಯರ್ ಒಪ್ಪ ಉಪ ಮೇಯರ್ ಆಧಾರದ ಮೇಲೆಯೇ ಚುನಾವಣೆ ನಡೆಸಬೇಕಾಗುತ್ತದೆ. ಬಿಬಿಎಂಪಿ ವಿಭಜನೆ ಸಂಬಂಧಪಟ್ಟಂತೆ ಬಿ.ಎಸ್ ಪಾಟೀಲ್ ನೇತೃತ್ವದ ಸಮಿತಿ ಇನ್ನೂ ತನ್ನ ಅಂತಿಮ ವರದಿ ನೀಡಿಲ್ಲ. ಜೊತೆಗೆ ವಿಧಾನ ಪರಿಷತ್ ನ ಸೆಲೆಕ್ಟ್ ಕಮಿಟಿ ಇನ್ನೂ ವರದಿ ನೀಡಿಲ್ಲ.

ಬೇರೆ ಬೇರೆ ನಗರಗಳ ಮಹಾನಗರ ಪಾಲಿಕೆಯಾ ಸ್ವರೂಪದ ಬಗ್ಗೆ ಸೆಲೆಕ್ಟ್ ಕಮಿಟಿಗೆ ಅಂತಿಮ ವರದಿ ಲಭಿಸಿಲ್ಲ. ಹೀಗಾಗಿ ವಾರಾಂತ್ಯದ ವೇಳೆಗೆ ಚುನಾವಣೆ ಘೋಷಣೆಯಾದರೆ ತ್ರಿಭಜನೆ ಸೂತ್ರವಿಲ್ಲದೇ ಹಳೆ ಮಾದರಿಯಲ್ಲೇ ಚುನಾವಣೆ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ.

ಸಚಿವ ಸಂಪುಟ ಸಭೆ ಬಳಿಕ ನಡೆದ ಸುದ್ದಿಗೋಷ್ಠಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಚುನಾವಣೆ ಘೋಷಣೆಯಾದರೆ ಒಬ್ಬ ಮೇಯರ್, ಒಬ್ಬ ಉಪಮೇಯರ್ ಸೂತ್ರದಂತೆ ನಾವು ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ಮೀಸಲಾತಿ: ನಾಳೆ ತೀರ್ಪು

ಬಿಬಿಎಂಪಿ ಚುನಾವಣೆ ಸಂಬಂಧ 2011 ರ ಜನಗಣತಿ ಆಧರಿಸಿ ವಾರ್ಡ್ ಮರು ವಿಂಗಡಿಸಲು ಮತ್ತು ಮೀಸಲಾತಿ ನಿಗದಿಪಡಿಸಲು ಅನುಮತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿ ತೀರ್ಪನ್ನು ಹೈಕೋರ್ಟ್ ಸೋಮವಾರ ಪ್ರಕಟಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com