ಮೈಸೂರು: ನಗರದ ತಿಲಕ್‍ನಗರದಲ್ಲಿ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ನಡೆಸುತ್ತಿರುವ ಕಿವುಡ ಮತ್ತು ಮೂಗರ ಸರ್ಕಾರಿ ಶಾಲೆಯ 16 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.
ಈ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಕಾಣೆಯಾಗುತ್ತಿದ್ದಾರೆ. ಜ.2 ರಂದು ಚಂದ್ರು (11), ಕುಮಾರ (13), ಉಮೇಶ (10), ಪಾಲೂಸ್ (15), ಅಶ್ವತ್ಥ(13), ಅಮರ್(10), ರಾಮ್(15), ರಾಜೇಶ್ (15) ಮತ್ತು ಬಾಲರಾಜ್ (16), ಫೆ.2 ರಂದು ಧರ್ಮಕುಮಾರ್ (16), ಗಣೇಶ (13), ಜಗದೀಶ (14) ಮತ್ತು ರಾಜು (12), ಏ.11 ರಂದು ರೋಹನ್‍ಕುಮಾರ್ (17), ನಾಟ್ಯ (10) ಮತ್ತು ಸೋನುಕುಮಾರ್ (13) ನಾಪತ್ತೆಯಾಗಿದ್ದಾರೆ.
ಈ ಬಾಲಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂರವಾಣಿ 0821- 2418113/313/513 ಮೂಲಕ ಮಂಡಿ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
Advertisement