• Tag results for school

ರಾಜ್ಯದಲ್ಲಿ 24,308 ಮಕ್ಕಳು ಶಾಲೆಯಿಂದ ಹೊರಗೆ: ಹೈಕೋರ್ಟ್ ಗೆ ಮಾಹಿತಿ

ರಾಜ್ಯದಲ್ಲಿ ಶಾಲೆಗಳಿಂದ ವಿಮುಖರಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಈ ಕುರಿತು ಕರ್ನಾಟಕ ಹೈಕೋರ್ಟ್ ಗೆ ನೀಡಲಾದ ಮಾಹಿತಿಯಲ್ಲಿ 24,308 ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ ಎಂಬ ಅಂಶ ಲಭ್ಯವಾಗಿದೆ.

published on : 12th August 2022

ಮಕ್ಕಳನ್ನು ಶಿಕ್ಷಕರು ಹೇಗೆ ತಿದ್ದಿತೀಡಬೇಕು, ಮಾರ್ಗದರ್ಶನ ನೀಡಬೇಕು?: ಬೆಂಗಳೂರಿನ ಶಿಕ್ಷಕಿಗೆ ನ್ಯಾಯಾಧೀಶರ ಪಾಠ!

ಶಿಕ್ಷೆಯ ಹೆಸರಿನಲ್ಲಿ ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಗೊಳಪಡಿಸುವುದು ಸ್ವೀಕಾರಾರ್ಹವಲ್ಲ, ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. 

published on : 11th August 2022

ತುಂಬಿ ಹರಿಯುತ್ತಿರುವ ಹೊಳೆಗೆ ಅಲುಗಾಡುವ ಕಾಲುಸಂಕ: ಪತ್ತೆಯಾಗದ ಸನ್ನಿಧಿ, ಸರ್ಕಾರದ ವಿರುದ್ಧ ಆಕ್ರೋಶ

ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಬೀಜಮಕ್ಕಿ ಗ್ರಾಮದಲ್ಲಿ ಎಂಟು ತಿಂಗಳ ಹಿಂದೆ ಕಾಲುಸಂಕಕ್ಕೆ ಸರ್ಕಾರ ಹಣ ಮಂಜೂರು ಮಾಡಿದಾಗ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಇದುವರೆಗೂ ಸೇತುವೆ ಕಾಮಗಾರಿ ಆರಂಭವಾಗಿಲ್ಲ. ಈ ಮೂಲಕ ಸರ್ಕಾರಿ ಅಧಿಕಾರಿಗಳ ನಿರಾಸಕ್ತಿ ಬಯಲಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

published on : 10th August 2022

ಉಡುಪಿ: ಬೈಂದೂರಿನಲ್ಲಿ ಕಾಲುಸಂಕ ದಾಟುವಾಗ ಜಾರಿಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ, ಇನ್ನೂ ಪತ್ತೆಯಾಗದ ಸನ್ನಿಧಿ

ಕರಾವಳಿ ಭಾಗದಲ್ಲಿ ಮಳೆಯ ರುದ್ರನರ್ತನ ಮುಂದುವರಿದಿದೆ. ಮಳೆಗಾಲ ಬಂತೆಂದರೆ ಈ ಭಾಗದ ಹಳ್ಳಿಗಳ ತೋಡು, ಹಳ್ಳಗಳಲ್ಲಿ ಪ್ರವಾಹ, ನೆರೆ ಉಂಟಾಗುವುದು ಸಾಮಾನ್ಯ. ಪುಟ್ಟ ಮಕ್ಕಳಿಗೆ ಶಾಲೆಗೆ ಹೋಗಲು ಭಾರೀ ಮಳೆಯ ನಡುವೆ ಹರಸಾಹಸಪಡಬೇಕು.

published on : 9th August 2022

ಪತ್ರಕರ್ತ ಪಾತ್ರಧಾರಿ ವಿದ್ಯಾರ್ಥಿಯಿಂದ ತನ್ನ ಶಾಲೆಯ ಅವ್ಯವಸ್ಥೆ ವಿಡಿಯೋ ವೈರಲ್; ಶಿಕ್ಷಕರ ಬೆದರಿಕೆ; ಸಚಿವರ ನೆರವಿನ ಭರವಸೆ!

ಪುಟ್ಟ ಬಾಲಕನೋರ್ವ ಪತ್ರಕರ್ತ ವೇಷಧಾರಿಯಾಗಿ ತನ್ನದೇ ಶಾಲೆಯ ಅವ್ಯವಸ್ಥೆಯನ್ನು ವಿಡಿಯೋ ಮೂಲಕ ಜಗಜ್ಜಾಹೀರು ಮಾಡಿದ್ದು, ಈ ವಿಡಿಯೋ ಬೆನ್ನಲ್ಲೇ ಬಾಲಕನಿಗೆ ಶಾಲೆಯ ಶಿಕ್ಷಕರೇ ಬೆದರಿಕೆ ಒಡ್ಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

published on : 6th August 2022

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಪಲ್ಟಿ: ಅದೃಷ್ಟವಶಾತ್ 25 ಮಕ್ಕಳು ಬಚಾವ್

ರಾಮನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಇದರ ನಡುವೆ ಇಂದು ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಶಾಲೆಯ ಬಸ್ ಉರುಳಿದಿದ್ದಿದ್ದು ದೊಡ್ಡ ದುರಂತ ತಪ್ಪಿದೆ. 

published on : 4th August 2022

ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ: ಮಂಗಳೂರು ಸುತ್ತಮುತ್ತ ಇಂದು ಶಾಲಾ-ಕಾಲೇಜುಗಳಿಗೆ ರಜೆ, 12 ಮಂದಿ ವಶಕ್ಕೆ, ಪೊಲೀಸರು ಹೈ ಅಲರ್ಟ್

ಕರಾವಳಿ ಜಿಲ್ಲೆ ಸರಣಿ ಹತ್ಯೆಯಿಂದ ಬೂದಿ ಮುಚ್ಚಿದ ಕೆಂಡದಂತಾಗಿದೆ. ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಮಂಗಳೂರು ಹೊರವಲಯ ಸುರತ್ಕಲ್ ನಲ್ಲಿ ಕಳೆದ ರಾತ್ರಿ ಫಾಜಿಲ್ ಮಂಗಲಪೇಟೆ ಎಂಬ 23 ವರ್ಷದ ಮುಸ್ಲಿಂ ಯುವಕನನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಕೊಂದು ಹಾಕಿದ್ದಾರೆ.

published on : 29th July 2022

37 ಸರ್ಕಾರಿ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ವಾರದರಜೆ: ವರದಿ ಕೇಳಿದ ಎನ್ ಸಿಪಿಸಿಆರ್

ಬಿಹಾರದಲ್ಲಿ  37 ಸರ್ಕಾರಿ ಶಾಲೆಗಳು ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ಘೋಷಣೆ ಮಾಡಿ ಇದೀಗ ವಿವಾದಕ್ಕೆ ಗ್ರಾಸವಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ ಸರ್ಕಾರದಿಂದ ವರದಿ ಕೇಳಿದೆ.

published on : 27th July 2022

ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳನ್ನು ದತ್ತು ಪಡೆಯಲು ಅಧಿಕಾರಿಗಳಿಗೆ ಸೂಚನೆ

ತಾಲೂಕು ಹಾಗೂ ರಾಜ್ಯ ಮಟ್ಟದ ಶಿಕ್ಷಣ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯೂ ರಾಜ್ಯದಲ್ಲಿ ಒಂದು ಪದವಿ ಪೂರ್ವ ಕಾಲೇಜು ಹಾಗೂ ಶಾಲೆಯನ್ನು ದತ್ತು ಪಡೆಯಲು ಸೂಚಿಸಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಆದೇಶಿಸಿದ್ದಾರೆ. 

published on : 26th July 2022

ಬೆಂಗಳೂರು: ಆರ್ಕಿಡ್ಸ್ ಶಾಲೆಯ ಮತ್ತೊಂದು ಬ್ರ್ಯಾಂಚ್ ವಿರುದ್ಧ ಎಫ್ ಐಆರ್ ದಾಖಲು!

ಆರ್ಕಿಡ್ಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮತ್ತೊಂದು ಬ್ರ್ಯಾಂಚ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಬಾರಿ ಹರಳೂರು ರಸ್ತೆಯಲ್ಲಿರುವ ಆರ್ಕಿಡ್ಸ್ ಇಂಟರ್‌ನ್ಯಾಶನಲ್ ಸ್ಕೂಲ್‌ ನ ಬಾಗಿಲು ಹಾಕಿಸಲಾಗಿದೆ.

published on : 23rd July 2022

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಒದಗಿಸಲು 132 ಕೋಟಿ ರೂ. ಬಿಡುಗಡೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ

ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಗಳನ್ನು ಒದಗಿಸಲು 132 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

published on : 22nd July 2022

ಉಡುಪಿ: ಕವರ್ ಸಹಿತ ಚಾಕಲೇಟ್ ತಿಂದ 7 ವರ್ಷದ ಬಾಲಕಿ ಉಸಿರುಗಟ್ಟಿ ಸಾವು!

ಬಸ್‌ಗಾಗಿ ಕಾಯುತ್ತಿದ್ದ 7 ವರ್ಷದ ಬಾಲಕಿ ಚಾಕಲೇಟ್‌ ತಿನ್ನುವ ವೇಳೆ ಕವರ್‌ ಸಮೇತ ನುಂಗಿದ ಹಿನ್ನೆಲೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉಡುಪಿಯ ಬೈಂದೂರು ಬಳಿಯ ಬಿಜೂರಿನಲ್ಲಿ ನಡೆದಿದೆ.

published on : 21st July 2022

ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ನ 10ನೇ ಕ್ಲಾಸ್ ವಿದ್ಯಾರ್ಥಿಯಿಂದಲೇ ಇ- ಮೇಲ್!

ಬಾಂಬ್ ಬೆದರಿಕೆ ಬಂದಿದ್ದ ನ್ಯಾಶನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ನಲ್ಲಿಯೇ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿಯಿಂದಲೇ ಈ ಕೃತ್ಯ ನಡೆದಿದೆ ಎಂಬುದು ಇದೀಗ ಬಹಿರಂಗವಾಗಿದೆ.

published on : 20th July 2022

ಬೆಂಗಳೂರು: ಡಿಕೆ ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಬೆದರಿಕೆ!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಆರ್ ಆರ್ ನಗರದಲ್ಲಿರುವ ಈ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಇ ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ.

published on : 18th July 2022

ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಕರ್ಫ್ಯೂ ಜಾರಿ!

ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಕಲ್ಲಕುರಿಚಿ ತಾಲೂಕು ಮತ್ತು ಚಿನ್ನಸೇಲಂ ತಾಲೂಕಿನ ಕೆಲವು ಭಾಗಗಳಲ್ಲಿ ಜುಲೈ 31ರವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ.

published on : 17th July 2022
1 2 3 4 5 6 > 

ರಾಶಿ ಭವಿಷ್ಯ