ಬಿಬಿಎಂಪಿ: ಹೊಸ ಯೋಜನೆಗಳಿಗೆ ಸಂಪುಟ ಅಸ್ತು

ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಹಳೇ ಮತ್ತು ಹೊಸ ಯೋಜನೆಗಳನ್ನು ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ...
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಹಳೇ ಮತ್ತು ಹೊಸ ಯೋಜನೆಗಳನ್ನು ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.

ಟೆಂಡರ್ ಸಮಸ್ಯೆಯಿಂದಾಗಿ ಬಿಬಿಎಂಪಿ ವ್ಯಾಪ್ತಿಯ ನೆನಗುದಿಗೆ ಬಿದ್ದಿದ್ದ ರಾಜಕಾಲುವೆ ಮತ್ತು ವಿವಿಧ ಕಣಿವೆಗಳಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಒಪ್ಪಿಗೆ ಸೂಚಿಸಲಾಗಿದೆ.

ಬಿಬಿಎಂಪಿಯಲ್ಲಿ ಅನೇಕ ಕಾಮಗಾರಿಗಳ ಟೆಂಡರ್ ಮೊತ್ತ ಹೆಚ್ಚಾದ್ದ ಕಾರಣ ಮೂರು ಬಾರಿ ಟೆಂಡರ್ ಆಹ್ವಾನಿಸಿದರೂ ಯಾವುದೇ ಗುತ್ತಿಗೆದಾರರೂ ಸ್ಪಂದಿಸಿರಲಿಲ್ಲ. ಇಂಥ ಕಾಮಗಾರಿಗಳಿಗೆ ನಿಗದಿ ಮಾಡಿದ್ದ ಮಿತಿಯನ್ನು ಶೇ.15ರ ವರೆಗೂ ವಿಸ್ತರಿಸಲಾಗಿದೆ. ಈ ಮೂಲಕ ಟೆಂಡರ್‍ಗೆ ಗುತ್ತಿಗೆದಾರರು ಸ್ಪಂದಿಸುವಂತೆ
ಮಾಡಲಾಗಿದೆ.

ಏನಿದು ಟೆಂಡರ್

  • ಚಲ್ಲಘಟ್ಟ ಕಣಿವೆಯ ಕಾಲುವೆಗಳಲ್ಲಿ ರು.12ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುವುದು.
  • ಅದೇ ರೀತಿಯಲ್ಲಿ ರು.6 ಕೋಟಿ ಮತ್ತು ರು.11ಕೋಟಿ ವೆಚ್ಚದ ಮತ್ತೆರಡು ಪ್ಯಾಕೇಜ್‍ಗಳು.
  • ಕೋರಮಂಗಲ ಕಣಿವೆಯ ಕಾಲವೆಯಲ್ಲಿ ರು.26ಕೋಟಿ ಮೊತ್ತದ ಪ್ಯಾಕೇಜ್.
  • ಶಿವಾಜಿನಗರದಲ್ಲಿ ರು.11.17ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ.
  • ಮೇಖ್ರಿ ವೃತ್ತದಿಂದ ಹಲಸೂರು, ಕೆ.ಆರ್. ಪುರ, ವೈಟ್ ಫೀಲ್ಡ್ ಮೂಲಕ ಸಾಗುವ ರಸ್ತೆಯನ್ನು ಹೂಡಿ ಓ ಫಾರಂ ಜಂಕ್ಷನ್ ವರೆಗಿನ ರಸ್ತೆಯನ್ನು ರು.140ಕೋಟಿ ವೆಚ್ಚದಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ಮಾಡುವುದು.
  • ಹೊರ ವರ್ತುಲ ರಸ್ತೆಯಲ್ಲಿ ಮೈಸೂರು ರಸ್ತೆಯಿಂದ ಸಿಲ್ಕ್ ಮಂಡಳಿ ಜಂಕ್ಷನ್ ವರೆಗೂ ರು.153 ಕೋಟಿ ವೆಚ್ಚದಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ಮಾಡುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com