ಆಲಿಕಲ್ಲು ಮಳೆ: ಬೆಳೆಹಾನಿ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ

ಆಲಿಕಲ್ಲು ಮಳೆಯಿಂದಾಗಿ ಹಾನಿ ಅನುಭವಿಸಿ, ತೀವ್ರ ಸಂಕಷ್ಟದಲ್ಲಿರುವ ರಾಜ್ಯದ ವಿವಿಧ ಭಾಗದ ದ್ರಾಕ್ಷಿ, ದಾಳಿಂಬೆ ಮತ್ತು ಪಪ್ಪಾಯಿ ಬೆಳೆಗಾರರ ನೋವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಪರಿಹಾರ ನೀಡಲು ಪರ್ಯಾಯ ವ್ಯವಸ್ಥೆ ಮಾಡಿದೆ...
ಬೆಳಗಾವಿ ಚಳಿಗಾಲ ಅಧಿವೇಶನ
ಬೆಳಗಾವಿ ಚಳಿಗಾಲ ಅಧಿವೇಶನ

ವಿಧಾನಸಭೆ: ಆಲಿಕಲ್ಲು ಮಳೆಯಿಂದಾಗಿ ಹಾನಿ ಅನುಭವಿಸಿ, ತೀವ್ರ ಸಂಕಷ್ಟದಲ್ಲಿರುವ ರಾಜ್ಯದ ವಿವಿಧ ಭಾಗದ ದ್ರಾಕ್ಷಿ, ದಾಳಿಂಬೆ ಮತ್ತು ಪಪ್ಪಾಯಿ ಬೆಳೆಗಾರರ ನೋವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಪರಿಹಾರ ನೀಡಲು ಪರ್ಯಾಯ ವ್ಯವಸ್ಥೆ ಮಾಡಿದೆ.

ವಿಧಾನಸಭೆಯಲ್ಲಿ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಆಲಿಕಲ್ಲು ಮಳೆಯಿಂದ ಹಾನಿಯಾದ ಬೆಳೆಗಳಿಗೆ ಆಯಾ ಜಿಲ್ಲಾಧಿಕಾರಿಗಳಿಳು ಸಿಆರ್‍ಎಫ್ (ಪ್ರಕೃತಿ ವಿಕೋಪ ನಿಧಿ) ನಿಧಿಯಿಂದ ಪರಿಹಾರ ನೀಡಲು ಅನುಮತಿ ನೀಡಲಾಗಿದೆ ಎಂದರು.

ಇದು ತೋಟಗಾರಿಕೆ ಬೆಳೆಯಾಗಿದ್ದರಿಂದ ಮತ್ತು ಅದು ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದರಿಂದ ಕೇಂದ್ರದ ನೆರವಿಗಾಗಿ ಮನವಿ ಮಾಡಲಾಗಿತ್ತು. ಆದರೆ, ಕೇಂದ್ರ ಕೃಷಿ ಇಲಾಖೆ ಹಾನಿಯ ವರದಿಯನ್ನು ಆರ್ಥಿಕ ಇಲಾಖೆಗೆ ಕಳುಹಿಸಿದ್ದರಿಂದ ನೆರವು ಬರುವುದು ವಿಳಂಬವಾಗಲಿದೆ. ಅದೇ ಕಾಲಕ್ಕೆ ಸ್ಥಳೀಯವಾಗಿ  ರೈತರ ನೋವನ್ನು ಕಣ್ಣಾರೆ ಕಂಡು ವಾಸ್ತವಾಂಶ ಅರಿತಿದ್ದ ವಿಜಯಪುರ ಜಿಲ್ಲಾಧಿಕಾರಿಗಳು ಸಿಆರ್‍ಎಫ್ ನಿಧಿಯಿಂದ ಈ ಪರಿಹಾರ ನೀಡಬಹುದೇ ಎಂದು ಸರ್ಕಾರಕ್ಕೆ ಕೇಳಿದ್ದರು. ಹಾಗಾಗಿ ಕೇಂದ್ರದ ನೆರವಿಗಾಗಿ ಕಾಯದೇ ಜಿಲ್ಲಾಧಿಕಾರಿಗಳಿಗೆ ರೈತರಿಗೆ ನೆರವಾಗಲು ಅನುಮತಿ ನೀಡಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com