
ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಲಗ್ಗೆರೆ ನಿವಾಸಿ ಮುರುಗನ್(38) ಮೃತಪಟ್ಟ ವ್ಯಕ್ತಿ.
ಲಗ್ಗೆರೆಯಲ್ಲೇ ಕ್ಯಾಂಟೀನ್ ನಡೆಸುತ್ತಿರುವ ಆತ ಗುರುವಾರ ಬೆಳಗ್ಗೆ 8.30ಕ್ಕೆ ವಿಜಿನಾಪುರಕ್ಕೆ ಹೋಗಿದ್ದು, ರಸ್ತೆ ದಾಟಲು ಮುಂದಾದ ಆತನಿಗೆ ಮಾರತ್‌ಹಳ್ಳಿ ಕಡೆ ಹೊರಟಿದ್ದ ಬಸ್ ಡಿಕ್ಕಿ ಹೊಡೆದಿದೆ.
ಅಪಘಾತದ ನಂತರ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement