• Tag results for ಸಾವು

ಕೋವಿಡ್-19 ಪರೀಕ್ಷಾ ವರದಿ ಬರುವುದಕ್ಕೆ ಕಾಯಬೇಕಿಲ್ಲ, ಕುಟುಂಬಸ್ಥರಿಗೆ ಸಿಗಲಿದೆ ಶಂಕಿತರ ಮೃತದೇಹ!

ಕೋವಿಡ್-19 ಶಂಕಿತ ವ್ಯಕ್ತಿಗಳು ಮೃತಪಟ್ಟರೆ ಅವರ ಪಾರ್ಥಿವ ಶರೀರವನ್ನು, ಪರೀಕ್ಷಾ ವರದಿ ಬರುವುದಕ್ಕೂ ಮುನ್ನವೇ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬಹುದೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

published on : 2nd July 2020

ಕೊವಿಡ್-19: ಬಳ್ಳಾರಿಯಲ್ಲಿ ಇಬ್ಬರು, ಗದಗ, ದಕ್ಷಿಣ ಕನ್ನಡ, ಹಾಸನದಲ್ಲಿ ತಲಾ ಒಂದು ಸಾವು

ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುರುವಾರ ಗಣಿ ನಾಡು ಬಳ್ಳಾರಿಯಲ್ಲಿ ಇಬ್ಬರು ಹಾಗೂ ಗದಗ, ದಕ್ಷಿಣ ಕನ್ನಡ ಮತ್ತು ಹಾಸನದಲ್ಲಿ ತಲಾ ಒಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ. 

published on : 2nd July 2020

ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 19,148 ಮಂದಿಗೆ ಕೊರೋನಾ, ಸೋಂಕಿತರ ಸಂಖ್ಯೆ 6.04 ಲಕ್ಷಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 19,148 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,04,641ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ. 

published on : 2nd July 2020

ಬೆಳಗಾವಿ: ಲಂಡನ್ ನಿಂದ ವಾಪಸಾಗಿದ್ದ 32 ವರ್ಷದ ವ್ಯಕ್ತಿ ಕೊರೋನಾಗೆ ಬಲಿ

ಕಳೆದ ವಾರ ಲಂಡನ್ ನಿಂದ ವಾಪಾಸಾಗಿದ್ದ 32 ವರ್ಷದ ವ್ಯಕ್ತಿ ಅಥಣಿಯಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.

published on : 1st July 2020

ಕೋವಿಡ್-19: ಒಂದೇ ದಿನ 18,653 ಮಂದಿಯಲ್ಲಿ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 5.85 ಲಕ್ಷಕ್ಕೆ ಏರಿಕೆ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,653 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,85,493ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. 

published on : 1st July 2020

ವೈದ್ಯರ ನಿರ್ಲಕ್ಷ್ಯ: ಚಿಕಿತ್ಸೆ ಸಿಗದೆ ಬಲಿಯಾದ ಮಗು, ಎದೆಗಪ್ಪಿಕೊಂಡು ರೋಧಿಸಿದ ಪೋಷಕರು!

ಕುತ್ತಿಗೆ ಊತ ಹಾಗೂ ಅತೀವ್ರ ಜ್ವರದಿಂದ ಬಳಲುತ್ತಿದ್ದ ಒಂದು ವರ್ಷದ ಮಗು ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ಕಣ್ಣೆದುರು ಆಡವಾಡಿಕೊಂಡು ಬೆಳೆಯಬೇಕಿದ್ದ ಮುದ್ದು ಮಗುವಿನ ಶವ ಕಂಡ ಪೋಷಕರು ಬಿಗಿದಪ್ಪಿಕೊಂಡು ರೋಧಿಸಿದ ಮನಕಲಕುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. 

published on : 30th June 2020

ವಿಶ್ವದೆಲ್ಲೆಡೆ ಕೊರೋನಾ ಆರ್ಭಟ: 10.41 ಕೋಟಿ ಮಂದಿಯಲ್ಲಿ ಸೋಂಕು ಪತ್ತೆ, 5.08 ಲಕ್ಷ ಮಂದಿ ಸಾವು!

ವಿಶ್ವದಾದ್ಯಂತ ಕೊರೋನಾ ಆರ್ಭಟ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 10,412,343ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂತ ತಿಳಿದುಬಂದಿದೆ. 

published on : 30th June 2020

ದೇಶಾದ್ಯಂತ ಒಂದೇ ದಿನ 18,522 ಮಂದಿಗೆ ಕೊರೋನಾ, ಸೋಂಕಿತರ ಸಂಖ್ಯೆ 5.66 ಲಕ್ಷಕ್ಕೆ ಏರಿಕೆ, 16,893 ಮಂದಿ ಸಾವು

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,522 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,66,840ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ. 

published on : 30th June 2020

ಆಂಧ್ರ ಪ್ರದೇಶದಲ್ಲಿ ಮತ್ತೊಂದು ಅನಿಲ ದುರಂತ: ವಿಶಾಖಪಟ್ಟಣ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ; 2 ಸಾವು, ನಾಲ್ವರು ಅಸ್ವಸ್ಥ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮತ್ತೊಂದು ಅನಿಲ ದುರಂತ ಸಂಭವಿಸಿದ್ದು, ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ಇಬ್ಬರು ಸಾವನ್ನಪ್ಪಿ, ನಾಲ್ವರು ಅಸ್ವಸ್ಥಗೊಂಡಿರುವ ಘಟನೆ ಮಂಗಳವಾರ ನಡೆದಿದೆ. 

published on : 30th June 2020

ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಹತ್ಯೆ, ದೋಡಾ ಜಿಲ್ಲೆ ಉಗ್ರ ಮುಕ್ತ: ಜಮ್ಮು-ಕಾಶ್ಮೀರ ಪೊಲೀಸರು

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ಸೋಮವಾರ ನಸುಕಿನ ಜಾವ ಅನಂತ್ ನಾಗ್ ಜಿಲ್ಲೆಯಲ್ಲಿ ಹತ್ಯೆಗೈದ ಮೂವರು ಉಗ್ರರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಕೂಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 29th June 2020

ವಾಲ್ಮಾರ್ಟ್ ವಿತರಣಾ ಕೇಂದ್ರದಲ್ಲಿ ಗುಂಡಿನ ದಾಳಿ: ಇಬ್ಬರ ಸಾವು, 4 ಮಂದಿ ಗಾಯ

ಕ್ಯಾಲಿಫೋರ್ನಿಯಾದ ರೆಡ್ ಬ್ಲಫ್‌ನಲ್ಲಿರುವ ವಾಲ್‌ಮಾರ್ಟ್ ವಿತರಣಾ ಕೇಂದ್ರದಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇತರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

published on : 28th June 2020

ಅಸ್ಸಾಂನಲ್ಲಿ ಕಾಗದ ಕಾರ್ಖಾನೆಗಳು ಬಂದ್‍: ಸಾವಿನ ಸಂಖ್ಯೆ 67 ಕ್ಕೆ ಏರಿಕೆ

ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಪೇಪರ್ ಕಾರ್ಪೊರೇಶನ್ ಲಿಮಿಟೆಡ್‌ನ ಕ್ಯಾಚರ್ ಪೇಪರ್ ಮಿಲ್ಸ್ ನ ಮತ್ತೊಬ್ಬ ಉದ್ಯೋಗಿ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಶನಿವಾರ ಮೃತಪಡುವುದರೊಂದಿಗೆ ಕಚಾರ್ ಮತ್ತು ನಾಗಾನ್ ಕಾಗದ ಕಾರ್ಖಾನೆ ನೌಕರರ ಸಾವಿನ ಸಂಖ್ಯೆ 67ಕ್ಕೇರಿದೆ.

published on : 28th June 2020

ಕೋವಿಡ್‌-19: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಇಬ್ಬರ ಸಾವು

ಕೋವಿಡ್‌-19 ಸೋಂಕಿನಿಂದ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

published on : 28th June 2020

ಬೆಂಗಳೂರಿನಲ್ಲಿ ಮತ್ತೋರ್ವ ಎಎಸ್ಐ ಬಲಿ ಪಡೆದ ಕೊರೊನಾ

ಸಿಲಿಕಾನ್ ಸಿಟಿ ಪೊಲೀಸರನ್ನು ಬೆಂಬಡದೇ ಬೇತಾಳದಂತೆ ಕಾಡುತ್ತಿರುವ ಕೊರೊನಾ, ಇದೀಗ ಮತ್ತೋರ್ವ ಎಎಸ್ ಐ ಯನ್ನು ಬಲಿ ಪಡೆದುಕೊಂಡಿದೆ.

published on : 28th June 2020

ಭಾರತದಲ್ಲಿ ಕೊರೋನಾ ರಣಕೇಕೆ: ಒಂದೇ ದಿನ ದಾಖಲೆಯ 19,906 ಮಂದಿಯಲ್ಲಿ ವೈರಸ್ ಪತ್ತೆ, 5.28 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

ದೇಶದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 19,906 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,28,859ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

published on : 28th June 2020
1 2 3 4 5 6 >