ಖಮೇನಿ ಪತ್ನಿ ಸತ್ತಿದ್ದಾರಾ ಅಥವಾ ಬದುಕಿದ್ದಾರಾ? ಸ್ಪಷ್ಟನೆ ಕೊಟ್ಟ ಇರಾನ್ ಮಾಧ್ಯಮಗಳು!

ಇದೀಗ ಅವರು ಜೀವಂತವಾಗಿದ್ದಾರೆ ಎಂದು ಇರಾನಿನ ಸರ್ಕಾರಿ ಮಾಧ್ಯಮಗಳು ಹೇಳಿಕೊಂಡಿವೆ. ಮನ್ಸೌರೆ ಖೋಜಸ್ತೇ ಬಗರ್ಜಾದೆ ಬದುಕುಳಿದಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಫಾರ್ಸ್ ನ್ಯೂಸ್ ಏಜೆನ್ಸಿ ಸ್ಪಷ್ಟಪಡಿಸಿದೆ
Mansoureh Khojasteh Bagherzadeh
ಖಮೇನಿ ಪತ್ನಿ ಮನ್ಸೌರೆ ಖೋಜಸ್ತೇ ಬಗರ್ಜಾದೆ
Updated on

ಟೆಹರಾನ್: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್ ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನ್ಸೌರೆ ಖೋಜಸ್ತೇ ಬಗರ್ಜಾದೆ ಕೂಡಾ ಹತ್ಯೆಯಾಗಿದ್ದಾರೆ ಎನ್ನಲಾಗಿತ್ತು.

ಆದರೆ, ಇದೀಗ ಅವರು ಜೀವಂತವಾಗಿದ್ದಾರೆ ಎಂದು ಇರಾನಿನ ಸರ್ಕಾರಿ ಮಾಧ್ಯಮಗಳು ಹೇಳಿಕೊಂಡಿವೆ. ಮನ್ಸೌರೆ ಖೋಜಸ್ತೇ ಬಗರ್ಜಾದೆ ಬದುಕುಳಿದಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಫಾರ್ಸ್ ನ್ಯೂಸ್ ಏಜೆನ್ಸಿ ಗುರುವಾರ ಸ್ಪಷ್ಟಪಡಿಸಿದೆ. ಆಕೆಯ ಸಾವಿನ ಕುರಿತು ಈ ಹಿಂದಿನ ವರದಿಗಳು ಸುಳ್ಳು ಎಂದು ಸುದ್ದಿಸಂಸ್ಥೆ ತಿಳಿಸಿದೆ.

ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಗರ್ಜಾದೆ ಸಾವನ್ನಪ್ಪಿರುವುದಾಗಿ ಇರಾನ್ ನ ಹಲವು ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದರೆ, ಅವರು ಕೋಮಾದಲ್ಲಿದ್ದಾರೆ ಎಂದು ತಸ್ನಿಮ್ ನ್ಯೂಸ್ ಏಜೆನ್ಸಿ ವರದಿ ಮಾಡಿತ್ತು. ಗಾಯದ ವರದಿಗಳನ್ನು ಆಧರಿಸಿ ತಪ್ಪಾಗಿ ವರದಿ ಮಾಡಿರುವುದಾಗಿ ಫಾರ್ಸ್ ನ್ಯೂಸ್ ಏಜೆನ್ಸಿ ಹೇಳಿದೆ.

ಇರಾನ್‌ನ ಹೊಸ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ತಮ್ಮ ತಾಯಿಯ ಮರಣವನ್ನು ಉಲ್ಲೇಖಿಸದೆ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯನ್ನು ಬಿಡುಗಡೆ ಮಾಡಿದ ನಂತರ ಅವರ ಬಗ್ಗೆ ಪ್ರಶ್ನೆಗಳು ಹುಟ್ಟಿತು.

ಮಶಾದ್‌ನಲ್ಲಿ ಶಿಯಾ ಕುಟುಂಬದಲ್ಲಿ ಜನಿಸಿದ ಬಗರ್ಜಾದೆ 1964 ರಲ್ಲಿ 17 ನೇ ವಯಸ್ಸಿನಲ್ಲಿ ಅಲಿ ಖಮೇನಿ ಅವರನ್ನು ವಿವಾಹವಾದರು. ದಂಪತಿಗೆ ಆರು ಮಕ್ಕಳಿದ್ದರು. 86 ವರ್ಷದ ಅಲಿ ಖಮೇನಿ ಅವರನ್ನು ಯುಎಸ್ ಮತ್ತು ಇಸ್ರೇಲ್ ಟೆಹ್ರಾನ್‌ನಲ್ಲಿರುವ ಅವರ ನಿವಾಸದ ಮೇಲೆ ಸಂಘಟಿತ ವೈಮಾನಿಕ ದಾಳಿಯ ನಂತರ ಹತ್ಯೆ ಮಾಡಲಾಯಿತು.

Mansoureh Khojasteh Bagherzadeh
ಮಧ್ಯಪ್ರಾಚ್ಯ ಉದ್ವಿಗ್ನತೆ ಮತ್ತಷ್ಟು ತೀವ್ರ: ಇರಾನ್ ನೂತನ ಪರಮೋಚ್ಛ ನಾಯಕ ಗಾಯಗೊಂಡಿರುವುದು ನಿಜ ಆದರೆ, ಬದುಕಿದ್ದಾನೆ; ಡೊನಾಲ್ಡ್ ಟ್ರಂಪ್

ಈ ದಾಳಿ ವೇಳೆ ಮನ್ಸೌರೆ ಖೋಜಸ್ತೇ ಬಗರ್ಜಾದೆ ಸೇರಿದಂತೆ ಇತರ ಇರಾನ್ ನ ಅತ್ಯುನ್ನತ ನಾಯಕರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com