ಉಡುಪಿ: ಪೊಲೀಸ್ ಮ್ಯಾರಥಾನ್ ವೇಳೆ ಕುಸಿದು ಬಿದ್ದು ಠಾಣಾಧಿಕಾರಿ ನಿಧನ

ನಾಸೀರ್ ಹುಸೇನ್ ಅವರು ಚಿಕ್ಕಮಗಳೂರು ಜಿಲ್ಲೆ ಮೂಲದವರಾಗಿದ್ದು, ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
Nasir Hussain
ಮೃತ ಪಿಎಸ್ಐ ನಾಸೀರ್ ಹುಸೇನ್.
Updated on

ಉಡುಪಿ: ಪೊಲೀಸ್ ಮ್ಯಾರಥಾನ್ ವೇಳೆ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.

ಉಡುಪಿ “ಜಿಲ್ಲಾ ಪೊಲೀಸ್ – ನಮ್ಮ ಪೋಲೀಸ್ ನಮ್ಮ ಹೆಮ್ಮೆ”, “ಎಲ್ಲರಿಗೂ ಫಿಟ್ನಸ್”, “ಡ್ರಗ್ಸ್ ಫ್ರೀ ಕರ್ನಾಟಕ” ಎಂಬ ಧ್ಯೇಯದೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆ ಹುಸೇನ್ 5 ಕಿಮೀ ಮ್ಯಾರಥಾನ್ ಓಟವನ್ನು ಆಯೋಜಿಸಿತ್ತು.

ಮ್ಯಾರಥಾನ್ ನಲ್ಲಿ ಭಾಗವಿಸಿದ್ದ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ (58) ಅವರು ಮೃತಪಟ್ಟಿದ್ದಾರೆ.

ನಾಸೀರ್ ಹುಸೇನ್ ಅವರು ಚಿಕ್ಕಮಗಳೂರು ಜಿಲ್ಲೆ ಮೂಲದವರಾಗಿದ್ದು, ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

Nasir Hussain
ಮತ್ತೊಂದು ಕ್ರಿಕೆಟ್ ದುರಂತ: ಕೋಚ್ ಗೆ ಹೃದಯಾಘಾತ, ಮೈದಾನದಲ್ಲೇ ಸಾವು!

ಜಿಲ್ಲಾ ಪೊಲೀಸ್ ಇಲಾಖೆಯಿಂದ ಭಾನುವಾರ ಬೆಳಿಗ್ಗೆ ಆಯೋಜಿಸಲಾಗಿದ್ದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ನಾಸೀರ್ ಹುಸೇನ್ ಅವರು, ಜೋಡುಕಟ್ಟೆಯ ಟಿ.ಎಂ.ಎ. ಪೈ ಆಸ್ಪತ್ರೆ ಎದುರು ಏಕಾಏಕಿ ಕುಸಿದು ಬಿದ್ದರು.

ತಕ್ಷಣವೇ ಸಹೋದ್ಯೋಗಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ನಾಸಿರ್ ಹುಸೇನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದರು. ಇತ್ತೀಚೆಗೆ ಶೆಟ್ಟಿಕಟ್ಟೆ ಅಪಘಾತ ನಡೆದಾಗ ಅಧಿಕಾರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಕುಂದಾಪುರ ಗ್ರಾಮಾಂತರ ಠಾಣೆಗೆ ಬಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com