ನಕಲಿ ವಾಚ್ ವಶ, ನಾಲ್ವರ ಬಂಧನ

ನೂರು ರುಪಾಯಿಯ ಕೈಗಡಿಯಾರಗಳನ್ನು ಪ್ರತಿಷ್ಠಿತ ಕಂಪನಿ ಕೈಗಡಿಯಾರಗಳೆಂದು ಸಾವಿರಾರು ರುಪಾಯಿಗೆ ಮಾರಾಟ ಮಾಡಿ, ಸಾರ್ವಜನಿಕರನ್ನು...
ನಕಲಿ ವಾಚ್ ಮಾರಾಟ ಮಾಡುತ್ತಿದ್ದ ಆರೋಪಿಗಳು
ನಕಲಿ ವಾಚ್ ಮಾರಾಟ ಮಾಡುತ್ತಿದ್ದ ಆರೋಪಿಗಳು

ಬೆಂಗಳೂರು: ನೂರು ರುಪಾಯಿಯ ಕೈಗಡಿಯಾರಗಳನ್ನು ಪ್ರತಿಷ್ಠಿತ ಕಂಪನಿ ಕೈಗಡಿಯಾರಗಳೆಂದು ಸಾವಿರಾರು ರುಪಾಯಿಗೆ ಮಾರಾಟ ಮಾಡಿ, ಸಾರ್ವಜನಿಕರನ್ನು ವಂಚಿಸುತ್ತಿದ್ದ ಮಳಿಗೆಗಳ ಮೇಲೆ ಚಿಕ್ಕಪೇಟೆ ಪೊಲೀಸರು ದಾಳಿ ನಡೆಸಿ ಸಾವಿರಾರು ನಕಲಿ ವಾಚ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಬಸವನಗುಡಿ ಪುಟ್ಟಣ್ಣ ರಸ್ತೆ ನಿವಾಸಿ ಪ್ರವೀಣ್ ಕುಮಾರ್(41), ಶಿವಾಜಿ ನಗರದ ಇನಾಮ್ ಖಾನ್(33), ಜೆಜೆ ನಗರದ ಶಫೀವುಲ್ಲಾ(36) ಹಾಗೂ ಕಬ್ಬನ್‍ಪೇಟೆಯ ಮನೀಶ್(27) ಎಂಬುವರನ್ನು ಬಂ„ಸಲಾಗಿದೆ.

ಚಿಕ್ಕಪೇಟೆಯಲ್ಲಿರುವ ದೀಪಮ್ ಟೈಮ್ಸ್, ಖಾನ್ ಟೈಮ್ಸ್, ನ್ಯೂ ಸಿಟಿ ಟೈಮ್ಸ್ ಮತ್ತು ಮೆಹ್ತಾಸ್ ಎಂಬ ಅಂಗಡಿಗಳಲ್ಲಿ ಪ್ರತಿಷ್ಠಿತ ರಾಡೋ, ರೊಲೆಕ್ಸ್, ಆರ್ಮನಿ, ಮೌಂಟ್ ಬ್ಲಾಕ್, ಟಾಮಿ ಹಿಲ್ಫಿಗರ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‍ಗಳ ನಕಲಿ ವಾಚುಗಳನ್ನು ಮಾರಾಟ ಮಾಡಲಾಗುತ್ತಿತ್ತು.

ಅಸಲಿ ವಾಚುಗಳನ್ನೇ ಹೋಲುವ ನಕಲು ವಾಚ್‍ಗಳನ್ನು ತಯಾರಿಸಿ, ಶೇ.50ರಿಂದ ಶೇ. 80ರವರೆಗೆ ರಿಯಾಯಿತಿ ಎಂದು ಮಾರಾಟ ಮಾಡಿ, ಸಾರ್ವಜನಿಕರಿಗೆ ಹಾಗೂ ಕಂಪನಿಗಳಿಗೆ ವಂಚಿಸುತ್ತಿದ್ದರು. ಬ್ರ್ಯಾಂಡೆಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದ್ದ ಈ ವಾಚುಗಳ ಮಾರುಕಟ್ಟೆ ಮೌಲ್ಯ ರು.60 ಲಕ್ಷ ಎಂದು ಚಿಕ್ಕಪೇಟೆ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com