ಮಂದಿರ ಮಸೀದಿ ಕಾದಂಬರಿ ಲೋಕಾರ್ಪಣೆ

ಹೇಳಬೇಕೆಂದರೆ ಅದೊಂದು ಸಾಹಿತ್ಯ ಕಾರ್ಯಕ್ರಮ. ಹಾಗೆಂದು ಭಾಷಣದ ಭೋರ್ಗರೆತವಿರಲಿಲ್ಲ, ಬೋರ್ ಹೊಡೆಸುವಂತಹ ಸಂದರ್ಭವೂ ಬರಲಿಲ್ಲ. ತಿಳಿಹಾಸ್ಯ ಲೇಪಿತ ಒಂದೆರಡು ಮಾತುಗಳು, ಮಾತಿಗೆ ಒಪ್ಪುವಂತಹ ಸಂಗೀತ ಸುಧೆ. ಜೊತೆಗೆ ತಾರಾಕಳೆ...
ಮಂದಿರ ಮಸೀದಿ ಕಾದಂಬರಿ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕ ಸುರೇಶ್, ಅನ್ವರ್ ಮಾಣಿಪ್ಪಾಡಿ, ಅಶೋಕ್ ಕುಮಾರ್, ಸುಪ್ರಿತ್, ಸುಕೃತ, ನವೀನ್ ಕೃಷ್ಣ, ನವೀನ್ ಸಾಗರ್, ಸುಂದರಶ್ರೀ ಹಾಜರಿದ್
ಮಂದಿರ ಮಸೀದಿ ಕಾದಂಬರಿ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕ ಸುರೇಶ್, ಅನ್ವರ್ ಮಾಣಿಪ್ಪಾಡಿ, ಅಶೋಕ್ ಕುಮಾರ್, ಸುಪ್ರಿತ್, ಸುಕೃತ, ನವೀನ್ ಕೃಷ್ಣ, ನವೀನ್ ಸಾಗರ್, ಸುಂದರಶ್ರೀ ಹಾಜರಿದ್

ಬೆಂಗಳೂರು: ಹೇಳಬೇಕೆಂದರೆ ಅದೊಂದು ಸಾಹಿತ್ಯ ಕಾರ್ಯಕ್ರಮ. ಹಾಗೆಂದು ಭಾಷಣದ ಭೋರ್ಗರೆತವಿರಲಿಲ್ಲ, ಬೋರ್ ಹೊಡೆಸುವಂತಹ ಸಂದರ್ಭವೂ ಬರಲಿಲ್ಲ. ತಿಳಿಹಾಸ್ಯ ಲೇಪಿತ ಒಂದೆರಡು ಮಾತುಗಳು, ಮಾತಿಗೆ ಒಪ್ಪುವಂತಹ ಸಂಗೀತ ಸುಧೆ. ಜೊತೆಗೆ ತಾರಾಕಳೆ.

ಅಂತಿಮ ಎಂಎ ವಿದ್ಯಾರ್ಥಿ ಕೆ.ಎನ್.ಸುಪ್ರೀತ್ ಅವರ `ಮಂದಿರ ಮಸೀದಿ' ಕಾದಂಬರಿ ಬಿಡುಗಡೆ ಸಮಾರಂಭವದು. ಲೇಖಕ ಅನ್ವರ್ ಮಾಣಿಪ್ಪಾಡಿ, ಚಿತ್ರ ನಿರ್ದೇಶಕ ಕಂ ಸಾಹಿತಿ ಬಿ.ಸುರೇಶ್, ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್, ಹಿರಿಯ ನಟಿ ಸುಂದರಶ್ರೀ ಕಾದಂಬರಿ ಬಿಡುಗಡೆಯನ್ನು ಸಾಕ್ಷೀಕರಿಸಿದರು. ನಂತರ ನಟಿ ನೀತೂ ಸಹ ಸೇರಿಕೊಂಡರು.

ಪುಸ್ತಕ ಬಿಡುಗಡೆ ತರುವಾಯ ಅನ್ವರ್ ಮಾಣಿಪ್ಪಾಡಿ ಮಾತನಾಡಿ, ಕಾದಂಬರಿಕಾರ ಸುಪ್ರೀತ್ ಸಣ್ಣ ವಯಸ್ಸಿನಲ್ಲೇ ಸಂಶೋಧ ನಾತ್ಮಕ ಕಾದಂಬರಿ ಬರೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ದೇಶದ ಎಲ್ಲಾ ಜನಾಂಗದ ವಿಷಯವನ್ನು ಅರಿತು, ಹಿಂದೂ- ಮುಸ್ಲಿಂ ಅಂದರೇನು, ಬುದಿಟಛಿಜೀವಿಗಳಂತಿರುವವರು ಹೇಗೆ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ, ಹೇಗೆ ಪ್ರಶಸ್ತಿ ಪಡೆಯುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಅರ್ಥವಾಗುವ ರೀತಿ ಬರೆದಿದ್ದಾರೆ ಎಂದರು. ವಿಷಯಗಳನ್ನು ಅರಿತು, ಸಮಾಜದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು, ವಿವಿಧ ಜನಾಂಗದವರೊಂದಿಗೆ ಬೆರೆತು, ಸ್ವಂತ ಆಚಾರ ವಿಚಾರ ಕಲಿತು ಬರೆದ ಹಾಗಿದೆ ಎಂದು ಮಾಣಿಪ್ಪಾಡಿ ಷರಾ ಬರೆದರು.

ಭಾರತ ಸಿಂಧುರಶ್ಮಿಯಂತಹ ಕಾದಂಬರಿ ಯನ್ನು ಓದಿಬಿಡಬಹುದು. ಅದನ್ನು ನಮ್ಮದಾಗಿಸಿಕೊಳ್ಳುವುದು ಕಷ್ಟದ ಕೆಲಸ. ಆ ಕೆಲಸ ಸುಪ್ರೀತ್ ಮಾಡಿದ್ದಾರೆ ಎಂದು ಬಿ.ಸುರೇಶ್ ಹೇಳಿದರು. ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ತಮ್ಮ ವೃತ್ತಿ ಜೀವನದ ಕೆಲವು ಘಟನೆ ಪ್ರಸ್ತಾಪಿಸಿದರು. ವೈಷ್ಣವ್ ತಂಡದ ಹಾಡುಗಾರಿಕೆ ಕಾರ್ಯಕ್ರಮಕ್ಕೆ ಕಳೆಗಟ್ಟಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com