ರೈತರಿಂದ ಇಂದು ಪ್ರತಿಭಟನಾ ರ್ಯಾಲಿ

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘದ ನೇತೃತ್ವದಲ್ಲಿ ಸುಮಾರು 10 ಸಾವಿರ ರೈತರು ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಬೆಳಗ್ಗೆ 10.30ಕ್ಕೆ ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘದ ನೇತೃತ್ವದಲ್ಲಿ ಸುಮಾರು 10 ಸಾವಿರ ರೈತರು ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಬೆಳಗ್ಗೆ 10.30ಕ್ಕೆ ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ.

ಈ ವೇಳೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯೆತೆ ಇದ್ದು ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಕೋರಿದ್ದಾರೆ. ಪರ್ಯಾಯ ಮಾರ್ಗ ಬಳಸಿ ರಾಜಾಜಿನಗರ, ಜಯನಗರ, ಮಲ್ಲೇಶ್ವರಂ ಕಡೆಗಳಿಂದ ಆನಂದ ರಾವ್ ಮೇಲ್ಸೆತುವೆ ಮೂಲಕ ವಿವಿಧ ಸ್ಥಳಗಳಿಗೆ ಹೋಗುವವರು ಮಲ್ಲೇಶ್ವರ ಲಿಂಕ್ ರಸ್ತೆ ಮೂಲಕ ಶೇಷಾದ್ರಿಪುರ- ಬಸವೇಶ್ವರ ವೃತ್ತ ತಲುಪಿ ಮುಂದಕ್ಕೆ ಚಲಿಸಬಹುದು.

ಮಾಗಡಿ ರಸ್ತೆ, ಓಕಳಿಪುರಂ ಜಂಕ್ಷನ್ ಕಡೆಯಿಂದ ಬಂದು ಆನಂದರಾವ್ ಮೇಲ್ಸೆತುವೆ ಮೂಲಕ ವಿವಿಧ ಸ್ಥಳಗಳಿಗೆ ಹೋಗುವವರು ಮಾಗಡಿ ರಸ್ತೆ ಹುಣಸೇಮರ ಜಂಕ್ಷನ್‍ನಲ್ಲಿ ಬಲ ತಿರುವು ಪಡೆದು ಬಿನ್ನಿಮಿಲ್, ಶಿರಸಿ ಸರ್ಕಲ್, ಸಿಟಿ ಮಾರುಕಟ್ಟೆ, ಟೌನ್ ಹಾಲ್ ಮೂಲಕ ತೆರಳಬಹುದು.

ಬಸವೇಶ್ವರ ಸರ್ಕಲ್‍ನಿಂದ ರೇಸ್‍ಕೋರ್ಸ್ ರಸ್ತೆ ಮೂಲಕ ಆನಂದರಾವ್ ವೃತ್ತದ ಮೂಲಕ ನಗರದ ವಿವಿಧ ಸ್ಥಳಗಳಿಗೆ ಹೋಗುವವರು ಬಸವೇಶ್ವರ ವೃತ್ತದ ಬಳಿ ಬಲತಿರುವು ಪಡೆದು ಪ್ಯಾಲೇಸ್ ರಸ್ತೆ, ಕೆಆರ್ ವೃತ್ತದ ಮೂಲಕ ತೆರಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com