ಹೈ ನ್ಯಾಯಮೂರ್ತಿ ಅಧಿಕಾರ ಸ್ವೀಕಾರ

ಕರ್ನಾಟಕ ಹೈಕೋರ್ಟ್ ನೂತನ ನ್ಯಾಯಮೂರ್ತಿಯಾಗಿ ರಾಘವೇಂದ್ರ ಸಿಂಗ್ ಚೌವ್ಹಾಣ್ ಮಂಗಳವಾರ ಅಧಿಕಾರ ಸ್ವೀಕರಿಸಿದರು...
ಕರ್ನಾಟಕ ಹೈಕೋರ್ಟ್ ನೂತನ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌವ್ಹಾಣ್ ಮತ್ತು ರಾಜ್ಯಪಾಲ ವಜುಭಾಯ್ ವಾಲಾ
ಕರ್ನಾಟಕ ಹೈಕೋರ್ಟ್ ನೂತನ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌವ್ಹಾಣ್ ಮತ್ತು ರಾಜ್ಯಪಾಲ ವಜುಭಾಯ್ ವಾಲಾ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನೂತನ ನ್ಯಾಯಮೂರ್ತಿಯಾಗಿ ರಾಘವೇಂದ್ರ ಸಿಂಗ್ ಚೌವ್ಹಾಣ್ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ರಾಜಭವನದ ಬ್ವಾಕೆಂಟ್ ಹಾಲ್‍ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ, ನ್ಯಾ.ರಾಘವೇಂದ್ರ ಚವ್ಹಾಣ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ನ್ಯಾ.ಚವ್ಹಾಣ್ ಅವರನ್ನು ಕರ್ನಾಟಕ ಹೈಕೋರ್ಟ್‍ಗೆ ವರ್ಗಾವಣೆ ಮಾಡಿ ಇತ್ತೀಚೆಗಷ್ಟೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮತ್ತು ಹೈಕೋರ್ಟ್ ಕೆಲ ನ್ಯಾಯಮೂರ್ತಿಗಳು ಉಪಸ್ಥಿತಿರಿದ್ದರು. ತದನಂತರ ಹೈಕೋರ್ಟ್‍ನಲ್ಲಿ ನ್ಯಾ.ಚಹ್ವಾಣ್ ಅವರ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯನ್ಯಾಯಮೂರ್ತಿ ವಘೇಲಾ ಅವರಿಗೆ ನ್ಯಾಯಮೂರ್ತಿಗಳ ಸಮುದಾಯದ ಪರವಾಗಿ ಸ್ವಾಗತ ಕೋರಿದರು. ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷ ಪಿ.ಪಿ. ಹೆಗ್ಡೆ ಅವರು ವಕೀಲರ ಸಮುದಾಯದ ಪರವಾಗಿ ಸ್ವಾಗತ ಕೋರಿದರು.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ನ್ಯಾ. ವಿನೀತ್ ಸರಣ್ ಅವರು ರಾಜ್ಯ ಹೈಕೋರ್ಟ್‍ಗೆ ವರ್ಗಾವಣೆಗೊಂಡಿದ್ದರು. ಇದೀಗ ನ್ಯಾ.ಚೌವ್ಹಾಣ್ ವರ್ಗಾವಣೆಯಿಂದ ರಾಜ್ಯ ಹೈಕೋರ್ಟ್ ಗೆ ಹೊರಗಿನಿಂದ ಇಬ್ಬರು ನ್ಯಾಯಮೂರ್ತಿಗಳು ಬಂದಂತಾಗಿದೆ. ನ್ಯಾ.ಚವ್ಹಾಣ್ 2005ರಲ್ಲಿ ರಾಜ್ಯಸ್ಥಾನ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದಿದ್ದರು. ಕ್ರಿಮಿನಲ್, ಸಾಂವಿಧಾನಿಕ ಹಾಗೂ ಸೇವಾ ಕಾನೂನಿನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ವಿವಾದಕ್ಕೀಡಾದ ರಾಜ್ಯಪಾಲರು: ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮದಲ್ಲಿ ಆರಂಭ ಮತ್ತು ಅಂತ್ಯದಲ್ಲಿ ರಾಷ್ಟ್ರಗೀತೆ ಹಾಡುವುದು ಪದ್ಧತಿ. ಆದರೆ, ರಾಷ್ಟ್ರಗೀತೆ ಹಾಡುವಾಗಲೇ ರಾಜ್ಯಪಾಲರು ಕಾರ್ಯಕ್ರಮದಿಂದ ನಿರ್ಗಮಿಸ ಹೊರಟಿದ್ದು ವಿವಾದಕ್ಕೆ ಕಾರಣವಾಗಿದೆ.

ಮಂಗಳವಾರ ನ್ಯಾ.ಚವ್ಹಾಣ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿದ ಬಳಿಕ ರಾಷ್ಟ್ರಗೀತೆ ಪ್ರಾರಂಭವಾಯಿತು. ಅಷ್ಟರಲ್ಲಿ ರಾಜ್ಯಪಾಲರು ವೇದಿಕೆಯ ಮೆಟ್ಟಿಲು ಇಳಿಯಲಾರಂಭಿಸಿದ್ದರು. ರಾಷ್ಟ್ರಗೀತೆ ಆರಂಭವಾಗಿದ್ದನ್ನು ಗ್ರಹಿಸದ ರಾಜ್ಯಪಾಲರು ನಡೆದುಹೋದರು. ಹಾಗೆ ಹೋಗುತ್ತಿದ್ದಂತೆ ಅವರಿಗೆ ರಾಷ್ಟ್ರಗೀತೆ ಹಾಡುತ್ತಿರುವುದು ಅರಿವಾಗಿದೆ. ತಕ್ಷಣ ಮರಳಿ ವೇದಿಕೆಗೆ ಆಗಮಿಸಿದ ಅವರು ರಾಷ್ಟ್ರಗೀತೆ ಪೂರ್ಣಗೊಳ್ಳುವವರೆಗೆ ನಿಂತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com