
ಬೆಂಗಳೂರು: ಮಾರ್ಚ್ 18ರಂದು ಮಾಲ್‍ಗೆ ಆಗಮಿಸುವ ಪ್ರತಿಯೊಬ್ಬ ಮಹಿಳೆಗೂ ಉಚಿತ ಆರೋಗ್ಯ ತಪಾಸಣೆ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ, ಫೋರಂ ಮಾಲ್, ಕೋರಮಂಗಲ, ಸಕ್ರ ಆಸ್ಪತ್ರೆಯೊಂದಿಗೆ ಕೈಜೋಡಿಸಿದೆ!
ವುಮೆನ್ ಓನ್ಲಿ ವೆಡ್ನೆಸ್‍ಡೇಸ್ (ಕೇವಲ ಮಹಿಳಯರಿಗಾಗಿ ಬುಧವಾರಗಳು) ಎಂಬ ಉಪಕ್ರಮದ ಭಾಗವಾಗಿ ಮಾಲ್, ಮಾರ್ಚ್ 18, ಬುಧವಾರದಂದು, ಸಕ್ರ ಆಸ್ಪತ್ರೆಯ ಆತಿಥ್ಯದಡಿ, ಮಾಲ್‍ಗೆ ಭೇಟಿ ನೀಡುವ ಪ್ರತಿಯೊಬ್ಬ ಮಹಿಳೆಗೂ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವ ಅವಕಾಶವನ್ನು ಒದಗಿಸಲಾಗಿದೆ.
ಬದಲಾಗುತ್ತಿರುವ ಜೀವನಶೈಲಿ, ಪ್ರತಿಯೊಬ್ಬರ ಆರೋಗ್ಯದ ಮೇಲೂ, ಅದರಲ್ಲಿಯೂ ವಿಶೇಷವಾಗಿ ಮಹಿಳೆಯರಲ್ಲಿ ದುಷ್ಪರಿಣಾಮಗಳನ್ನು ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ದಿ ಫೋರಂ ಮಾಲ್ ತನ್ನ ಕೊಡುಗೆಯನ್ನು ನೀಡುವುದಕ್ಕೆ ಆದ್ಯತೆ ನೀಡಿದೆ.
ಮಾಲ್ ಜೊತೆ ಕೈಜೋಡಿಸಿರುವ ಸಕ್ರ ಆಸ್ಪತ್ರೆ ಸಹ, ಪ್ಯಾಪ್‍ಸ್ಮಿಯರ್ ಹಾಗೂ ಮ್ಯಾಮ್ಮೊಗ್ರಾಂ ಪರೀಕ್ಷೆಗಳನ್ನು ಪಡೆಯಲು ಬಯಸುವ ಮಹಿಳೆಯರಿಗೆ 50% ರಿಯಾಯಿತಿ ವೋಚರ್‍ಗಳನ್ನು ಒದಗಿಸುತ್ತಿದೆ.
Advertisement