ಅಂತೂ ಸೆರೆಸಿಕ್ಕ ಮದ ಗಜೇಂದ್ರ

ಬಿಆರ್ ಟಿಯು ಕೆ.ಗುಡಿಯಲ್ಲಿ ಭಾನುವಾರ ಮಾವುತನನ್ನು ಕೊಂದು, ನಂತರ ಜತೆಗಾರನ ಆನೆ ಶ್ರೀರಾಮನನ್ನೂ ಹತ್ಯೆಗೈದು ಪರಾರಿಯಾಗಿದ್ದ ಮೈಸೂರು ದಸರೆಯ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚಾಮರಾಜನಗರ: ಬಿಆರ್ ಟಿಯು ಕೆ.ಗುಡಿಯಲ್ಲಿ ಭಾನುವಾರ ಮಾವುತನನ್ನು ಕೊಂದು, ನಂತರ ಜತೆಗಾರನ ಆನೆ ಶ್ರೀರಾಮನನ್ನೂ ಹತ್ಯೆಗೈದು ಪರಾರಿಯಾಗಿದ್ದ ಮೈಸೂರು ದಸರೆಯ ಪಟ್ಟದಾನೆ ಗಜೇಂದ್ರ ಮಂಗಳವಾರ ಕಾರ್ಯಾಚರಣೆ ವೇಳೆ ಸೆರೆ ಸಿಕ್ಕಿದ್ದಾನೆ.

ಸೋಮವಾರ ಬೆಳಗಿನಿಂದಲೇ 5 ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದವು. ಆದರೆ ಗಂಜೇಂದ್ರನ ಸುಳಿವು ಸಿಕ್ಕಿರಲಿಲ್ಲ. ಮಂಗಳವಾರ ಬಿಳಿಗಿರಿರಂಗನ ಬೆಟ್ಟದ ಮುತ್ತುಗದ ಗದ್ದೆ ಪೋಡಿನ ಹೆಬ್ಬಾವು ಅರೆ ಬಳಿ ಸುಮಾರು 11 ಗಂಟೆಗೆ ಗಜೇಂದ್ರ ತಂಡಕ್ಕೆ ಕಾಣಿಸಿಕೊಂಡಿದ್ದಾನೆ.

ನಂತರ ಆತನಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಮಾವುತನ ಸಹಾಯದಿಂದ ಕಾಡಿನಿಂದ ಹೊರತರಲಾಯಿತು.

ಅಲ್ಲಿಂದ ಲಾರಿ ಮೂಲಕ ಕೆ.ಗುಡಿ ಆನೆ ಶಿಬಿರಕ್ಕೆ ಸಾಗಿಸಲಾಗಿದೆ. ಮಾವುತನ ಸನ್ನೆಗೆ ಸ್ಪಂದಿಸುತ್ತಿದ್ದು, ಆತನ ವರ್ತನೆ ಮೇಲೆ ತೀವ್ರ ನಿಗಾ ಇಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com