
ಮಡಿಕೇರಿ: ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಸುತ್ತ ಸುತ್ತಿಕೊಂಡಿರುವ ಅನುಮಾನಗಳನ್ನು ಪರಿಹರಿಸಲು ಈ ಪ್ರಕರಣದ ತನಿಖೆಯನ್ನು ಸಿಬಿಐನಂಥ ಸ್ವತಂತ್ರ
ತನಿಖಾ ಸಂಸ್ಥೆಗೇ ಒಪ್ಪಿಸುವುದು ಸೂಕ್ತ ಎಂದು ಮಾಜಿ ಕಾನೂನು ಸಚಿವ ಎಂ.ಸಿ. ನಾಣಯ್ಯ ಸಲಹೆ ನೀಡಿದ್ದಾರೆ.
ನಿಗೂಢ ಸಾವಿನ ಪ್ರಕ ರಣ ಖಂಡಿಸಿ ರಾಜ್ಯದ ಜನ ಹೋರಾಟಕ್ಕೆ ಮುಂದಾಗಿರುವುದನ್ನು ಗಮನಿಸಿ ಭೂ ಮಾಫಿಯಾ, ಭೂಗತ ಲೋಕದ ಶಕ್ತಿಗಳನ್ನು ಸದೆಬಡಿಯಲು ಮುಂದಾಗಬೇಕು.
ಅಧಿಕಾರಿಯೊಬ್ಬರ ಸಾವಿನ ಸಂಬಂಧಿಸಿ ರಾಜ್ಯದ ಜನತೆ ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದಿರುವುದು 40 ವರ್ಷಗಳ ಇತಿಹಾಸದಲ್ಲಿ ತಾನು ಕಂಡಂತೆ ಇದೇ ಪ್ರಥಮ. ಜನಶಕ್ತಿಗೆ ಬೆಲೆ ನೀಡಿಯಾದರೂ ಸರ್ಕಾರ ಸ್ವತಂತ್ರ ಸಂಸ್ಥೆಗೆ ಪ್ರಕರಣ ನೀಡು ವುದು ಸೂಕ್ತ ಎಂದು ಸಲಹೆ ನೀಡಿದರು.
Advertisement