ಶಿವಮೊಗ್ಗ ನಗರಕ್ಕೆ ಬಂದ ಎರಡು ಸೊಳ್ಳೆ ಕೊಲ್ಲುವ ಸಾಧನಗಳು

ನಗರದಲ್ಲಿ ಸೊಳ್ಳೆ ಹಾವಳಿಗೆ ಕಡಿವಾಣ ಹಾಕಲು ಶಿವಮೊಗ್ಗ ನಗರ ಸಭೆ ಪ್ರಾಯೋಗಿಕವಾಗಿ ಎರಡು ಸೊಳ್ಳೆ ಕೊಲ್ಲುವ ಸಾಧನಗಳನ್ನು
ಸೊಳ್ಳೆ
ಸೊಳ್ಳೆ

ಶಿವಮೊಗ್ಗ: ನಗರದಲ್ಲಿ ಸೊಳ್ಳೆ ಹಾವಳಿಗೆ ಕಡಿವಾಣ ಹಾಕಲು ಶಿವಮೊಗ್ಗ ನಗರ ಸಭೆ ಪ್ರಾಯೋಗಿಕವಾಗಿ ಎರಡು ಸೊಳ್ಳೆ ಕೊಲ್ಲುವ ಸಾಧನಗಳನ್ನು ಪ್ರತಿಷ್ಟಾಪಿಸಿದೆ. ಬಲೆಯಂತೆ ಕೆಲಸ ಮಾಡುವ ಈ ಯಂತ್ರ ಸೊಳ್ಳೆಗಳನ್ನು ಆಕರ್ಷಿಸಿ ನಂತರ ಅವುಗಳನ್ನು ಕೊಲ್ಲುತ್ತದೆ.

ಈ ಸಾಧನಗಳು ಯಶಸ್ವಿಯಾದರೆ ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಮಲೇರಿಯಾ ರೋಗಗಳನ್ನು ತಡೆಯಲು ಸಹಕಾರಿಯಾಗಲಿವೆ.

ಸ್ವೀಡನ್ ನ ಈ ಸಾಧನಗಳು ಪುಣೆಯಲ್ಲಿ ಉತ್ಪಾದನೆಗೊಳ್ಳುತ್ತಿವೆ. ಕೆಲವು ಅನಿಲಗಳನ್ನು ಬಳಸಿ ಸೊಳ್ಳೆಗಳನ್ನು ಆಕರ್ಷಿಸಬಲ್ಲ ಸರಿಯಾದ ಉಷ್ಣಾಂಶವನ್ನು ಇವು ಸ್ಥಾಪಿಸುತ್ತವೆ. ಈ ಸಾಧನಗಳು ಯು ವಿ ಕಿರಣಗಳನ್ನು ಕೂಡ ಬಳಸುತ್ತವೆ. ಅಲ್ಲದೆ ಈ ಸಾಧನಗಳು ಮನುಷ್ಯನ ಮತ್ತು ಪ್ರಾಣಿಗಳ ಮೈವಾಸನೆಯನ್ನು ಸೂಸಿ ಸೊಳ್ಳೆಗಳನ್ನು ಆಕರ್ಷಿಸುತ್ತವೆ. ಸೊಳ್ಳೆಗಳು ಒಳಬಂದ ಮೇಲೆ ಅವುಗಳನ್ನು ಕೊಲ್ಲುತ್ತವೆ.

ಕಂಟ್ರಿ ಕ್ಲಬ್ಬಿನ ಪಕ್ಕದಲ್ಲಿ ಮತ್ತು ಆರ್ ಎಂ ಎಲ್ ಎಕ್ಸ್ಟೆಂಶನ್ ನಲ್ಲಿ ಎರಡು ಸಾಧನಗಳನ್ನು ನಗರಸಭೆ ಪ್ರತಿಷ್ಟಾಪಿಸಿದ್ದು , ಕಳೆದ ನಾಲ್ಕೈದು ದಿನಗಳಿಂದ ಸಾವಿರಾರು ಸೊಳ್ಳೆಗಳು ಈ ಸಾಧನಗಳಿಂದ ಸತ್ತಿವೆ ಎನ್ನಲಾಗಿದೆ.

೨೫ ಮೀಟರ್ ಗಳ ದೂರದವರೆಗೂ ಸೊಳ್ಳೆಗಳನ್ನು ಆಕರ್ಷಿಸುವ ಈ ಸಾಧನಕ್ಕೆ ನಿರಂತರ ವಿದ್ಯುತ್ ಅವಶ್ಯಕತೆ ಇದೆ. ಇದಕ್ಕೆ ಸೋಲಾರ್ ಪ್ಯಾನಲ್ ಕೂಡ ಅಳವಡಿಸಬಹುದಾಗಿದ್ದು, ಅದರ ಯೋಜನೆ ಕೂಡ ಚಿಂತನೆಯಲ್ಲಿದೆ.

ಭಾರಿ ಮಳೆ ಮತ್ತು ಬಿಸಿಲನ್ನು ಈ ಸಾಧನಗಳು ತಡೆದುಕೊಳ್ಳಬಲ್ಲವು. ೧೦ ವರ್ಷದವರೆಗೂ ಬಾಳಿಕೆ ಬರುವ ಈ ಸಾಧನಗಳ ವಿವಿಧ ಪ್ರಭೇದಗಳು ೭೫ ಸಾವಿರದಿಂದ ಮೂರು ಲಕ್ಷದವರೆಗೆ ಬೆಲೆ ಬಾಳುತ್ತವೆ. ಪ್ರಾಯೋಗಿಕವಾಗಿ ಇವುಗಳನ್ನು ಪ್ರತಿಷ್ಟಾಪನೆ ಮಾಡಿದ್ದೇವೆ ಎಂದು ತಿಳಿಸಿದ ಮುನ್ಸಿಪಲ್ ಕಮಿಷನರ್ ಎ ಆರ್ ರವಿ, ಇವುಗಳ ಸಾಮರ್ಥ್ಯ ಪರೀಕ್ಷಿಸಿ ಹೆಚ್ಚಿನ ಸಾಧನಗಳನ್ನು ಪ್ರತಿಷ್ಠಾಪಿಸುವ ಚಿಂತನೆ ಮಾಡಲಾಗುವುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com