ಪತ್ನಿ, ಮಗಳನ್ನೇ ಕೊಂದನಾ ಪತಿ?

ಕಾಮಾಕ್ಷಿಪಾಳ್ಯ ಸಮೀಪದ ಹೊಯ್ಸಳನಗರದಲ್ಲಿ ಗೃಹಿಣಿ ಹಾಗೂ 11 ತಿಂಗಳ ಹೆಣ್ಣು ಮಗು ಕತ್ತು ಹಿಸುಕಿ ಅಮಾನುಷವಾಗಿ ಕೊಲೆ ಮಾಡಲಾಗಿದೆ...
ಮೃತ ಯುವತಿ ಪಲ್ಲವಿ ಹಾಗೂ ಆರೋಪಿ ಬಾಲಾಜಿ
ಮೃತ ಯುವತಿ ಪಲ್ಲವಿ ಹಾಗೂ ಆರೋಪಿ ಬಾಲಾಜಿ
Updated on

ಬೆಂಗಳೂರು: ಕಾಮಾಕ್ಷಿಪಾಳ್ಯ ಸಮೀಪದ ಹೊಯ್ಸಳನಗರದಲ್ಲಿ ಗೃಹಿಣಿ ಹಾಗೂ 11 ತಿಂಗಳ ಹೆಣ್ಣು ಮಗು ಕತ್ತು ಹಿಸುಕಿ ಅಮಾನುಷವಾಗಿ ಕೊಲೆ ಮಾಡಲಾಗಿದೆ.

ಇಲ್ಲಿನ 5ನೇ ಕ್ರಾಸ್‍ನಲ್ಲಿ ವಾಸವಿದ್ದ ಬಾಲಾಜಿ ಎಂಬುವರ ಪತ್ನಿ ಪಲ್ಲವಿ(27) ಹಾಗೂ 11 ತಿಂಗಳ ಮೃತರು. ಗಂಡ ಬಾಲಾಜಿ(30) ಮೇಲೆ ಅನುಮಾನ ವ್ಯಕ್ತವಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರದ ಮೂಲದ ಪಲ್ಲವಿಗೆ ಎರಡೂವರೆ ವರ್ಷದ ಹಿಂದೆ ಬಾಲಾಜಿ ಜತೆ ಮದುವೆಯಾಗಿತ್ತು. ಜೀವನ್‍ಭಿಮಾನಗರದ ಖಾಸಗಿ ಕಂಪನಿಯಲ್ಲಿ ಬಾಲಾಜಿ ಉದ್ಯೋಗಿಯಾಗಿದ್ದು, ದಂಪತಿ 11 ತಿಂಗಳ ಮಗು ಜತೆಗೆ ಹೊಯ್ಸಳ ನಗರದಲ್ಲಿ ವಾಸವಿದ್ದರು. ಬೇರೆಡೆ ನೆಲೆಸಿದ್ದ ದಂಪತಿ 2 ತಿಂಗಳ ಹಿಂದಷ್ಟೇ ಹೊಯ್ಸಳನಗರಕ್ಕೆ ಸ್ಥಳಾಂತರವಾಗಿದ್ದರು. ಗುರುವಾರ ಮಧ್ಯಾಹ್ನ ಮನಗೆ ನುಗ್ಗಿದ ಪಾತಕಿ ಮೊದಲು ಪಲ್ಲವಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮಗುವನ್ನು ಕೊಲೆ ಮಾಡಿ ಶೌಚಗೃಹದ ಬಕೆಟ್‍ನಲ್ಲಿದ್ದ ನೀರಿನಲ್ಲಿ ಮುಳುಗಿಸಿ ಅಮಾನವೀಯವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com