
ಬೆಂಗಳೂರು: ನಗರದ ಎಸ್ಟೀಮ್ ಮಾಲ್ ಬಳಿ ಸ್ಕೈ ವಾಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಲ್‍ಗೆ ಒಳಪಟ್ಟ ಜಾಗವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ವಶಕ್ಕೆ ಪಡೆಯಲು ನಿರ್ಧರಿಸಿದೆ.
ಇದು ರಾಷ್ಟ್ರೀಯ ಹೆದ್ದಾರಿ ಪ್ರಾ„ಕಾರ ಮತ್ತು ಮಾಲ್‍ಗೆ ಸಂಬಂಧಿಸಿದ ವ್ಯಾಜ್ಯವಾಗಿದ್ದು, ಅನಗತ್ಯವಾಗಿ ಬಿಬಿಎಂಪಿಯನ್ನು ಪ್ರತಿವಾದಿ ಮಾಡಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‍ಗೆ ಆಕ್ಷೇಪ ಸಲ್ಲಿಸಿದೆ. ಕಳೆದ ತಿಂಗಳ 27ರಂದು ಸಂಭವಿಸಿದ್ದ ಭೀಕರ ಅಪಘಾತದ ನಂತರ ಎಸ್ಟೀಮ್ ಮಾಲ್ ಬಳಿ ಸ್ಕೈ ವಾಕ್ ನಿರ್ಮಾಣ ಮಾಡಲು ಉದ್ದೇಶಿಸಲಾತ್ತು. ಈ ಸಂಬಂಧ ಎಸ್ಟೀಮ್ ಮಾಲ್‍ಗೆ ಒಳಪಟ್ಟ ಪ್ರದೇಶವನ್ನು ವಶಕ್ಕೆ ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಎಸ್ಟೀಮ್ ಮಾಲ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಈ ಪ್ರಕರಣದಲ್ಲಿ ಬಿಬಿಎಂಪಿಯನ್ನೂ ಸುಖಾಸುಮ್ಮನೆ ಪ್ರತಿವಾದಿಯನ್ನಾಗಿ ಮಾಡಿದೆ. ಇದರಲ್ಲಿ ಬಿಬಿಎಂಪಿಯ ಪಾತ್ರವೇ ಇಲ್ಲ. ಆದ್ದರಿಂದ ಪಾಲಿಕೆಯನ್ನು ಪ್ರತಿವಾದಿಯಿಂದ ಕೈಬಿಡಬೇಕು ಎಂದು ಪಾಲಿಕೆ ಆಕ್ಷೇಪಣೆಯಲ್ಲಿ ತಿಳಿಸಿದೆ.
Advertisement