ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ

ಪ್ರತಿ ವಿದ್ಯಾರ್ಥಿಗೂ ಶಿಕ್ಷಣ ನೀಡುವುದು ರಾಜ್ಯ ಸರ್ಕಾರದ ಜವಬ್ದಾರಿ. ಶಿಕ್ಷಣ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ರಾಜ್ಯದಲ್ಲಿನ ಎಲ್ಲಾ ಶಾಲೆಗಳನ್ನು ರಾಷ್ಟ್ರೀಕರಣಗೊಳಿಸಿ ಉಚಿತ ಶಿಕ್ಷಣ ನೀಡುವುದು ಉತ್ತಮ ಎಂದು ಹೈಕೋರ್ಟ್ ಸರ್ಕಾರಕ್ಕೆ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಪ್ರತಿ ವಿದ್ಯಾರ್ಥಿಗೂ ಶಿಕ್ಷಣ ನೀಡುವುದು ರಾಜ್ಯ ಸರ್ಕಾರದ ಜವಬ್ದಾರಿ. ಶಿಕ್ಷಣ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ರಾಜ್ಯದಲ್ಲಿನ ಎಲ್ಲಾ ಶಾಲೆಗಳನ್ನು ರಾಷ್ಟ್ರೀಕರಣಗೊಳಿಸಿ ಉಚಿತ ಶಿಕ್ಷಣ ನೀಡುವುದು ಉತ್ತಮ ಎಂದು ಹೈಕೋರ್ಟ್ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದೆ.

ಐಸಿಎಸ್‍ಸಿ, ಸಿಬಿಎಸ್‍ಸಿ ಶಾಲೆಗಳನ್ನು ಶಿಕ್ಷಣ ಹಕ್ಕು ಕಾಯ್ದೆ (ಆರ್‍ಟಿಇ) ವ್ಯಾಪ್ತಿಯಿಂದ ಹೊರಗಿಟ್ಟು ಶಾಲೆಗಳು ಮಕ್ಕಳಿಂದ ಹೆಚ್ಚು ಶುಲ್ಕ ಪಡೆಯುತ್ತಿವೆ ಎಂದು ಆರೋಪಿಸಿ
ಸರ್ವೋದಯ ಶಾಲೆ ಮಕ್ಕಳು ಮತ್ತು ಪೋಷಕರ ಕಲ್ಯಾಣ ಸಮಿತಿ ಸೇರಿ 31 ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ.ಕೆ.ಎಲ್. ಮಂಜುನಾಥ್, ನ್ಯಾ.ರಾಘವೇಂದ್ರ ಸಿಂಗ್ ಚೌವ್ಹಾಣ್ ಅವರಿದ್ದ ವಿಭಾಗೀಯ ಪೀಠ, `ಮುಂದಿನ ವಿಚಾರಣೆ ವೇಳೆಗೆ ಶುಲ್ಕಕ್ಕೆ ಸಂಬಂಧಸಿದಂತೆ ಮಾಹಿತಿ ನೀಡಲು ಖುದ್ದು ಶಿಕ್ಷಣ ಇಲಾಖೆ ಆಯುಕ್ತರು ಹೈಕೋರ್ಟ್‍ಗೆ ಹಾಜರಾ ಗಬೇಕು' ಎಂದು ಸೂಚಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, `ಸಿಬಿಎಸ್‍ಸಿ, ಐಸಿಎಸ್‍ಸಿ ಶಾಲೆ ಶುಲ್ಕ ಹೆಚ್ಚಿಸಿವೆ. ನಿಯಮ ಪ್ರಕಾರ ಶಿಕ್ಷಕರ ವೇತನದ ಪೈಕಿ ಶೇ.30ರಷ್ಟು ಮಾತ್ರ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸಬೇಕು. ಶಿಕ್ಷಕರಿಗೆ ಮಾಸಿಕ ರು.13,600 ವೇತನ ನೀಡಲಾಗುತ್ತಿದೆ. ಆ ಪ್ರಕಾರ ಕಡಿಮೆ ಶುಲ್ಕವನ್ನು ವಿಧಿಸಬೇಕು. ವಿದ್ಯಾರ್ಥಿಗಳ ಪೋಷಕರಿಗೆ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿವೆ ಎಂದು ಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, `ಶಿಕ್ಷಕರಿಗೆ ಮಾಸಿಕ ರು.13600 ವೇತನ ನೀಡುವುದು ಸೂಕ್ತವಲ್ಲ. ಈಗಿನ ಜೀವನ ನಿರ್ವಹಣೆ ವೆಚ್ಚ ಎಷ್ಟಿದೆ ಎಂಬುದು ತಿಳಿದಿದೆಯೇ? ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಇಂಥ ಪರಿಸ್ತಿತಿಯಲ್ಲಿ ಇಷ್ಟು ಕಡಿಮೆ ಸಂಬಳ ನೀಡಿದರೆ ಶಿಕ್ಷಕರು ತಮ್ಮ ಜೀವನವನ್ನು ಹೇಗೆ ನಿರ್ವಹಿಸುತ್ತಾರೆ?' ಎಂದು ಸರ್ಕಾರಿ, ಸಿಬಿಎಸ್‍ಸಿ ಶಾಲಾ ಪರ ವಕೀಲರನ್ನು ಪ್ರಶ್ನಿಸಿದೆ. ಶುಲ್ಕಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೈಕೋರ್ಟ್‍ಗೆ ಖುದ್ದು ಹಾಜರಾಗಬೇಕೆಂದು ಸೂಚಿಸಿ ವಿಚಾರಣೆ ಮಾ.30ಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com