ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಮಾಟಮಂತ್ರ ಅಡ್ಡಿ!

ಗೌರಿಬಿದನೂರಿನಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಿದ್ದ ಸ್ಥಳದಲ್ಲಿ ಮಾಟ ಮಂತ್ರಕ್ಕೆ ಬಳಸುವ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಿದ್ದ ಸ್ಥಳದಲ್ಲಿ ಮಾಟ ಮಂತ್ರಕ್ಕೆ ಬಳಸುವ ಹಲವು ವಸ್ತುಗಳು ಪತ್ತೆಯಾಗಿವೆ.

ಶಂಕುಸ್ಥಾಪನೆಗಾಗಿ ನಿರ್ಮಿಸಿದ್ದ ವೇದಿಕೆ ಪಕ್ಕದಲ್ಲಿಯೇ ಮಂತ್ರಿಸಿ ಅರಿಶಿಣದ ಬಟ್ಟೆ ಸುತ್ತಿದ ತೆಂಗಿನಕಾಯಿ, ದಾರ ಸುತ್ತಿದ ಹಲವು ಬರಣಿಗಳು ಮತ್ತು ಮೂಳೆಗಳು ಕಂಡು ಬಂದವು, ಇವನ್ನು ಕಂಡ ನಾಗಿರಿಕರು ಆ ಮಾರ್ಗದಲ್ಲಿ ಸಂಚರಿಸದೇ, ಪರ್ಯಾಯ ಮಾರ್ಗದಲ್ಲಿ ಸಂಚರಿಸಿದರು.
ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಬಿರುಗಾಳಇ ಬಂದು ವೇದಿಕೆ ಕುಸಿದದ್ದು ಇನ್ನಷ್ಟು ಚರ್ಚೆಗೆ ಕಾರಣವಾಯಿತು.

ಪೆಂಡಾಲ್ ಕುಸಿತ
ಶನಿವಾರ ಗೌರಿಬಿದನೂರಿನಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ನಂತರ ನಡೆದ ಬಹಿರಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ತೀವ್ರ ಬಿರುಗಾಳಿ ಎದ್ದು, ಸಭೆಯಲ್ಲಿ ಜನರು ಕೂರಲು ಹಾಕಿದ್ದ ಪೆಂಡಾಲ್ ಗಾಳಿಗೆ ಮೇಲೆ ಹಾರಿ ಜನರ ಮೇಲೆ ಬಿದ್ದಿತು.
ಇದರಿಂದ ಸಿಎಂ ಭಾಷಣ ಕೇಳುತ್ತಿದ್ದ ಸಭಿಕರಲ್ಲಿ ಏಕಾಏಕಿ ಗೊಂದಲ ಆರಂಭವಾಯಿತು. ಮೇಲಕ್ಕೆ ಹಾರಿ ಬಿದ್ದ ಪೆಂಡಾಲ್ ಮತ್ತು ಅದಕ್ಕೆ ಅಳವಡಿಸಿದ್ದ ಕಬ್ಬಿಣದ ಕಂಬಗಳು ಕುಳಿತಿದ್ದ ಜನರ ಮೇಲೆ ಬಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾದವು.

ಗೊಂದಲ್ಲಿದ್ದ ಜನರನ್ನು ಸಮಾಧಾನ ಪಡಿಸಲು ಸ್ವತಃ ಮುಖ್ಯಮಂತ್ರಿಗಳೇ ಧ್ವನಿವರ್ಧಕದಲ್ಲಿ ಕೂಗಿ ಹೇಳಿದರೂ, ಜನರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ, ಇದರಿಂದ ಸುತ್ತಲೂ ಇದ್ದ ಪೊಲೀಸರಿಗೆ ಜನರನ್ನು ಸಮಾಧಾನ ಪಡಿಸಲು ತಿಳಿಸಿದರು. ಆದರೆ ಗಾಬರಿಯಲ್ಲಿದ್ದ ಜನರು ಸಿಎಂ ಭಾಷಣದ ಮಧ್ಯದಲ್ಲಿಯೇ ಮನೆ ಹಾದಿ ಹಿಡಿದರು. ಇದರಿಂದ ಸ್ವಲ್ಪಮಟ್ಟಿಗೆ ಬೇಸರಗೊಂಡ ಮುಖ್ಯಮಂತ್ರಿಗಳು ಭಾಷಣ ಮೊಟಕುಗೊಳಿಸಿ ವೇದಿಕೆಯಿಂದ ಕೆಳಗಿಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com